ಶೋಭಾ ಕರಂದ್ಲಾಜೆ ಇನ್ಮುಂದೇ ಶೋಭಾ ಗೌಡ : ಹೆಸರು ಬದಲಾವಣೆ ಹಿಂದಿದೆ ಬಾರೀ ಲೆಕ್ಕಾಚಾರ

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಚುನಾವಣೆ ಕಣ ರಂಗೇರಿದೆ. ಈ ಮಧ್ಯೆ ಹಾಲಿ, ಮಾಜಿ ರಾಜಕಾರಣಿಗಳೆಲ್ಲ ಮುಂದಿನ ಎಲೆಕ್ಷನ್ ಗಾಗಿ ಸಜ್ಜಾಗುತ್ತಿದ್ದಾರೆ. ಇದಕ್ಕೆ ಸಂಸದೆ‌ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೂಡ ಹೊಸ ಸೇರ್ಪಡೆ 2023 ರ ವಿಧಾನಸಭಾ ಹಾಗೂ 2024 ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಶೋಭಾ ಕರಂದ್ಲಾಜೆ ತಮ್ಮ ಹೆಸರು ಬದಲಾಯಿಸಿಕೊಂಡು ಗೆಲುವಿಗಾಗಿ ಜಾತಿಯ ಸಹಾಯ ಪಡೆಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹಾಗಿದ್ದರೇ ಶೋಭಾ ಕರಂದ್ಲಾಜೆ (Shobha Karandlaje Shobha Gowda) ಹೆಸರು ಬದಲಾವಣೆಯ ಹಿಂದಿನ ಲೆಕ್ಕಾಚಾರಗಳೇನು ಅನ್ನೋ ವಿವರ ಇಲ್ಲಿದೆ.

ಶೋಭಾ ಕರಂದ್ಲಾಜೆ ಅಸಲಿಯಾಗಿ ಬಿಜೆಪಿಯಲ್ಲಿ ಆರ್.ಎಸ್.ಎಸ್ ನ ಹಿನ್ನೆಲೆಯಿಂದ ಅಧಿಕಾರ ಹಾಗೂ ಅವಕಾಶವನ್ನು ಪಡೆದುಕೊಂಡರೂ ಅವರು ಪ್ರಬಲವಾದ ಗೌಡ ಸಮುದಾಯಕ್ಕೆ ಸೇರಿದವರು ಎಂಬುದು ಸತ್ಯ. ಈಗ ಶೋಭಾ ಕರಂದ್ಲಾಜೆ ತಮ್ಮ ಹೆಸರಿನೊಂದಿಗೆ ಗೌಡ ಎಂಬ ಜಾತಿ ಸೂಚಕವನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದ್ದಾರಂತೆ. ಶೋಭಾ ಕರಂದ್ಲಾಜೆಯವರ ಅಸಲಿ ಹೆಸರು ಶೋಭಾ ಮೋನಪ್ಪ ಗೌಡ. ಈಗ ಶೋಭಾ ಕರಂದ್ಲಾಜೆ ತಮ್ಮ ಹೆಸರಿನ ಅಂತ್ಯದಲ್ಲಿ ಗೌಡ ಎಂಬುದನ್ನು ಸೇರಿಸಿಕೊಂಡು ಹೆಸರು ಬದಲಾಯಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಗಮನಿಸೋದಾದರೇ ಒಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ. ಹೌದು ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಿರೋದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ನೇಮಿಸಲಾಗುತ್ತಿದೆ ಎನ್ನಲಾಗಿದೆ.

ಹೀಗಾಗಿ ರಾಜ್ಯದ ಪ್ರಮುಖ ಸಮುದಾಯವಾಗಿರೋ ಒಕ್ಕಲಿಗರನ್ನು ಬಿಜೆಪಿಯತ್ತ ಸೆಳೆಯೋ ಉದ್ದೇಶದಿಂದ ಶೋಭಾ ಕರಂದ್ಲಾಜೆ ತಮ್ಮ ಹೆಸರಿನ ಜೊತೆ ಗೌಡ ಎಂಬುದನ್ನು ಸೇರಿಸಿಕೊಳ್ಳಲು ಮುಂದಾಗಿದ್ದಾರಂತೆ. ಒಂದೊಮ್ಮೆ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳದೇ ಇದ್ದರೂ ಗೌಡ ಎಂಬುದನ್ನು ತಮ್ಮ ಹೆಸರಿನ ಮುಂದೇ ಸೇರಿಸಿಕೊಳ್ತಿರೋದಕ್ಕೆ ಇನ್ನೊಂದು ಪ್ರಬಲ ಕಾರಣವಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಭಲವಾಗಿಸುವ ಗುರಿ ಹೊಂದಿದೆ. ಆ ಭಾಗದಲ್ಲಿ ಪ್ರಮುಖವಾಗಿರೋದು ಒಕ್ಕಲಿಗ ಸಮುದಾಯ. ಈ ಭಾಗದ ಒಕ್ಕಲಿಗ ಜನತೆಯನ್ನು ಸೆಳೆಯೋ ಉದ್ದೇಶದಿಂದ ಶೋಭಾ ಕರಂದ್ಲಾಜೆಯನ್ನು ಪಕ್ಷದ ಪ್ರಚಾರ ಹಾಗೂ ಸಂಘಟನೆಗಾಗಿ ಬಳಸಿಕೊಳ್ಳೋ ಪ್ಲ್ಯಾನ್ ಬಿಜೆಪಿಯದ್ದು.

ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಉಡುಪಿ ಸಂಸದೆಯಾಗಿದ್ದರೂ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಮಾತ್ರವಲ್ಲ ಜಿಲ್ಲೆಯ ಜನರೊಂದಿಗೆ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ. ಇದೆಲ್ಲವನ್ನು ಪಕ್ಷಕ್ಕಾಗಿ ಬಳಸಿಕೊಳ್ಳಲು ಶೋಭಾ ಕರಂದ್ಲಾಜೆ ಈಗ ಪಕ್ಷದ ಸೂಚನೆಯ ಜೊತೆಗೆ ತಮ್ಮ ಪರಿಚಯಕ್ಕೆ ಗೌಡ ಎಂಬುದನ್ನು ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಶೋಭಾ ಕರಂದ್ಲಾಜೆ ಇದುವರೆಗೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ : Mukesh Ambani:ಕೋಟ್ಯಾಧಿಪತಿ ಮುಕೇಶ್​ ಅಂಬಾನಿ ಭದ್ರತೆ ಝೆಡ್​ ಪ್ಲಸ್​ ದರ್ಜೆಗೆ ಏರಿಕೆ

ಇದನ್ನೂ ಓದಿ : Praveen Nettaru wife : ನುಡಿದಂತೆ ನಡೆದ ಬಿಜೆಪಿ ಸರ್ಕಾರ: ಪ್ರವೀಣ್ ನೆಟ್ಟಾರು ಪತ್ನಿಗೆ ಸರಕಾರಿ ಉದ್ಯೋಗ

Shobha Karandlaje Changing Her Name Shobha Gowda Why did the name change?

Comments are closed.