Onion Benefits : ಈರುಳ್ಳಿಯ 6 ಪ್ರಯೋಜನಗಳು : ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಜೈ !

ಯಾವಾಗ ತ್ವಚೆಯ ಕಾಳಜಿಯ ವಿಷಯ ಬರುತ್ತದೆಯೋ ಆಗ, ಮೊದಲು ಕೊಡುವ ಸಲಹೆಯೆಂದರೆ ಅಡುಗೆ ಮನೆಯ ವಸ್ತುಗಳ ಬಳಕೆ. ಏಕೆಂದರೆ ಅವುಗಳು ಸುರಕ್ಷಿತ ಮತ್ತು ಅಷ್ಟೇ ಪರಿಣಾಮಕಾರಿ ಎಂದು. ಅಂತಹ ಒಂದು ವಸ್ತು ನಮ್ಮೆಲ್ಲರ ಮನೆಯಲ್ಲಿ ಸದಾ ಇರುವ ಈರುಳ್ಳಿ(Onion Benefits). ಅದನ್ನು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಬಳಸುತ್ತಾರೆ. ಈರುಳ್ಳಿಯ ತೀಕ್ಷ್ಣ ವಾಸನೆ ಮತ್ತು ಕಟು ರುಚಿಯು ಅದರ ವಿನ್ಯಾಸ ಮತ್ತು ರುಚಿಗಳ ಪದರುಗಳಂತೆ ಬೇರೆ ಬೇರೆಯಾಗಿದೆ. ತ್ವಚೆ ಕಳೆಗುಂದುವುದು, ತಲೆಹೊಟ್ಟು ನಿವಾರಿಸಲು ಹೀಗೆ ಏನೆಲ್ಲಾ ಪ್ರಯೋಜನಗಳಿವೆ. ಹೀಗೆ ಈರುಳ್ಳಿಯು ಅಡುಗೆ ಮತ್ತು ಸೌಂದರ್ಯ ಎರಡರಲ್ಲಿ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ಇಲ್ಲಿ ಹೇಳಿದ್ದೇವೆ.

ಆರೋಗ್ಯ ಮತ್ತು ಸೌಂದರ್ಯದ ಮೇಲೆ ಈರುಳ್ಳಿಯ(Onion Benefits) ಪ್ರಯೋಜನಗಳು :

  1. ತ್ವಚೆ ಬೆಳ್ಳಗಾಗಲು :
    ಈರುಳ್ಳಿಯನ್ನು ನಿಯಮಿತವಾಗಿ ಲೇಪಿಸುವುದರಿಂದ ಮಸಕಾದ ಮತ್ತು ಜೀವರಹಿತ ಚರ್ಮಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ವಿಟಾಮಿನ್‌ ಮತ್ತು ಆಂಟಿಒಕ್ಸಿಡೆಂಟ್‌ಗಳು ಕೋಶಗಳ ಮರುಪೂರಣೆ ಮಾಡಿ ಸೌಂದರ್ಯ ವೃದ್ಧಿಸಲು ಸಹಾಯಮಾಡುತ್ತದೆ. ಇದರ ಪರಿಣಾಮದಿಂದಾಗಿ ಮೃದುವಾದ ಚರ್ಮ ಪಡೆಯಬಹುದು. ಅದಲ್ಲದೆ, ಹಸಿ ಈರುಳ್ಳಿಯು ದೇಹ ಶುದ್ದೀಕರಿಸುತ್ತದೆ, ರಕ್ತದಲ್ಲಿನ ಕಲ್ಮಶಗಳನ್ನು ತೊಡೆದುಹಾಕುವುದರಿಂದ ನಿಮ್ಮ ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳಿ.
  2. ಕಲೆಗಳು, ಮತ್ತು ಪಿಗ್ಮೆಂಟೇಶನ್‌ ಕಡಿಮೆ ಮಾಡಲು :
    ವಿಟಾಮಿನ್‌ C ಹೊಂದಿರುವ ಈರುಳ್ಳಿ, ಕಲೆಗಳು ಮತ್ತು ಪಿಗ್ಮೇಂಟೇಷನ್‌ ತಡೆಯಲು ಉತ್ತಮವಾಗಿದೆ. ಒಂದು ಚಮಚ ಈರುಳ್ಳಿ ರಸಕ್ಕೆ, ಒಂದು ಚಿಟಿಕೆ ಅರಿಶಿನ ಹಾಕಿ. ನಂತರ ಆ ಮಿಕ್ಚರ್‌ ಅನ್ನು ಮುಖಕ್ಕೆ ಲೇಪಿಸಿ ನಿಧಾನವಾಗಿ ಮಸ್ಸಾಜ್‌ ಮಾಡಿ. ಇದು ತ್ವಚೆ ಕಾಂತಿಗೊಳಿಸಲು ಸಹಾಯ ಮಾಡುತ್ತದೆ.
  3. ತ್ವಚೆ ಕಳೆಗುಂದುವುದನ್ನು ತಪ್ಪಿಸಲು
    ಈರುಳ್ಳಿ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಕೋಶಗಳಿಗೆ ರಕ್ತಸಂಚಾರ ಹೆಚ್ಚಾಗಿ, ಕೋಶಗಳು ವರ್ಧಿಸುವಂತೆ ಮಾಡುತ್ತದೆ. ಇದರಿಂದ ನಿಮ್ಮ ತ್ವಚೆ ಯಾವಾಗಲೂ ಯೌವನದಿಂದ ಕೂಡಿರುತ್ತದೆ. ವಿಟಾಮಿನ್‌ A,C ಮತ್ತು E ಗಳಿಂದ ತುಂಬಿರುವ ಈರುಳ್ಲಿ ಉತ್ತಮ ಆಂಟಿಒಕ್ಸಿಡೆಂಟ್‌ ಆಗಿದೆ. ಒಂದು ಈರುಳ್ಳಿ ತೆಗೆದುಕೊಂಡು ಅದರ ರಸ ತೆಗೆದುಕೊಳ್ಳಿ. ಹತ್ತಿಯಿಂದ ಚರ್ಮದ ಮೇಲೆ ಲೇಪಿಸಿ. 20 ನಿಮಷ ಬಿಟ್ಟಿ ತೊಳೆಯಿರಿ. ಇದು ಚರ್ಮದ ಮೇಲಿನ ಗೆರೆಗಳನ್ನು ನಿವಾರಿಸಲು ಬಹಳ ಸಹಾಯ ಮಾಡುವುದು.
  4. ಮೊಡವೆ ಅಥವಾ ಎಕ್ನಿ ತೊಂದರೆ ನಿವಾರಿಸಲು
    ‌ಮೊಡವೆ ಅಥವಾ ಎಕ್ನಿ ಇದು ಮಹಿಳೆಯರು ಎದುರಿಸುವ ಒಂದು ಸಾಮಾನ್ಯ ತೊಂದರೆ. ಈ ಮೊಡವೆ ಅಥವ ಎಕ್ನಿಗಳನ್ನು ತಡೆಯಲು ಸುಲಭವಾಗಿ ಈರುಳ್ಳಿಯ ರಸ ತೆಗೆದುಕೊಂಡು ಮಸ್ಸಾಜ್‌ ಮಾಡಿ. ಇಲ್ಲವೆಂದರೆ ಈರುಳ್ಳಿಯ ಫೇಸ್‌ ಪ್ಯಾಕ್‌ ಹಾಕಿಕೊಳ್ಳಿ. ಈರುಳ್ಳಿ ರಸ ಮತ್ತು ಕಡಲೆ ಹಿಟ್ಟು ಸೇರಿಸಿ ತಯಾರಿಸಿದ ಫೇಸ್‌ ಪ್ಯಾಕ್‌ ಎಕ್ನಿಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಇಲ್ಲವೆಂದರೆ ಹೀಗೂ ಮಾಡಿ ಒಂದು ಚಮಚ ಈರುಳ್ಳಿಯ ರಸಕ್ಕೆ ಒಂದು ಚಮಚ ಆಲೀವ್‌ ಎಣ್ಣೆ ಅಥವಾ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ, ನಿಮ್ಮ ತ್ವಚೆಗೆ ಲೇಪಿಸಿ ಕೋಳ್ಳಿ. 15 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.
  5. ಕೂದಲಿನ ಬೆಳವಣಿಗೆಗೆ
    ಈರುಳ್ಳಿ ರಸವು ಕೂದಲಿನ ಬೆಳವಣಿಗೆಗೂ ಉತ್ತಮ. ಇದರಲ್ಲಿರುವ ಸಲ್ಫರ್‌, ರಕ್ತಪರಿಚಲನೆಯನ್ನು ಹೆಚ್ಚಿಸಿ, ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡುವುದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. ಒಂದೇ ಅಳತೆಯ ಈರುಳ್ಳಿ ರಸ ಮತ್ತು ರೋಸ್‌ ವಾಟರ್‌ ಇವೆರಡನ್ನೂ ಸೇರಿಸಿ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತೊಳೆದುಕೊಳ್ಳಿ. ಇದು ಕೂದಲು ಬೆಳವಣಿಗೆಗೆ ಬಹಳ ಪ್ರಯೋಜನಕಾರಿಯಾಗಿದೆ. ಹಸಿ ಈರುಳ್ಳಿಯ ಸೇವನೆಯು ದೇಹದಲ್ಲಿ ರಕ್ತ ಸಂಚಾರ ಹೆಚ್ಚಿಸಲು ಉತ್ತಮವಾಗಿದೆ.
  6. ತಲೆಹೊಟ್ಟು ನಿವಾರಣೆಗೆ
    ತಲೆಹೊಟ್ಟು ನಿವಾರಣೆಗೆ ಈರುಳ್ಳಿ ರಸವು ಬಹಳ ಉತ್ತಮವಾಗಿದೆ. ಸಾದಾ ಈರುಳ್ಳಿಯ ರಸವನ್ನು ಕೂದಲಿನ ಬುಡಕ್ಕೆ ಹೆಚ್ಚಿ, 20 ನಿಮಿಷ ಬಿಟ್ಟು ಶಾಂಪೂ ಉಪಯೋಗಿಸಿ ತೊಳೆಯಿರಿ. ಇದಲ್ಲದೆ ಈರುಳ್ಳಿ ರಸ, ಲಿಂಬು ರಸ, ಮತ್ತು ಮೊಸರು ಸೇರಿಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನೂ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಇದನ್ನು ಓದಿ :Yoga Wheel Benefits : ಯೋಗಾ ವೀಲ್‌ನ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ? ಯೋಗಾ ವೀಲ್ ಅನ್ನು ಹೇಗೆಲ್ಲಾ ಬಳಸಬಹುದು ಇಲ್ಲಿದೆ ನೋಡಿ

ಇದನ್ನೂ ಓದಿ :Health Tips : ಎಣ್ಣೆ ಅಥವಾ ಮಸಾಲೆಯುಕ್ತ ಖಾದ್ಯಗಳನ್ನು ಸೇವಿಸಿದ ಮೇಲೆ ಅಸಹಜ ಎನಿಸುತ್ತಿದ್ದೆಯೇ? ಹಾಗಾದರೆ ಈ ರೀತಿ ಮಾಡಿ

(Onion Benefits Include onion in your diet)

Comments are closed.