ಹಿಂದಿಯಲ್ಲಿ RRR ದಾಖಲೆ ಉಡೀಸ್‌ ಮಾಡಿದ KGF 2

ಕೆಜಿಎಫ್‌ 2 ( KGF 2) ಸಿನಿಮಾ ವಿಶ್ವದಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದೆ. ರಾಕಿಬಾಯ್‌ ದಿನೇ ದಿನೇ ಹೊಸ ದಾಖಲೆಯನ್ನೇ ಸೃಷ್ಟಿಸುತ್ತಿದೆ. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿರುವ ಕೆಜಿಎಫ್‌ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ರಾಕಿಂಗ್‌ ಸ್ಟಾರ್‌ ಯಶ್ ನಟನೆಯ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 676.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಅದ್ರಲ್ಲೂ ಕಳೆದ ಒಂದು ವಾರದ ಅವಧಿಯಲ್ಲಿ ಕೆಜಿಫ್‌ ಸಿನಿಮಾದ ಹಿಂದಿ ಆವೃತ್ತಿಯಲ್ಲಿ SS ರಾಜಮೌಳಿಯ RRR ಹಿಂದಿ ದಾಖಲೆಯನ್ನು ಉಡೀಸ್‌ ಮಾಡಿದೆ.

Koimoi ಪ್ರಕಟಿಸಿರುವ ವರದಿಯ ಪ್ರಕಾರ ಕೆಜಿಎಫ್ 2 ಹಿಂದಿಯ 7 ನೇ ದಿನದ ವ್ಯವಹಾರವು ಸುಮಾರು 15-17 ಕೋಟಿ ರೂ. ಸಂಗ್ರಹ ಮಾಡಿದೆ. ಒಟ್ಟಾರೆ ಹಿಂದಿ ಸಂಗ್ರಹವನ್ನು 254-256 ಕೋಟಿ ರೂ. ದಾಟಿದೆ. ಆರ್‌ಆರ್‌ಆರ್‌ ಸಿನಿಮಾದ ಹಿಂದಿಯಲ್ಲಿ 250 ಕೋಟಿ ಗಳಿಸಿತ್ತು. ಆದ್ರೀಗ ಕೆಜಿಎಫ್‌ ಆದಾಯದ ಇನ್ನೂ ಕಡಿಮೆಯಾಗಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲಿ ಇನ್ನೂ ಕೆಜಿಎಫ್‌ ಹೌಸ್‌ಪುಲ್‌ ಪ್ರದರ್ಶನವನ್ನು ಕಾಣುತ್ತಿದೆ. ಹೀಗಾಗಿ ಬಾಲಿವುಡ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗುವ ಸಾಧ್ಯತೆಯಿದೆ.

KGF 2 Hindi Beats RRR Hindi in Just 7 Days at Box Office
ರಾಕಿಂಗ್‌ ಸ್ಟಾರ್‌ ಯಶ್‌

ಕೆಜಿಎಫ್ 2 (KGF 2) ಹಿಂದಿಯ ಏಳು ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ಸ್‌

ಗುರುವಾರ: 53.95 ಕೋಟಿ ರೂ
ಶುಕ್ರವಾರ: 46.79 ಕೋಟಿ ರೂ
ಶನಿವಾರ: 42.90 ಕೋಟಿ ರೂ
ಭಾನುವಾರ: 50.35 ಕೋಟಿ ರೂ
ಸೋಮವಾರ: 25.57 ಕೋಟಿ ರೂ
ಮಂಗಳವಾರ: 25 ಕೋಟಿ ರೂ
ಬುಧವಾರ: ರೂ 15-17 ಕೋಟಿ (ಆರಂಭಿಕ ಅಂದಾಜು)
ಒಟ್ಟು: ರೂ 254.56-256.56 ಕೋಟಿ (ಆರಂಭಿಕ ಅಂದಾಜು)
ಪ್ರಶಾಂತ್ ನೀಲ್ ನಿರ್ದೇಶನ ಸಿನಿ ಪ್ರಿಯರನ್ನು ಮೋಡಿ ಮಾಡಿದೆ. ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಕೇವಲ ಒಂದೇ ಒಂದು ವಾರದಲ್ಲಿಯೇ ದಾಖಲೆಯ ಮೊತ್ತವನ್ನು ಸಂಗ್ರಹಿಸಿದೆ. ವಾರ ಕಳೆದರೂ ಕಲೆಕ್ಷನ್‌ಗೆ ಮಾತ್ರ ಕೊರತೆಯಾಗಿಲ್ಲ. ಕೆಜಿಎಫ್‌ 2 6 ದಿನವೂ 51.68 ಕೋಟಿ ರೂ. ಸಂಗ್ರಹಿಸಿದೆ.

KGF 2 Hindi Beats RRR Hindi in Just 7 Days at Box Office
ಕೆಜಿಎಫ್‌ -2 ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌

ಕೆಜಿಎಫ್‌ 2 (KGF 2) ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕೆಲಕ್ಷನ್ಸ್‌

ಗುರುವಾರ: 165.37 ಕೋಟಿ ರೂ
ಶುಕ್ರವಾರ: 139.25 ಕೋಟಿ ರೂ
ಶನಿವಾರ: 115.08 ಕೋಟಿ ರೂ
ಭಾನುವಾರ: 132.13 ಕೋಟಿ ರೂ
ಸೋಮವಾರ: 73.29 ಕೋಟಿ ರೂ
ಮಂಗಳವಾರ: 51.68 ಕೋಟಿ ರೂ
ಒಟ್ಟು: 676.80 ಕೋಟಿ ರೂ

ಕೆಜಿಎಫ್‌ ಸಿನಿಮಾ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲಾ ಭಾಷೆಗಳಿಂದಲೂ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಕೆಜಿಎಫ್‌ ಜೊತೆಯಲ್ಲಿ ರಿಲೀಸ್‌ ಆಗಿರುವ ಸಿನಿಮಾಗಳು ನೆಲಕಚ್ಚಿದೆ. ಕನ್ನಡಿಗರ ಸಾಹಸವನ್ನು ವಿಶ್ವದಾದ್ಯಂತ ಜನರು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ : ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಇದನ್ನೂ ಓದಿ : ತೆಲುಗು ನಟ ನಾನಿ: ಕನ್ನಡಿಗರ ಮನಸ್ಸಿಗೆ ನೋವು ಮಾಡುವ ಉದ್ದೇಶ ನನಗಿಲ್ಲ

KGF 2 Hindi Beats RRR Hindi in Just 7 Days at Box Office

Comments are closed.