PM Modi in kalburgi: ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ : ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಕಲಬುರಗಿ: (PM Modi in kalburgi) ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರಿಗೆಗೆ ಇಂದು ಪ್ರಧಾನಿ ಮೋದಿ ಅವರು ಆಗಮಿಸಿದ್ದು, ಹಲವು ಕಾರ್ಯಕ್ರಮಗಳನ್ನು ನೆರವೇರಿಸಿಕೊಡಲಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಇಂದು ಬೃಹತ್‌ ಸಮಾವೇಶ ಆಯೋಜಿಸಲಾಗಿದ್ದು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿ, ಸುಮಾರು ಐವತ್ತು ಸಾವಿರ ಕುಟುಂಬಗಳಿಗೆ ಭೂಮಿಯ ಹಕ್ಕು ಪತ್ರ ನೀಡಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಮೋದಿ ಅವರು ಕಲಬುರಗಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೋದಿ ಅವರನ್ನು ಬರಮಾಡಿಕೊಂಡರು.

ಬೆಳಿಗ್ಗೆ 12 ಗಂಟೆಗೆ ನಾರಾಯಣ ಪುರ ಎಡದಂಡೆ ಕಾಲುವೆ ಜಾಗದ ವಿಸ್ತರಣೆ ನವೀಕರಣ ಹಾಗೂ ಆಧುನೀಕರಣ ಕಾಮಗಾರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ 1 ಗಂಟೆಗೆ ಜಲ್‌ ಜೀವನ್‌ ಮಿಷನ್‌ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸರತ್‌ ಚೆನ್ನೈ ಎಕ್ಸ್‌ ಪ್ರೆಸ್‌ ವೇ ಪ್ಯಾಕೇಜ್‌ ಮೂರನೇ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ನಂತರ ಅಲ್ಲಿಂದ 1:10 ಕ್ಕೆ ಹೆಲಿಪ್ಯಾಡ್‌ ಮೂಲಕ ಹೊರಟು ಕಲ್ಬುರ್ಗಿಗೆ ತಲುಪಲಿದ್ದಾರೆ. ಅಲ್ಲಿಂದ ನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳ ಶಿಲನ್ಯಾಸ ಮಾಡಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ತವರಲ್ಲಿ ಮೋದಿ ಅವರ ಕಹಳೆ ಮೊಳಗುತ್ತಿದೆ. ಬೆಳಿಗ್ಗೆಯಿಂದಲೇ ಮೋದಿ ಅವರು ಯಾದಗಿರಿಗೆ ಆಗಮಿಸಿ ಹಲವು ಕಾರ್ಯಕ್ರಮಹಗಳಿಗೆ ಚಾಲನೆ ನೀಡಿದ್ದು, ಇದೀಗ ಕಲ್ಬುರ್ಗಿಗೆ ಮೋದಿ ಆಗಮಿಸಲಿದ್ದಾರೆ. ಇಲ್ಲೂ ಕೂಡ ಸುಮಾರು ಐವತ್ತು ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಿದ್ದಾರೆ.

ಇದನ್ನೂ ಓದಿ : Dharma dangal in kadri: ಕರಾವಳಿಯಲ್ಲಿ ಮುಂದುವರಿದ ಧರ್ಮ ದಂಗಲ್:‌ ಕದ್ರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

ಇದನ್ನೂ ಓದಿ : Police Arrests Roosters : ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ ಪೊಲೀಸರು

ಇದನ್ನೂ ಓದಿ : first covid Patient dies : ಕೋವಿಡ್ ಸೋಂಕಿಗೆ ಕರ್ನಾಟಕದಲ್ಲಿ ಈ ವರ್ಷದ ಮೊದಲ ಬಲಿ

PM Modi in Kalburgi: Arrival of Prime Minister Narendra Modi in Kalburgi: Launch of various programs

Comments are closed.