Masturbation Breaks: ಸಿಬ್ಬಂದಿಗೆ ಕಚೇರಿಯಲ್ಲಿ ಹಸ್ತ ಮೈಥುನಕ್ಕೆ ವಿರಾಮ ನೀಡ್ತಿದ್ದಾರೆ ಈ ಬಾಸ್​

Masturbation Breaks :ನೀವು ಯಾವುದೇ ಕಚೇರಿಗಳಲ್ಲಿ ಕೆಲಸ ಮಾಡುವವರಾಗಿದ್ದರೆ ಅಲ್ಲಿ ಯಾವಾಗೆಲ್ಲ ವಿರಾಮ ನೀಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಸಾಮಾನ್ಯವಾಗಿ ಊಟಕ್ಕೆ ಸಂಜೆ ಟೀಗೆ ವಿರಾಮವನ್ನು ನೀಡುತ್ತಾರೆ. ಕೆಲವೊಂದು ಕಡೆಗಳಲ್ಲಿ ಜಿಮ್​ ಮಾಡೋದಕ್ಕೂ ವಿರಾಮ ಇರುತ್ತದೆ. ಆದರೆ ಎಂದಾದರೂ ಯಾವುದಾದರೂ ಆಫೀಸಿನಲ್ಲಿ ಹಸ್ತ ಮೈಥುನ ಮಾಡಿಕೊಳ್ಳಲು ವಿರಾಮ ನೀಡಿದ್ದನ್ನು ನೋಡಿದ್ದೀರೇ..? ಈ ರೀತಿಯಾಗಿ ಸಿಬ್ಬಂದಿಯ ಬಗ್ಗೆ ಕಾಳಜಿ ವಹಿಸುವ ಬಾಸ್​ ಕೂಡ ಈ ಜಗತ್ತಿನಲ್ಲಿದ್ದಾರೆ ಎಂದರೆ ನೀವು ನಂಬಲೇಬೇಕು.

ನೀಲಿ ಚಿತ್ರಗಳ ನಿರ್ದೇಶಕಿಯಾಗಿರುವ ಎರಿಕಾ ಲಸ್ಟ್​​ ತನ್ನ ಸಿಬ್ಬಂದಿಗೆ ಹಸ್ತ ಮೈಥುನ ಮಾಡಿಕೊಳ್ಳಲು ಪ್ರತಿ ದಿನ ಅರ್ಧ ಗಂಟೆ ವಿರಾಮವನ್ನು ನೀಡುತ್ತಾರಂತೆ. ಈ ರೀತಿ ಮಾಡುವುದರಿಂದ ತನ್ನ ಸಿಬ್ಬಂದಿಗೆ ಕೆಲ ಕಾಲ ನಿರಾಳ ಉಂಟಾಗುತ್ತದೆ ಎನ್ನುವುದು ಎರಿಕಾ ಲಸ್ಟ್​ ಉದ್ದೇಶವಾಗಿದೆ. ಕಳೆದೊಂದು ವರ್ಷದಿಂದ ಎರಿಕಾ ಲಸ್ಟ್​ ತನ್ನ ಸಿಬ್ಬಂದಿಗೆ ಇಂತಹದ್ದೊಂದು ವಿರಾಮವನ್ನು ನೀಡುತ್ತಿದ್ದಾರೆ.

ಎರಿಕಾ ಲಸ್ಟ್​ ಕಳೆದೊಂದು ವರ್ಷದಿಂದ ಇಂತಹ ಪಾಲಿಸಿಯನ್ನು ಯಶಸ್ವಿಯಾಗಿ ನಡೆಸಿದ ಬಳಿಕ ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರಿದು ಹಸ್ತ ಮೈಥುನದ ಜೊತೆಯಲ್ಲಿ ತನ್ನ ಸಿಬ್ಬಂದಿಗೆ ಸೆಕ್ಸ್​ ಟಾಯ್​ಗಳನ್ನು ಕೊಡಿಸುವುದಾಗಿಯೂ ಘೋಷಣೆ ಮಾಡಿದ್ದಾರೆ. ಸಿಬ್ಬಂದಿಗೆ ಈ ರೀತಿಯಾಗಿ ವಿರಾಮ ನೀಡುವ ವಿಚಾರವಾಗಿ ಮಾತನಾಡಿದ ಎರಿಕಾ ಲಸ್ಟ್​ ನಾನು ನನ್ನ ಸಿಬ್ಬಂದಿಯನ್ನು ಗೌರವಿಸುತ್ತೇನೆ. ಹೀಗಾಗಿ ನಾನು ಕೆಲಸದ ಸ್ಥಳದಲ್ಲಿ ಹೆಚ್ಚಿನ ಚಟುವಟಿಕೆ ಇರಬೇಕು. ಸಿಬ್ಬಂದಿ ಯಾವುದೇ ಒತ್ತಡದಿಂದ ಇರಬಾರದು ಎಂದು ಈ ರೀತಿ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಎರಿಕಾ ಲಸ್ಟ್​ ಬರೆದುಕೊಂಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ನಾನು ನನ್ನ ಸಿಬ್ಬಂದಿಗೆ 30 ನಿಮಿಷ ಪ್ರತಿ ದಿನ ಹಸ್ತ ಮೈಥುನ ಮಾಡಿಕೊಳ್ಳು ವಿರಾಮ ನೀಡಲು ಆರಂಭಿಸಿದೆ ಎಂಬುದು ನಿಮಗೆ ನೆನಪಿದ್ದರಿಬಹುದು. ಇದೀಗ ಈ ಪಾಲಿಸಿಯನ್ನು ಇನ್ನಷ್ಟು ನವೀಕರಿಸಲು ನಿರ್ಧರಿಸಿದ್ದೇವೆ. ನಮ್ಮ ಸಿಬ್ಬಂದಿಗೆ ನಾನು ಸೆಕ್ಸ್​ ಟಾಯ್​ಗಳನ್ನು ನೀಡಲು ನಿರ್ಧರಿಸಿದ್ದೇನೆ ಎಂಧು ಹೇಳಿದರು.

ಇದನ್ನು ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

ಇದನ್ನೂ ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

Boss Of The Year Employer Gives Staff Masturbation Breaks As Part Of Special Perks At Work

Comments are closed.