banning PFI :ನವರಾತ್ರಿಯಲ್ಲಿ ಪಿಎಫ್​ಐ ಬ್ಯಾನ್​ ಮಾಡುವ ಮೂಲಕ ಕೇಂದ್ರದಿಂದ ಉತ್ತಮ ನಿರ್ಧಾರ : ಬಿ.ವೈ ವಿಜಯೇಂದ್ರ

ಕಲಬುರಗಿ : banning PFI : ನವರಾತ್ರಿಯ ಸಂಧರ್ಬದಲ್ಲಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡುವ ಮೂಲಕ ಕೇಂದ್ರ ಸರ್ಕಾರ ಅತ್ಯತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.‌ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಿಂದು ಕಾರ್ಯಕರ್ತರ ಹತ್ಯೆ ಜೊತೆಗೆ ದೇಶದ್ರೋಹಿ ಕೆಲಸವನ್ನು ಪಿಎಫ್ಐ ಸಂಘಟನೆ ಮಾಡುತಿತ್ತು. ಕೋಮು ಸೌಹಾರ್ದತೆ ಕದಡುವ ಕೆಲಸವೂ ಆಗುತಿತ್ತು. ಪಿಎಫ್ಐ ಬ್ಯಾನ್ ನಿಂದ ದೇಶದ ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ವಿಜಯೇಂದ್ರ ಹೇಳಿದರು.

ಪಿಎಫ್ಐ ಸಂಘಟನೆಯ ಮೇಲೆ ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಪಿಎಫ್ಐ ಕಾಂಗ್ರೆಸ್ ಪಕ್ಷದ ಪಾಪದ ಕೂಸು ಇದನ್ನ ಸದೆ ಬಡಿಯುವಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ ಎಂದರು. ಕಾಂಗ್ರೆಸ್ ಈಗಲಾದ್ರು ತಮ್ಮ ತಪ್ಪನ್ನ ಅರಿವು ಮಾಡಿಕೊಂಡು ಇದಕ್ಕೆ ಬೆಂಬಲಿಸ್ತಾರೆ ಅಂತಾ ಅಂದುಕೊಂಡಿದ್ದೆನೆ ಎಂದು ವಿಜಯೇಂದ್ರ ಹೇಳಿದರು.

ಇನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಆರ್ ಎಸ್ಎಸ್ ಬ್ಯಾನ್ ಮಾಡೋ ಬಗ್ಗೆ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ ಆರ್ ಎಸ್ಎಸ್ ಬ್ಯಾನ್ ಮಾಡಬೇಕು ಅಂತಾ ಹೇಳಿಕೆ ಕೊಡ್ತಿರೋದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ ಎಸ್ಎಸ್ ದೇಶ ಭಕ್ತರು ಇರುವ ಸಂಘಟನೆ.ದೇಶದ ಒಳಿತಿಗಾಗಿ ಕೆಲಸ ಮಾಡ್ತಿರುವ ಸಂಘಟನೆ ಆರ್ ಎಸ್ಎಸ್ ಎಂದು ಹೇಳಿದ ವಿಜಯೇಂದ್ರ ಆರ್ ಎಸ್ಎಸ್ ಬ್ಯಾನ್ ಮಾಡಬೇಕು ಅನ್ನೋದನ್ನು ಯಾರು ಕೂಡ ಒಪ್ಪಿಕೊಳ್ಳೊಕೆ ಆಗಲ್ಲ.ಅಧಿಕಾರದಿಂದ ದೂರ ಉಳಿದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇಲ್ಲ ಸಲ್ಲದ ಆರೋಪ ಮಾಡ್ತಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನ ಬೆಂಬಲಿಸುವದರಲ್ಲಿ ಎರಡು ಮಾತಿಲ್ಲ ಎಂವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರು ಏನೆ ಬೊಬ್ಬೆ ಹೊಡೆದ್ರು ಕೂಡ ಬಿಜೆಪಿ ಅಧಿಕಾರಕ್ಕೆ ಬರೋದನ್ನು ಯಾರು ತಪ್ಪಿಸೋದಕ್ಕೆ ಆಗೋದಿಲ್ಲ. ಪೇ ಸಿಎಂ ಮೂಲಕ ಕಾಂಗ್ರೆಸ್ ಹೊಸ ತಂತ್ರಗಾರಿಕೆ ಮಾಡಿದ್ದಾರೆ. ಇದ್ರಿಂದ ಪ್ರಚಾರ ಸಿಕ್ಕಿದೆ ಅಂತಾ ಅಂದುಕೊಂಡಿದ್ದಾರೆ. ಆದ್ರೆ ಇದು ಕಾಂಗ್ರೆಸ್ ಗೆ ತಿರುಗುಬಾಣ ಆಗೋದು ಗ್ಯಾರಂಟಿ ಎಂದರು.

ರಾಹುಲ್ ಗಾಂಧಿ ಫ್ಲೆಕ್ಸ್ ಹರಿದು ಹಾಕಿದ ಪ್ರಕರಣ ಕುರಿತು ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿ ವೈ ವಿಜಯೇಂದ್ರ, ಕಾಂಗ್ರೆಸ್ ಪಕ್ಷದ ಪುಡಾರಿಗಳೇ ಯಾರೋ ಹರಿದು ಹಾಕಿರಬೇಕು. ಬಿಜೆಪಿಗೆ ಆ ರೀತಿಯ ಚೀಪ್ ಪಾಪ್ಯುಲಾರಿಟಿ ಯಾವುದು ಇಲ್ಲ. ಬ್ಯಾನರ್ ಹರಿದು ಹಾಕುವ ಪೋಸ್ಟರ್ ಹರಿದು ಹಾಕುವ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಡಿಕೆಶಿ ಹೇಳಿಕೆಗೆ ಕೌಂಟರ್ ನೀಡಿದರು. ಪಕ್ಷ ಕೊಟ್ಟ ಜವಾಬ್ದಾರಿಯಂತೆ ಕೆಲಸ ಮಾಡ್ತಿದ್ದೆನೆ ಎಂದ ವಿಜಯೇಂದ್ರ, ನಮ್ಮ ತಂದೆಯವರು ನನ್ನನ್ನ ಕ್ಯಾಬಿನೆಟ್ ತೆಗೆದುಕೊಳ್ಳುವ ಸಲುವಾಗಿ ಯಾವತ್ತು ಒತ್ತಡ ಹಾಕಿಲ್ಲ ಹಾಕೋದಿಲ್ಲ, ವಿಜಯೇಂದ್ರ ಮಂತ್ರಿ ಆಗೋದು ದೊಡ್ಡ ವಿಚಾರ ಅಲ್ಲ. ಯಡಿಯೂರಪ್ಪ ಅವರ ಮಗನ ಹಣೆಬರಹದಲ್ಲಿ ಏನು ಬರೆದಿದೆ ಅದನ್ನ ಯಾರು ತಪ್ಪಿಸೋಕೆ ಆಗೋದಿಲ್ಲ ಎಂದು ಇದೇ ಸಂದರ್ಭ ಹೇಳಿದರು.

ಇದನ್ನು ಓದಿ : Supreme Court :ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ವಿವಾಹಿತ ಮಹಿಳೆಯರಂತೆ ಅವಿವಾಹಿತ ಮಹಿಳೆಯರೂ ಅರ್ಹರು : ಸುಪ್ರೀಂ

ಇದನ್ನೂ ಓದಿ : Rohit Sharma breaks MS Dhoni record : ಧೋನಿ ದಾಖಲೆ ಮುರಿದ ರೋಹಿತ್, ಪಾಕ್ ರೆಕಾರ್ಡ್ ಸರಿಗಟ್ಟಿದ ಭಾರತ; ಒಂದೇ ಪಂದ್ಯದಲ್ಲಿ ಎರಡು ದಾಖಲೆ

Good decision by Center by banning PFI on Navratri: B.Y Vijayendra

Comments are closed.