Raid on PFI and SDPI:ಹುಬ್ಬಳ್ಳಿಯಲ್ಲೂ ಪಿಎಫ್​ಐ ಹಾಗೂ ಎಸ್​ಡಿಪಿಐ ಸಂಘಟನೆ ಮೇಲೆ ದಾಳಿ : ಓರ್ವ ಎಸ್​ಡಿಪಿಐ ಮುಖಂಡ ವಶಕ್ಕೆ

ಧಾರವಾಡ : Raid on PFI and SDPI : ದೇಶಾದ್ಯಂತ ಬೆಳ್ಳಂ ಬೆಳಗ್ಗೆ ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರ ನಿವಾಸದ ಮೇಲೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಎನ್​ಐಎ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಮುಂದಾಗಿದ್ದ ಪಿಎಫ್​ಐ ಸಂಘಟನೆಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಪಡೆದ ಬೆನ್ನಲ್ಲೇ ಇಂದು ಪೊಲೀಸರು ಪಿಎಫ್​ಐ ಹಾಗೂ ಎಸ್​ಡಿಪಿಐ ಸಂಘಟನೆಗಳ ಮೇಲೆ ದಾಳಿ ನಡೆಸಿದ್ದಾರೆ.


ಇಂದು ರಾಜ್ಯಾದ್ಯಂತ ಪಿಎಫ್​ಐ ಹಾಗೂ ಎಸ್​​ಡಿಪಿಐ ಮುಖಂಡರ ನಿವಾಸದ ಮೇಲೆ ದಾಳಿ ನಡೆದಿದೆ. ಇದರಲ್ಲಿ ಧಾರವಾಡದಲ್ಲಿ 10ಕ್ಕೂ ಅಧಿಕ ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ಜಿಲ್ಲೆಯ ಹಳೇ ಹುಬ್ಬಳ್ಳಿಯ ಕಸಬಾ ಪೇಟೆ, ಕಲಘಟಗಿ , ಹುಬ್ಬಳ್ಳಿ ಗ್ರಾಮೀಣ ಹಾಗೂ ಧಾರವಾಡ ಗ್ರಾಮೀಣ ಭಾಗಗಳಲ್ಲಿದ್ದ ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರನ್ನು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯ ಅದರಗುಂಚಿ ಗ್ರಾಮದ ಅಬ್ಬಾಸ್​ ಅಲಿ ಮಂಟಗಣಿ ಎಂಬಾತನನ್ನು ಸಿಪಿಐ ರಮೇಶ್​ ಗೋಕಾಕ್​ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಸಿಆರ್ ಪಿಸಿ 107, 151 ಅಡಿಯಲ್ಲಿ ಅಬ್ಬಾಸ್​ ಅಲಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಇದರ ಜೊತೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಕಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಪಿಎಫ್​ಐ ಕಾರ್ಯಕರ್ತ ಸಿಕಂದರ್​ ಶಾಲಗಾರ್​​​ನನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.


ಇನ್ನು ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ಬಂಧನವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಪಿಎಫ್​​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಕೂಡ ನಿರ್ಮಾಣವಾಗಿದೆ.

ಇದನ್ನು ಓದಿ : Again Raid On PFI: ಸೇಡು ತೀರಿಸಿಕೊಳ್ಳಲು ಸ್ಕೆಚ್.. PFI ಮೇಲೆ ಮತ್ತೆ ರೇಡ್

ಇದನ್ನೂ ಓದಿ : India vs South Africa T20 Series : ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮೊದಲೇ ಭಾರತಕ್ಕೆ ಆಘಾತ; ಸ್ಟಾರ್ ಪ್ಲೇಯರ್ ಸರಣಿಯಿಂದಲೇ ಔಟ್

Raid on PFI and SDPI organization in Hubli too: One SDPI leader arrested

Comments are closed.