PFI Ban in Karnataka : ಸದ್ಯದಲ್ಲೇ ನಿಷೇಧವಾಗುತ್ತಾ ಪಿಎಫ್ಐ : ಸಿಎಂ ಬೊಮ್ಮಾಯಿ ಕೊಟ್ರು ಸುಳಿವು

ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ರಾಜ್ಯದಲ್ಲಿ ಮತೀಯ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಚಿಂತನೆ ಮತ್ತೆ ಮುನ್ನಲೆಗೆ ಬಂದಿದೆ. ಹಲವು ನಾಯಕರು ಪಿಎಫ್ಐ (PFI Ban in Karnataka) ಸೇರಿದಂತೆ ಇತರ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದರು. ಈಗ ಈ ಒತ್ತಾಯಗಳಿಗೆ ಸರ್ಕಾರ ಅಸ್ತು ಎನ್ನುವ ಸಮಯ ಸನ್ನಿಹಿತವಾದಂತಿದ್ದು ಸಿಎಂ ಬೊಮ್ಮಾಯಿ ನಿಷೇಧದ ಸುಳಿವು ನೀಡಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ವರದಿಯನ್ನು ಆಧರಿಸಿ ಎಸ್ ಡಿ ಪಿ ಐ ಪಿಎಫ್ ಐ, ಸಿಎಫ್ ಐ ನಿಷೇಧಕ್ಕೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಎಲ್ಲ ಘಟನೆಗಳನ್ನ ಅದರ ಹಿಂದಿರುವ ಸಂಘಟನೆಗಳು, ಅವುಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಬಹಳ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆದ ಹಲವಾರು ಘಟನೆಗಳ ಮೇಲೆ ಗಮನ ಹರಿಸಲಾಗ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಶಾಂತಿ ಕದಡುವುದು ನಡೆದಿದೆ.ಮತೀಯ ದ್ವೇಷ ಬಿತ್ತುವಂಥದ್ದನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಎಚ್ಚರಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸಂಘಟನೆಗಳ ಬಗ್ಗೆ ಅವರ ಚಲನವಲನ, ಫಂಡಿಂಗ್ ಸೇರಿದಂತೆ ಸಮಗ್ರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ನೀಡ್ತಿರೋ ವರದಿಯ ಆಧಾರದ ಮೇಲೆ ಬರುವಂತಹ ದಿನದಲ್ಲಿ ಪಿಎಫ್ ಐ (PFI Ban in Karnataka) ಸೇರಿದಂತೆ ಇತರ ಸಂಘಟನೆಗಳ ನಿಷೇಧದ ಕುರಿತು ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಹಿಂದೆ ಪಿಎಫ್ಐ, ಎಸ್ಎಫ್ಐ (SFI) ಹಾಗೂ ಎಸ್ಡಿಪಿಐಯಂತಹ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಇಂತ ಸಾಮಾಜಿಕ ನೆಮ್ಮದಿ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಒತ್ತಡವೂ ವ್ಯಕ್ತವಾಗಿತ್ತು.

ಅಲ್ಲದೇ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ನಡೆದ ಬಳಿಕವಂತೂ ಈ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಒತ್ತಡ ಮತ್ತಷ್ಟು ಹೆಚ್ಚಿತ್ತು. ಇತ್ತೀಚಿಗೆ ಸಿಎಂ ಭೇಟಿ ಮಾಡಿದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಕೂಡ ಪಿಎಫ್ ಐ (PFI Ban in Karnataka ) ಸೇರಿದಂತೆ ಇತರ ಸಂಘಟನೆಗಳನ್ನು ತಕ್ಷಣವೇ ರಾಜ್ಯದಿಂದ ನಿಷೇಧಿಸ ಬೇಕೆಂದು ಆಗ್ರಹಿಸಿದ್ದರು. ಈ ಎಲ್ಲ ಆಗ್ರಹಗಳಿಗೆ ಮಣಿದಿರುವ ಸರ್ಕಾರ ಸದ್ಯ ಪಿಎಫ್ ಐ ಸಂಘಟನೆಗಳನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿದೆ ಎಂಬುದನ್ನು ಸ್ವತಃ ಸಿಎಂ‌‌ ಖಚಿತ ಪಡಿಸಿದ್ದು ಸದ್ಯದಲ್ಲೇ ನಿಷೇಧ ಆದೇಶ ಹೊರಬೀಳಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ವರದಿ ಕೇಳಿದ ಬಿಜೆಪಿ ಹೈಕಮಾಂಡ್

ಇದನ್ನೂ ಓದಿ : ಡಿ.ಕೆ.ಶಿವಕುಮಾರ್‌ ಪ್ರಭಾವ ತಗ್ಗಿಸಲು ಸಿದ್ದರಾಮಯ್ಯ ಪಾದಯಾತ್ರೆಗೆ ಬರ್ತಾರೆ : ಬಿಜೆಪಿ ಟ್ವೀಟ್ ಟಾಂಟ್

(PFI Ban in Karnataka, hint CM Basavaraj Bommai)

Comments are closed.