ಸೋಮವಾರ, ಏಪ್ರಿಲ್ 28, 2025
Homekarnatakaಒಂದೇ ಹೆಸರಲ್ಲಿ 2 ಸಂಸ್ಥೆ ನೋಂದಣಿ : ಉತ್ತರ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌...

ಒಂದೇ ಹೆಸರಲ್ಲಿ 2 ಸಂಸ್ಥೆ ನೋಂದಣಿ : ಉತ್ತರ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ನೋಂದಣಿ ರದ್ದು

- Advertisement -

ಕಾರವಾರ : ಒಂದೇ ಹೆಸರಿನಲ್ಲಿ ಎರಡು ಸಂಘಟನೆಗಳನ್ನು ನೋಂದಣಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ (Uttara Kannada District Amateur Kabaddi Association) ನೋಂದಣಿಯನ್ನು ಜಿಲ್ಲಾ ನೋಂದಣಾಧಿಕಾರಿಗಳು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣ ಸದ್ಯ ರಾಜ್ಯದಾದ್ಯಂತ ಬಾರೀ ಸದ್ದು ಮಾಡುತ್ತಿದೆ.

ಉತ್ತರ ಕನ್ನಡ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಈ ಹಿಂದೆಯೇ ನೋಂದಣಿಯಾಗಿತ್ತು. ಆದರೆ ಏಳು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಸಂಸ್ಥೆಯನ್ನು ಜಿಲ್ಲಾ ನೋಂದಣಾಧಿಕಾರಿಗಳು ನೋಂದಾಯಿಸಿಕೊಂಡಿದ್ದರು. ಎರಡೂ ಸಂಸ್ಥೆಗಳ ಹೆಸರು ಒಂದೇ ಇದ್ದು, ಜಿಲ್ಲಾ ಅನ್ನೋ ಪದದಲ್ಲಿ ಮಾತ್ರವೇ ವ್ಯತ್ಯಾಸವಿತ್ತು.

ಇದನ್ನೂ ಓದಿ : ಬಡವರಿಗೆ ಮನೆಗಳನ್ನು ನಿರ್ಮಿಸಿ ಮಾದರಿ ಆಯ್ತು ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಕಾರ್ಯ

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ದಾವೆ ಹೂಡಿದ್ದರು ವಾದ ವಿವಾದ ಆಲಿಸಿದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಉಪನಿಬಂಧಕರು ಉತ್ತರ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಷನ್ ನೋಂದಾವಣೆ ಯನ್ನು ರದ್ದುಗೊಳಿಸುವ ಮೂಲಕ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.

Registration of 2 organizations in same name Registration of Uttara Kannada District Amateur Kabaddi Association cancelled
Image Credit to Original Source

ಸಹಕಾರಿ ಸಂಘಗಳ ನೋಂದಾವಣಿ ಅಧಿನಿಯಮ 7ರ ಪ್ರಕಾರ ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಶಿಯೇಶನ್ ಎರಡನೇ ಸಂಘದ ನೋಂದಣಿ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದು, ವಾದ -ವಿವಾದವನ್ನ ಆಲಿಸಿದ ಉಪನಿಬಂಧಕರು ಏಳು ತಿಂಗಳ ನಂತರ ನೋಂದಾವಣೆಗೊಂಡ ಸಂಘವನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

ಸಹಕಾರಿ ಸಂಘಗಳು ಒಂದೇ ಹೆಸರಲ್ಲಿ ಸಾಕಷ್ಟು ನೋಂದಣಿ ಆಗಿದ್ದು, ಇದೀಗ ಉಪನಿಬಂಧಕರು ನೀಡಿರುವ ಈ ಆದೇಶ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೇ ಕಲಂ 7 ರ ಅಡಿಯಲ್ಲಿ ಒಂದೇ ಹೆಸರಿನ ಎರಡು ಸಂಸ್ಥೆಗಳ ನೋಂದಣಿಗೆ ಅವಕಾಶವಿಲ್ಲ ಎನ್ನುವುದನ್ನು ಒತ್ತಿ ಹೇಳಿದೆ.  ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಷನ್ ಅಧ್ಯಕ್ಷ ಮಂಜುನಾಥ ನಾಯ್ಕ್, ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ವಾಸು ಎಲ್ ನಾಯ್ಕ್, ಸಂಘಟನಾ ಕಾರ್ಯದರ್ಶಿ ಗಜ ನಾಯ್ಕ್ ಅವರು ಸಂಸ್ಥೆಯನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ : ಮೊಬೈಲ್​ ನಂಬರ್​​ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್​ ಗೊತ್ತೇ..?

ಉತ್ತರ ಕನ್ನಡ ಅಮೆಚೂರು ಕಬ್ಬಡಿ ಎಸೋಸಿಯೇಶನ್ ಪರವಾಗಿ ಐಪಿ ನ್ಯಾಯವಾದಿ ನವನೀತ್ ಡಿ. ಹಿ0ಗಾಣಿ ಮಂಗಳೂರು ಹಾಗೂ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ್ ಭಟ್ಕಳ ಕಾನೂನು ಸಲಹೆ ಸೂಚನೆಗಳನ್ನು ನೀಡಿದ್ದರು.

Registration of 2 organizations in same name : Registration of Uttara Kannada District Amateur Kabaddi Association cancelled

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular