Praveen’s murder : ಕನ್ಹಯ್ಯ ಲಾಲ್​ ಪರ ಪೋಸ್ಟ್​ ಹಾಕಿದ್ದೇ ಪ್ರವೀಣ್​ ಪಾಲಿಗೆ ಮಾರಕವಾಯ್ತಾ: ಮನೆ ಕಟ್ಟಿಸಬೇಕಿದ್ದ ಜಾಗದಲ್ಲಿ ಅಂತ್ಯಕ್ರಿಯೆ

ಮಂಗಳೂರು : Kanhaiya Lal led to Praveen’s murder : ದೇಶದಲ್ಲಿ ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಸಾವು ನೋವಿನ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಸಾಕಷ್ಟು ಆತಂಕಕ್ಕೆದೂಡಿದೆ. ಅಂದು ಶರತ್​ ಮಡಿವಾಳ ಹತ್ಯೆ, ಮೊನ್ನೆ ಮೊನ್ನೆ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಹಾಗೂ ಇಂದು ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣಗಳು ಜನರನ್ನು ಹಿಂದೂ ಪರ ಸಂಘಟನೆಗಳತ್ತ ಧ್ವನಿ ಎತ್ತಲು ಹೆದರುವಂತೆ ಮಾಡಿದೆ. ಹಿಂದೂ ಪರ ಸಂಘಟನೆಗಳ ಕಾರ್ಯದಲ್ಲಿ ಸಕ್ರಿಯನಾಗಿದ್ದ ಪ್ರವೀಣ್​ ನೆಟ್ಟೂರು ರಾತ್ರಿ ತಮ್ಮ ಕೋಳಿ ಅಂಗಡಿಯನ್ನು ಬಂದ್​ ಮಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್​ ಶರ್ಮಾ ಪರ ಪೋಸ್ಟ್​ ಮಾಡಿ ಟೇಲರ್​ ಕನ್ಹಯ್ಯ ಲಾಲ್​ ಕೊಲೆಯಾಗಿದ್ದರು. ಕನ್ಹಯ್ಯ ಲಾಲ್​ ಅಂಗಡಿಗೆ ಹಾಡ ಹಗಲೇ ನುಗ್ಗಿದ ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯ ಲಾಲ್​ರನ್ನು ಸೀಳಿದ್ದರು. ಈ ಪ್ರಕರಣದ ಬಳಿಕ ಪ್ರವೀಣ್​ ನೆಟ್ಟಾರು ಸೋಶಿಯಲ್​ ಮೀಡಿಯಾದಲ್ಲಿ ಕನ್ಹಯ್ಯಲಾಲ್​ ಪರವಾಗಿ ಪೋಸ್ಟ್​ ಶೇರ್​ ಮಾಡಿದ್ದರು. ಈ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿತ್ತು. ಹೀಗಾಗಿ ಇದೇ ಕಾರಣಕ್ಕೆ ಕನ್ಹಯ್ಯ ಲಾಲ್​ ಮಾದರಿಯಲ್ಲಿ ಪ್ರವೀಣ್​ ನೆಟ್ಟಾರುರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಯ್ತಾ ಎಂಬ ಅನುಮಾನ ಮೂಡಿದೆ.

ಪ್ರವೀಣ್​ ನೆಟ್ಟಾರು ಮೃತದೇಹವನ್ನು ಬೆಳ್ಳಾರೆಯ ಬಸ್​ ನಿಲ್ದಾಣದ ಸಮೀಪದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪ್ರವೀಣ್​ ನೆಟ್ಟಾರು ಅಂತಿಮ ದರ್ಶನಕ್ಕೆ ಜನಸ್ತೋಮವೇ ನೆರೆದಿತ್ತು. ಇದಾದ ಬಳಿಕ ಪ್ರವೀಣ್​ ನೆಟ್ಟಾರು ಮೃತದೇಹವನ್ನು ಸುಳ್ಯ ತಾಲೂಕಿನ ನೆಟ್ಟೂರು ಗ್ರಾಮದಲ್ಲಿರುವ ಅವರ ನಿವಾಸದ ಸಮೀಪದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಇದೇ ಜಾಗದಲ್ಲಿ ಪ್ರವೀಣ್​ ಕನಸಿನ ಮನೆಯನ್ನು ನಿರ್ಮಿಸುವ ಆಸೆಯನ್ನು ಹೊಂದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಈ ಜಾಗದಲ್ಲಿ ಅಡಿಪಾಯ ಕೂಡ ಹಾಕುವವರಿದ್ದರು. ಆದರೆ ವಿಧಿಯಾಟ ಮತ್ತೊಂದೇ ಇತ್ತು .ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪ್ರವೀಣ್​ ಬಲಿಯಾಗಿದ್ದಾರೆ.

ಇದನ್ನು ಓದಿ : Praveen Nettaru funeral : ಪಂಚಭೂತಗಳಲ್ಲಿ ಪ್ರವೀಣ್​ ನೆಟ್ಟಾರು ಲೀನ : ಕೇಸರಿ ಕಾರ್ಯಕರ್ತನಿಗೆ ಕಣ್ಣೀರ ವಿದಾಯ

ಇದನ್ನೂ ಓದಿ : bjp leader murder case : ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರು ಹತ್ಯೆ ಪ್ರಕರಣ : ಸುಳ್ಯ, ಕಡಬ , ಪುತ್ತೂರು ತಾಲೂಕು ಬಂದ್​

Posting for Kanhaiya Lal led to Praveen’s murder

Comments are closed.