Shivamogga School College Holiday : ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿ ; ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗ: (Shivamogga School College Holiday) ಸಾರ್ವಕರ್‌ ಪೋಟೋ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದಿಂದಾಗಿ ಪ್ರಕ್ಷುಬ್ದಗೊಂಡಿರುವ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಪಟ್ಟಣಗಳ ಶಾಲೆ, ಕಾಲೇಜುಗಳಿಗೆ ಅಗಸ್ಟ್‌ 16 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನರಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತದ ಬೆನ್ನಲ್ಲೇ ಪೊಲೀಸ್‌ ಇಲಾಖೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ. ಹೆಚ್ಚು ಪೊಲೀಸ್‌ ತುಕಡಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ. ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು, ಪೊಲೀಸರು ಜನರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವು ಉದ್ವಿಘ್ನತೆಗೆ ತಿರುಗಿದೆ. ವೀರ ಸಾವರ್ಕರ್​ ಫ್ಲೆಕ್ಸ್​ ಅಳವಡಿಕೆ ವಿಚಾರದಲ್ಲಿ ಎರಡು ಕೋಮಿನ ಯುವಕರ ನಡುವೆ ಭಾರೀ ಗಲಾಟೆ ಏರ್ಪಟ್ಟಿದ್ದು ಪರಿಸ್ಥಿತಿ ಕಾವೇರುತ್ತಿದೆ. ಈ ನಡುವೆ ನಗರದ ಇಬ್ಬರು ಯುವಕರಿಗೆ ಚಾಕು ಇರಿಯಲಾಗಿದ್ದು ಇಡೀ ಶಿವಮೊಗ್ಗದಲ್ಲಿ ಪರಿಸ್ಥಿತಿ ಬಹಳಷ್ಟು ಸೂಕ್ಷ್ಮವಾಗಿದೆ.

ಶಿವಮೊಗ್ಗದ ಅಮೀರ್​ ಅಹಮದ್​ ವೃತ್ತದಲ್ಲಿ ಎರಡು ಕೋಮಿನ ನಡುವೆ ಗಲಾಟೆ ಏರ್ಪಟ್ಟಿದ್ದು ಸಾರ್ವಕರ್​ ಫೋಟೋವನ್ನು ತೆಗೆದು ಟಿಪ್ಪು ಸುಲ್ತಾನ್​ರ ಫೋಟೋವನ್ನು ಇಡಲು ಒಂದು ಗುಂಪು ಮುಂದಾಗಿತ್ತು. ಸಾರ್ವಕರ್​ ಫೋಟೋವನ್ನು ತೆಗೆಯಲು ಒಪ್ಪಿದ ಪೊಲೀಸರು ಟಿಪ್ಪು ಫೋಟೋವನ್ನು ಇಡಲು ನಿರಾಕರಿಸಿದ್ದರು. ಈ ವೇಳೆಯಲ್ಲಿ ಎರಡು ಕೋಮಿನ ಜೊತೆಯಲ್ಲಿ ಜಟಾಪಟಿ ಉಂಟಾಗಿದೆ. ವೀರ ಸಾರ್ವಕರ್​ ಫೋಟೋವನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆ ಕಾರ್ಯ

ಕರ್ತರು ಶಿವಪ್ಪ ನಾಯಕ ವೃತ್ತದಲ್ಲಿ ಗುಂಪು ಸೇರಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಟಿಯರ್​ ಗ್ಯಾಸ್​ ಸಿಡಿಸಲು ಮುಂದಾಗಿದ್ದಾರೆ. ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚೆನ್ನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಶಿವಮೊಗ್ಗದಲ್ಲಿ ವೀರ ಸಾರ್ವಕರ್​ ಫೋಟೋ ವಿಚಾರವಾಗಿ ಗಲಾಟೆ ನಡೆಯುತ್ತಿರುವ ಬೆನ್ನಲ್ಲೇ ಇಬ್ಬರು ಯುವಕರ ಮೇಲೆ ಚಾಕು ಇರಿತವಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿ ಪ್ರೇಮ್​ ಸಿಂಗ್​ ಎಂಬವನ ಮೇಲೆ ಚಾಕು ಇರಿತವಾದ ಬೆನ್ನಲ್ಲೇ ಇದೀಗ ಅಶೋಕನಗರ ಬಡಾವಣೆಯಲ್ಲಿ ಮತ್ತೊಬ್ಬ ಯುವಕನಿಗೆ ಚಾಕು ಇರಿಯಲಾಗಿದೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು 27 ವರ್ಷದ ಪ್ರವೀಣ್​ ಕುಮಾರ್​ ಎಂಬವರ ಮೇಲೆ ಚಾಕು ಇರಿತ ಮಾಡಿದ್ದಾರೆ. ದುಷ್ಕರ್ಮಿಗಳು ಪ್ರವೀಣ್​ ಕುಮಾರ್​ಗೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ಪ್ರವೀಣ್​ ಕುಮಾರ್​ ಹಾಗೂ ಪ್ರೇಮ್​ ಸಿಂಗ್​​​ರಿಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ : araga jnanendra jeep accident : ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ

ಇದನ್ನೂ ಓದಿ : Shivamogga riot case: ಶಿವಮೊಗ್ಗ ಗಲಾಟೆ ಪ್ರಕರಣ : ಚಾಕು ಇರಿತಕ್ಕೊಳಗಾದ ಪ್ರೇಮ್​ ಸಿಂಗ್​ ಸ್ಥಿತಿ ಗಂಭೀರ

Shivamogga School College Holiday Declared Tomorrow

Comments are closed.