Russian Ukraine Crisis : ಕರ್ನಾಟಕಕ್ಕೆ ವಾಪಾಸಾಗಬೇಕಾಗಿದೆ 236 ವಿದ್ಯಾರ್ಥಿಗಳು

ಬೆಂಗಳೂರು : ರಷ್ಯಾ- ಉಕ್ರೇನ್ ವಾರ್ (Russian Ukraine Crisis) ಪೀಡಿತ ಪ್ರದೇಶದಿಂದ ಸಾಕಷ್ಟು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಮನೆ ತಲುಪಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಉಕ್ರೇನ್ ಗಡಿ ಭಾಗಗಳಲ್ಲಿ ಏರ್ ಲಿಫ್ಟ್ ಗಾಗಿ ಕಾದಿದ್ದಾರೆ‌. ಈ ಮಧ್ಯೆ ಕರ್ನಾಟಕದ 236 ವಿದ್ಯಾರ್ಥಿಗಳು ಭಾರತಕ್ಕೆ ಬರಬೇಕಿದೆ ಎಂದು ಸರ್ಕಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಕ್ರೇನ್ ನಲ್ಲಿರುವ ಕರ್ನಾಟಕದ ಮಕ್ಕಳ ಸಂರಕ್ಷಣೆಗಾಗಿ ನಿಯೋಜನೆಗೊಂಡಿರುವ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಆಯುಕ್ತ ಹಾಗೂ ನೊಡೇಲ್ ಅಧಿಕಾರಿ ಮನೋಜ್ ರಾಜನ್ ಸುದ್ದಿಗೋಷ್ಠಿ ನಡೆಸಿದ್ದು ಇದುವರೆಗೂ ರಾಜ್ಯಸರ್ಕಾರ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರುವ ಜವಾಬ್ದಾರಿ ನಮಗೆ ವಹಿಸಿದ್ದರು. (Russian Ukraine Crisis ) ಆಫರೇಶನ್ ಗಂಗಾ ಕಾರ್ಯಾಚರಣೆ ವಿರುದ್ಧ ಇವರೆಗೆ ಒಟ್ಟು 47 ಬ್ಯಾಚ್ ಗಳು ಉಕ್ರೇನ್ ನಿಂದ ರಾಜ್ಯಕ್ಕೆ ವಾಪಸ್ ಆಗಿವದ. ಈ ಪೈಕಿ 7 ಮಂಬೈ, 40 ಬ್ಯಾಚ್ ಗಳು ದೆಹಲಿಗೆ ಬಂದಿದೆ. 448 ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದಿದ್ದಾರೆ. 76 ವಿದ್ಯಾರ್ಥಿಗಳು ಇವತ್ತು ದೆಹಲಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನ ಸೋಮವಾರ 9 ವಿಮಾನಗಳ ಮೂಲಕ ಭಾರತಕ್ಕೆ ವಿದ್ಯಾರ್ಥಿಗಳನ್ನು ಕರೆತರಲಾಗುತ್ತದೆ. ಇನ್ನು ರಾಜ್ಯಕ್ಕೆ ಒಟ್ಟು 236 ಕನ್ನಡಿಗರು ವಾಪಾಸ್ ಆಗಬೇಕಿದೆ ಎಂದು ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಸುಮಿ ಸಿಟಿಯಲ್ಲಿ 7 ಕನ್ನಡ ವಿದ್ಯಾರ್ಥಿಗಳು ಇರುವ ಬಗ್ಗೆ ಕಾಲ್ ಸೆಂಟರ್ ಗೆ ಮಾಹಿತಿ ಸಿಕ್ಕಿದೆ. ನಮಗೆ ಸಂಪರ್ಕಿಸಿದವರನ್ನು ಕರೆತರಲು ಪ್ರಯತ್ನ ಮಾಡಲಾಗುವುದು. ಸುಮಿ ನಗರದಲ್ಲಿ ಭಾರತೀಯರು ಐನೂರಕ್ಕೂ ಹೆಚ್ಚು ಇದ್ದಾರೆ ಎಂದು ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ.

ಇನ್ನು ಈಗಾಗಲೇ ರಷ್ಯಾ ಹಾಗೂ ಉಕ್ರೇನ್ ವಾರ್ ಅಂಗಳದಲ್ಲಿ ಸಾವನ್ನಪ್ಪಿದ ನವೀನ್ ಶವವನ್ನು ಭಾರತಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.‌ನಾವು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆ ಬಗ್ಗೆ ಮಾಹಿತಿ ನೀಡಿದ ತಕ್ಷಣ ನಾವು ಕೊಡ್ತೀವಿ.ಸುನಿ ನಗರದಲ್ಲಿ ಇನ್ನೂ ಸಂದಿಗ್ಧ ಪರಿಸ್ಥಿತಿಯಿದೆ. ಅಲ್ಲಿ ವಿದ್ಯಾರ್ಥಿಗಳು ಎಲ್ಲಿ ಉಳಿದಿದ್ದಾರೋ ಅಲ್ಲಿಯೇ ಇರಿ ಸದ್ಯ ಪರಿಸ್ಥಿತಿ ತಹಬದಿಗೆ ಬಂದ ಮೇಲೆ ಲಿಫ್ಟ್ ಮಾಡಲಾಗುವುದು ಎಂದು ಮನೋಜ್ ರಾಜನ್ ಮನವಿ ಮಾಡಿದ್ದಾರೆ. ಮನೋಕ್ ಕುಮಾರ್ ಮಾಹಿತಿ ಪ್ರಕಾರ ರಾಜ್ಯದ ಶೇಕಡಾ 70 ರಷ್ಟು ವಿದ್ಯಾರ್ಥಿಗಳನ್ನು ಕರೆತರಲಾಗಿದ್ದು, ಇನ್ನುಳಿದ ಮಕ್ಕಳನ್ನು ಶೀಘ್ರವೇ ಕರೆತರುವ ಪ್ರಯತ್ನ ಮಾಡಲಿದ್ದೇವೆ ಎಂದಿದ್ದಾರೆ .

ಇದನ್ನೂ ಓದಿ : ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ : ಕನಿಷ್ಠ 30 ಮಂದಿ ಸಾವು

ಇದನ್ನೂ ಓದಿ : 26 ಸಾವಿರ ಹ್ಯಾಕರ್‌ಗಳ ಐಟಿ ಆರ್ಮಿ ರೆಡಿ; ರಷ್ಯಾದ ವೆಬ್‌ಸೈಟ್‌ಗಳನ್ನು ನೆಲಕಚ್ಚಿಸಲು ಉಕ್ರೇನ್ ಪ್ಲಾನ್

( Russian Ukraine Crisis : 236 students need to return to Karnataka)

Comments are closed.