Shivamogga Airport ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿಮಾನ ನಿಲ್ದಾಣ 2023 ರಿಂದ ಆರಂಭ

ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿ(Smart City) ಮಾಡಲು ಹೊರಟಿರುವ ಸರ್ಕಾರ, ಅದಕ್ಕೆ ಬೇಕಾದ ವಾಣಿಜ್ಯ ಹಾಗೂ ನಾಗರೀಕ ವಿಮಾನ ನಿಲ್ದಾಣ (Shivamogga Airport) ನಿರ್ಮಿಸಲು ಮುಂದಾಗಿತ್ತು. ವಿಮಾನ ನಿಲ್ದಾಣದ ಕಾಮಗಾರಿಯು 2000 ರಲ್ಲಿ ಆರಂಭವಾಯಿತಾದರೂ, ನಂತರ ಸ್ಥಗಿತಗೊಂಡಿತು. 2020ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ತವರು ನೆಲೆಯಲ್ಲಿ ವಿಮಾನ ನಿಲ್ದಾಣವಾಗಲೇಬೇಕು ಎಂದು ಪಣತೊಟ್ಟು ಸುಮಾರು 220 ಕೋಟಿ ಬಿಡುಗಡೆಮಾಡಿ ಕಾಮಗಾರಿ ವೇಗ ಹೆಚ್ಚಿಸಿದ್ದರು. ಈಗ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು. ಈ ವಿಮಾನ ನಿಲ್ದಾಣಕ್ಕೆ ಶ್ರೀ ಯಡಿಯೂರಪ್ಪನವರ ಹೆಸರನ್ನೇ ಇಡಲು ಸರ್ಕಾರ ನಿರ್ಧಾರ ಮಾಡಿದೆ.

ಬುಧವಾರ ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಮಾಜಿ ಸಿ.ಎಂ. ಯಡಿಯೂರಪ್ಪನವರ ಹೆಸರು ಇಡಲು ಸಂಪುಟ ತೀರ್ಮಾನಿಸಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನು ಸಹ ಮಾಡಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ವಿಮಾನ ನಿಲ್ದಾಣ ಕಾಮಗಾರಿಗಳನ್ನು ಎರಡು ಹಂತದಲ್ಲಿ ಮುಗಿಸಲು ಸರ್ಕಾರ ಯೋಜನೆ ಮಾಡಿತ್ತು. ಎನ್ ಸಿ ಸಿ ಇನ್ಫ್ರಾಸ್ಟ್ರಕ್ಚರ್ ಹೋಲ್ಡಿಂಗ್ ಲಿ. ಕಂಪೆನಿ ಕಾಮಗಾರಿಯ ಟೆಂಡರ್ ಪಡೆದಿದ್ದು ಪ್ರಸ್ತುತ ಒಟ್ಟು ಖರ್ಚು 384 ಕೋಟಿ ರೂ ಆಗಿದೆ. ಈ ಮೊದಲು ಆಂಧ್ರ ಮೂಲದ ಕಂಪನಿಯೊಂದು ಟೆಂಡರ್ ಪಡೆದು ಅರ್ಧಕ್ಕೆ ಹಿಂದೆಸರಿದಿತ್ತು.

ಶಿವಮೊಗ್ಗ ವಿಮಾನ ನಿಲ್ದಾಣದ ವಾಣಿಜ್ಯ ಹಾಗೂ ಸಾರ್ವಜನಿಕ ಸೇವೆಯು 2023 ರಿಂದ ಆರಂಭಗೊಳ್ಳುವ ನಿರೀಕ್ಷೆ ಇದೆ. ಈ ಮೊದಲು ವಿಮಾನ ನಿಲ್ದಾಣ ಹೊರಮುಖವು ಬಿಜೆಪಿ ಪಕ್ಷದ ಕಮಲದ ಚಿನ್ಹೆಯನ್ನು ಹೋಲುತ್ತದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು.

ಇದನ್ನೂ ಓದಿ :Karnataka Politics: ಯಾರಾದರು ಪೊಲೀಸ್ ವಾಹನದ ಮೇಲೆ ನಿಂತುಕೊಳ್ಳೋಕೆ ಆಗುತ್ತಾ? : ಡಿ.ಕೆ.ಶಿವಕುಮಾರ್

ಇದನ್ನೂ ಓದಿ : JDS: 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಎಲ್ಲವೂ ಸುಲಭವಿಲ್ಲ: ಆಮ್ ಆದ್ಮಿ, ಎನ್‌ಸಿಪಿ ಸ್ಪರ್ಧೆಗೆ ಇಳಿಯಲಿದೆ

(Shivamogga Airport Karnataka Government decided to put B S Yediyurappa name)

Comments are closed.