Siddaramaiah : ಆರ್​​ಎಸ್​ಎಸ್ ಬ್ಯಾನ್​ ಮಾಡಿ ಎನ್ನುವ ಸಿದ್ದರಾಮಯ್ಯ ಸೂಕ್ತ ಕಾರಣ ನೀಡಲಿ : ಹೆಚ್​ಡಿಕೆ

ಕೋಲಾರ : Siddaramaiah : ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ ವಿಚಾರದಲ್ಲಿ ಯಾವ್ಯಾವ ನಾಯಕರು ಯಾವ ಹೇಳಿಕೆ ಕೊಡುತ್ತಾರೆ ಅನ್ನೋದನ್ನ ಎಲ್ಲರೂ ಗಮನಿಸುತ್ತಿದ್ದಾರೆ ಎಂದು ಮಾಜಿ‌ ಸಿ.ಎಂ‌ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ‌. ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ರಾಜ್ಯ ಸರ್ಕಾರ ಕೂಡ ಮಧ್ಯ ರಾತ್ರಿ ಕಾರ್ಯಾಚರಣೆ ಮಾಡುತ್ತಿದೆ. ಪಿಎಫ್ಐ ಸೇರಿ ಆರೇಳು ಸಂಘಟನೆಗಳ ಬ್ಯಾನ್ ಮಾಡಿದೆ. ಸಂಘಟನೆಗಳ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ವಾಸ್ತವಾಂಶ ಕುರಿತು ಜನರ ಮುಂದಿಡಬೇಕಿದೆ ಎಂದರು.

ಬಂಧನ ಹಾಗೂ ಬ್ಯಾನ್ ಮಾಡಿದ್ದೇ ಆದಲಿ ಶಾಂತಿ ನೆಲೆಸುತ್ತೆ ಅನ್ನುವ‌ ನಂಬಿಕೆ ನನಗೆ ಇಲ್ಲ ಎಂದು ಎಚ್.ಡಿ‌ ಕುಮಾರಸ್ವಾಮಿ ಸರ್ಕಾರದ ತೀರ್ಮಾನಗಳು ಸಮಾಜದಲ್ಲಿ ಎಲ್ಲರಿಗೂ ತಿಳಿಸಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಶಾಂತಿ,ಸುವ್ಯವಸ್ಥೆ ಕದಡುವ ಎಲ್ಲಾ ವಾತಾವರಣ ಮೂಡಲಿದೆ.ಗುಜರಾತ್ ನಲ್ಲಿ ಒಂದು ಸಂಘಟನೆ ನೀಡಿದ ಆದಾರದ ಮೇಲೆ ಕ್ರಮ ನಡೆಯುತ್ತಿದೆ ಎಂದು‌ ಆರೋಪಿಸಿದರು. 800 ಸಾವಿರ ವರ್ಷಗಳ ಕಾಲ ಆಳಿದ ಹಿಂದು ರಾಷ್ಟ್ರವನ್ನು ಇಸ್ಲಾಂ ರಾಜ್ಯ ಮಾಡಲು ಆಗುವುದಿಲ್ಲ. ಜನ್ರಲ್ಲಿ ಭಯ, ಆತಂಕದ ವಾತಾವರಣ ಮೂಡುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.

ಆರ್ ಎಸ್ಎಸ್ ಬ್ಯಾನ್ ಮಾಡಿ ಎಂಬ ಸಿದ್ದು ಹೇಳಿಕೆ ಬಗ್ಗೆಯು ಪ್ರತಿಕ್ರಿಯೆ ನೀಡಿದ ಎಚ್.ಡಿ ಕುಮಾರಸ್ವಾಮಿ ಯಾಕೆ ಬ್ಯಾನ್ ಎಂದು ಹೇಳಬೇಕಲ್ಲ ಎಂದರು. ಈ ಹಿಂದೆ ಬ್ಯಾನ್ ಮಾಡಿದ್ದು ಸಹ ಇದೆ. ಆದ್ರೆ ಯಾವ ಕಾರಣಕ್ಕೆ ಬ್ಯಾನ್ ಮಾಡಬೇಕು ಅನ್ನೋದನ್ನು ಸಹ ಜನರ ಮುಂದೆ‌ ಹೇಳಬೇಕಾಗಿದೆ ಎಂದರು. ಸರ್ಕಾರ ಒಂದು ಸಂಘಟನೆಗೆ ತ್ರಿಶೂಲ, ಲಾಠಿ ಕೊಟ್ಟು ಪ್ರೋತ್ಸಾಹ ಮಾಡುತ್ತೀರಿ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಅಂತೀರಾ‌ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಹೊರ ದೇಶದ ಹಣ ತಂದು ಭಯೋತ್ಪಾದನೆ ಮಾಡುವವರನ್ನ ಬಲಿ ಹಾಕಲು ನಮ್ಮದು ಯಾವುದೆ ತಕರಾರು ಇಲ್ಲ ಎಂದ ಕುಮಾರಸ್ವಾಮಿ, ಕಳೆದ 3 ವರ್ಷದಲ್ಲಿ 17 ಸಾವಿರ ಕೋಟಿ ಮಳೆಗೆ ಮನೆಗಳು ಅನಾಹುತ ಆಗಿದೆ ಎನ್ನಲಾಗಿದೆ. ಅದರ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕಾಗಿದೆ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು.

ಇದನ್ನು ಓದಿ : KL Rahul Latest Record : 11 ರಾಷ್ಟ್ರಗಳ ವಿರುದ್ಧ ಟಿ20 ಅರ್ಧಶತಕ; ಕ್ರಿಕೆಟ್ ಚರಿತ್ರೆಯಲ್ಲೇ ಅಪರೂಪದ ದಾಖಲೆ ಬರೆದ ಕೆ.ಎಲ್ ರಾಹುಲ್

ಇದನ್ನೂ ಓದಿ : Jasprit Bumrah out of T20 World Cup : ಟಿ20 ವಿಶ್ವಕಪ್’ನಿಂದ ಜಸ್‌ಪ್ರೀತ್ ಬುಮ್ರಾ ಔಟ್, ಭಾರತಕ್ಕೆ ಸಿಡಿಲಾಘಾತ

Let Siddaramaiah give proper reason for banning RSS: HDK

Comments are closed.