pramod muthalik : ಹಿಂದೂಗಳಿಗೆ ಸೇರಿದ ಒಂದಿಂಚು ಜಾಗವನ್ನೂ ಮುಸ್ಲಿಮರಿಗೆ ನೀಡುವುದಿಲ್ಲ : ಮುತಾಲಿಕ್​

ಬೆಳಗಾವಿ : pramod muthalik : ಪ್ರವಾದಿ ಮುಹಮ್ಮದ್​ ವಿರುದ್ಧ ಮಾತನಾಡಿದ ಬಿಜೆಪಿ ವಕ್ತಾರೆ ನೂಪುರ್​ ಶರ್ಮಾರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಿಜೆಪಿಯ ನಿರ್ಧಾರವನ್ನು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯು ಕೋಮು ಭಾವನೆ ಕದಡಿದ್ದಾರೆ ಎಂಬ ಕಾರಣವನ್ನು ನೀಡಿ ನೂಪುರ್ ಶರ್ಮಾರವನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.


ಹಿಂದೂ ಧರ್ಮಕ್ಕೆ ಮುಸ್ಲಿಮರು ಅಗೌರವ ತೋರಿದರೆ ಮುಸ್ಲಿಂ ರಾಷ್ಟ್ರಗಳು ಕ್ಷಮೆಯಾಚನೆ ಮಾಡುವುದಿಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದಂತಹ ದೇಶಗಳಲ್ಲಿ ಭಾರತೀಯರ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆಯೂ ಯಾರೂ ಮಾತನಾಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಮುಸ್ಲಿಂ ರಾಷ್ಟ್ರಗಳ ಒತ್ತಡಕ್ಕೆ ಮಣಿಯಬಾರದಿತ್ತು. ಬಿಜೆಪಿಯು ನೂಪುರ್​ ಶರ್ಮಾ ಪರವಾಗಿ ನಿಲ್ಲಬೇಕಿತ್ತು. ಅವರನ್ನು ಬಿಜೆಪಿಯು ಇನ್ನಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿ. ಮುಸ್ಲಿಂ ಒತ್ತಡಕ್ಕೆ ಮಣಿದು ಬಿಜೆಪಿಯು ಈ ರೀತಿ ಮಾಡುವುದು ಬೇಡ ಎಂದು ಹೇಳಿದ್ದಾರೆ.


ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಸರ್ಕಾರಿ ನೌಕರರು ಹಾಗೂ ಹಿಂದೂ ಶಿಕ್ಷಕರನ್ನು ಅಲ್ಲಿ ರಾಜಾರೋಷವಾಗಿ ಕೊಲೆ ಮಾಡಲಾಗುತ್ತಿದೆ. ಆದರೆ ಇವೆಲ್ಲವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ ಕಾಶ್ಮೀರದಲ್ಲಿರುವ ಹಿಂದೂಗಳಿಗೆ ಆತ್ಮ ರಕ್ಷಣೆಗೆ ಬಂದೂಕು ಬಳಕೆ ಮಾಡಲು ಕೇಂದ್ರ ಸರ್ಕಾರವು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು .


90 ಚದರ ಅಡಿ ಜಾಗಕ್ಕಾಗಿ ಹಿಂದೂಗಳು ಜಗಳ ಮಾಡುತ್ತಾರೆ ಎಂಬ ಮಾಜಿ ಶಾಸಕ ಫೀರೋಜ್​ ಸೇಠ್​ ಹೇಳಿಕೆಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ದೇವಸ್ಥಾನದ ಒಂದಿಂಚೂ ಜಾಗವನ್ನು ನಾವು ಬಿಟ್ಟುಕೊಡುವ ಮಾತೇ ಇಲ್ಲ. ಬೆಳಗಾವಿಯಲ್ಲಿರುವ ಶಾಹಿ ಮಸೀದಿ ಮಾತ್ರವಲ್ಲ. 30 ಸಾವಿರ ದೇವಸ್ಥಾನಗಳನ್ನು ಒಡೆದು ಇವರು ಕಟ್ಟಿಸಿರುವ ಮಸೀದಿಗಳು ಕಾನೂನು ಪ್ರಕಾರ ವಾಪಸ್​ ಪಡೆಯುತ್ತೇವೆ . ಫಿರೋಜ್​ ಸೇಠ್​ ಲಪಟಾಯಿಸಿರುವ ಜಾಗವನ್ನು ಆದಷ್ಟು ಬೇಗ ಬೆಳಗಾವಿ ಜನರಿಗೆ ಮರಳಿ ನೀಡಿ ಎಂದು ಟಾಂಗ್​ ನೀಡಿದರು.

ಇದನ್ನು ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

ಇದನ್ನೂ ಓದಿ : Teen Shot Mother :ಮೊಬೈಲ್​​ ಹುಚ್ಚಿಗೆ ತಾಯಿಯನ್ನೇ ಕೊಂದ ಬಾಲಕ

pramod muthalik suggests to provide guns to kashmiri pandits

Comments are closed.