Union Minister Prahlad Joshi:ಪಿಎಫ್ಐ ಬ್ಯಾನ್ ಮಾಡಿದನ್ನ ಸಿದ್ದರಾಮಯ್ಯ ವಿರೋಧ ಮಾಡಿದ್ರೆ ಜನ ಒದಿತಾರೆ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ಹುಬ್ಬಳ್ಳಿ :Union Minister Prahlad Joshi: ಸಿದ್ದರಾಮಯ್ಯನವರು ಪಿಏಫ್ಐ ಬ್ಯಾನ್ ಮಾಡಿದ್ದನ್ನ ವಿರೋಧ ಮಾಡಿದ್ರೆ ಜನ ಒದೀತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ‌. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಅವರ ಪಕ್ಷಕ್ಕೆ ಪಿಏಫ್‌ಐ ಬ್ಯಾನ್ ಮಾಡಿದ್ದರಿಂದ ಕುದಿಯುತ್ತಿದೆ.ಪಿಏಫ್ಐ ಬ್ಯಾನ್ ಆಗಿದ್ದನ್ನ ಅವರಿಂದ ವಿರೋದ ಮಾಡಲಿಕ್ಕೆ ಆಗುತ್ತಿಲ್ಲ.ಅದಕ್ಕೆ ಅದನ್ನ ಆರ್‌ಎಸ್‌ಎಸ್ ಜೊತೆ ಲಿಂಕ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂದ್ರೆ ನಾವೇ ಆರ್‌ಎಸ್‌ಎಸ್, ದೇಶದ ಪ್ರಧಾನಿ ಮೋದಿ ಕೂಡ ಆರ್‌ಎಸ್‌ಎಸ್‌ನಿಂದ ಬಂದವರು ಇದು ಸತ್ಯ ಎಂದು ಹೇಳಿದ ಪ್ರಹ್ಲಾದ ಜೋಷಿ, PFI ಗೆ ಸಪೋರ್ಟ್ ಮಾಡುವ ರೀತಿಯಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆನ್ನುತ್ತಿದ್ದಾರೆ.ಸಿದ್ದರಾಮಯ್ಯನವರಿಗೆ ಪಿಏಫ್ಐ ಮೇಲೆ ಪ್ರೀತಿ ಇದೆ.ಸಿದ್ದರಾಮಯ್ಯ ತುಷ್ಠಿಕರ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೋಷಿ ಆರೋಪಿಸಿದರು.

ನಾವು ಈ ದೇಶದ ಯಾವುದೇ ಜನಾಂಗವನ್ನ ಮತಗಳ ಬ್ಯಾಂಕ್ ಎಂದು ಬಿಜೆಪಿ ನೋಡಿಲ್ಲ.ನಾವು ಎಂದು ಈ ದೇಶದಲ್ಲಿರುವ ಎಲ್ಲಾ ಅಲ್ಪಸಂಖ್ಯಾತರು ಕೆಟ್ಟವರೆಂದು ಹೇಳಿಲ್ಲಾ.ಯಾರು ಉಗ್ರವಾದಿ ಚುಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೋ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೆವೆ.ಸಿದ್ದರಾಮಯ್ಯನವರು ಮತಗಳ ಬ್ಯಾಂಕ್ ಪಾಲಿಟಿಕ್ಸ್ ಭಯದಿಂದಾಗಿ ಆರ್‌ಎಸ್‌ಎಸ್ ವಿರೋಧ ಮಾಡಬೇಕೆನ್ನುತ್ತಿದ್ದಾರೆ ಎಂದು ಜೋಷಿ ಹೇಳಿದರು.

ಇನ್ನು ಪಿಎಫ್ಐ ಸಂಘಟನೆ ನಿಷೇಧ ಮಾಡಿರುವ ಬಗ್ಗೆ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದಲ್ಲಿಯು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ ಜೋಷಿ ಕಳೆದ ಹಲವು ವರ್ಷಗಳಿಂದ ಪಿಎಫ್ಐ ಹಾಗೂ ಇತರ ಸಂಘಟನೆಗಳು ಕೆಲಸ ಮಾಡ್ತಿವೆ. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರಿಗೂ ಕೋರ್ಟು ಕಚೇರಿಗೆ ಹೋಗಲು ಅವಕಾಶವಿದೆ.ಅಲ್ಲಿ ಸರಿಯಾದ ಸಾಕ್ಷ್ಯ, ವಿಚಾರ ಕೊಡಬೇಕಾಗುತ್ತದೆ. ಈ ಸಂಘಟನೆಗಳನ್ನು ನಿಷೇಧ ಮಾಡಬೇಕಾದ್ರೂ ಎಲ್ಲವನ್ನು ತಿಳಿದುಕೊಂಡು, ಸಾಕ್ಷ್ಯಗಳನ್ನು ಸಂಗ್ರಹಿಸಿ ನಿಷೇಧ ಮಾಡಿದ್ದೇವೆ ಎಂದರು.

ಇನ್ನು ಸಿದ್ದರಾಮಯ್ಯ ಆಂಡ್ ಕಂಪನಿಗೆ ನೇರವಾಗಿ ಪಿಎಫ್ಐ ಸಂಘಟನೆ ನಿಷೇಧ ಮಾಡಿರೋದನ್ನು ಖಂಡಿಸೋ ತಾಕತ್ತಿಲ್ಲ.ಪರೋಕ್ಷವಾಗಿ ಪಿಎಫ್ಐ ನಿಷೇಧ ಮಾಡಿದ್ದನ್ನು ಆರ್ ಎಸ್‌ಎಸ್ ಗೆ ಹೋಲಿಸಿ ಆರ್ ಎಸ್ ಎಸ್ ನಿಷೇಧಿಸಿ ಅಂತಿದ್ದಾರೆ.ನೇರವಾಗಿ ವಿರೋಧ ಮಾಡಿದರೆ ಅವರಿಗೆ ಜನರು ಪಾಠ ಕಲಿಸ್ತಾರೆ ಎಂದು ಜೋಷಿ ಪುನರುಚ್ಚರಿಸಿದರು.ಯಾಕಂದ್ರೆ ಸಾಕ್ಷ್ಯಗಳು, ಪುರಾವೆಗಳು, ಅವರು ಯಾವ ರೀತಿ ದೇಶವನ್ನು ಇಸ್ಲಾಮಿಕ ಭಯೋತ್ಪಾದನೆಯತ್ತ ದೂಡಬೇಕು ಅನ್ನೋದು ಸಾಕ್ಷಿಸಮೇತ ಗೊತ್ತಾಗಿದೆ ಎಂದರು.

ಆರ್ ಎಸ್ ಎಸ್ ಗೆ ಇನ್ನೆರಡು ವರ್ಷ ಕಳೆದರೆ ನೂರು ವರ್ಷ ತುಂಬಲಿದೆ ಎಂದ ಜೋಷಿ ಆರ್ ಎಸ್ ಎಸ್ ದೇಶಕ್ಕಾಗಿ ಪ್ರಾಣ ಕೊಡುವವರನ್ನು, ಅನೇಕ ದೇಶ ಭಕ್ತರನ್ನು, ದೇಶ ಪ್ರೇಮಿಗಳನ್ನು ತಯಾರು ಮಾಡುವ ಸಂಘಟನೆ.ಸಿದ್ದರಾಮಯ್ಯ ಆಂಡ್ ಕಂಪನಿ ಮಾಡ್ತಿರೋದು ತುಷ್ಠೀಕರಣ ರಾಜಕಾರಣದ ಪರಾಕಾಷ್ಠೆ ಎಂದರು. ಇನ್ನು ಎಸ್ ಡಿಪಿಐ ನಿಷೇಧ ಮಾಡಬೇಕು ಅನ್ನೋ ಕೂಗಿನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಎಸ್ ಡಿಪಿಐ ಯಾಕೆ ನಿಷೇಧ ಆಗಿಲ್ಲ ಅಂದ್ರೆ ಅದೊಂದು ನೋಂದಾಯಿತ ರಾಜಕೀಯ ಪಕ್ಷ.ಅವರು ಕೂಡ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿದರೆ ಅವರ ಮೇಲೂ ಕಟ್ಟುನಿಟ್ಟಿನ‌ ಕ್ರಮ ಆಗುತ್ತದೆ ಎಂದರು. ಎಲ್ಲದಕ್ಕೂ ಅದರದೆ ಆದ ಪ್ರಕ್ರಿಯೆ ಇರುತ್ತದೆ. ಎಸ್ ಡಿಪಿಐಗೂ ಯಾವಾಗ ಏನು ಮಾಡಬೇಕು, ಅವರು ಮಾಡ್ತಿರೋದನ್ನು ಸರಕಾರ ಗಮನಿಸ್ತಾ ಇರುತ್ತೆ. ಸಾಕ್ಷ್ಯಗಳು ಬಹಳ ಮುಖ್ಯ.
ಹೀಗಾಗಿ ಹಂತ ಹಂತವಾಗಿ ಮಾಡುತ್ತದೆ ಎಂದರು.

ಇದನ್ನು ಓದಿ : Rohit Sharma breaks MS Dhoni record : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

ಇದನ್ನೂ ಓದಿ : KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

Opposition leader Siddaramaiah and Union Minister Prahlad Joshi are outraged

Comments are closed.