Siddaramaiah :‘ಕಟೀಲ್​ ಒಬ್ಬ ವಿದೂಷಕ, ಮೆಚ್ಯೂರಿಟಿ ಇಲ್ಲದ ವ್ಯಕ್ತಿ’ : ನಳೀನ್​ ಕುಮಾರ್​ ಕಟೀಲ್​ ಆರೋಪಕ್ಕೆ ಸಿದ್ದು ತಿರುಗೇಟು

ಬಾಗಲಕೋಟೆ : Siddaramaiah : ರಾಜ್ಯದಲ್ಲಿ ಪಿಎಫ್​ಐ ಹಾಗೂ ಎಸ್​ಡಿಪಿಐ ಸಂಘಟನೆ ಬೆಳೆಯಲು ಸಿದ್ದರಾಮಯ್ಯ ಕಾರಣ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್​ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹಿರೇಪಡಸಲಗಿ ಗ್ರಾಮದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ನೋಡಪ್ಪ, ನಾವು ತಪ್ಪಿತಸ್ಥರಿಗೆ ಸಹಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

40 ಪರ್ಸೆಂಟ್​ ಸರ್ಕಾರ ಎಂದು ಆರೋಪ ಮಾಡಿರುವ ಕಾಂಗ್ರೆಸ್​ ಈ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ ಎಂಬ ಬಿಜೆಪಿ ಟೀಕೆಗೆ ಇದೇ ವೇಳೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ನನ್ನ ಸರ್ಕಾರವನ್ನು 10 ಪರ್ಸೆಂಟ್​ ಸರ್ಕಾರ ಅಂದಿದ್ರಲ. ಆಗ ಯಾವ ದಾಖಲೆ ನೀಡಿದ್ದರು..? ನಾನು ಅದನ್ನ ಕೇಳಿದ್ನಾ..? ಆ ಕಟೀಲ್​ಗೆ ಇದನ್ನು ಮೊದಲು ಹೇಳಿ. ನರೇಂದ್ರ ಮೋದಿ 2018ರಲ್ಲಿ ನಮ್ಮ ಸರ್ಕಾರವನ್ನು 10 ಪರ್ಸೆಂಟ್​ ಸರ್ಕಾರ ಅಂದಿದ್ದರು. ಆಗ ಈ ಕಟೀಲ್​ ಎಲ್ಲಿದ್ದ..? ಆಗ ಯಡಿಯೂರಪ್ಪ ಅಧ್ಯಕ್ಷರಾಗಿದ್ದರು. ಇವರೇ ಎಲ್ಲರೂ ಸೇರಿ ನರೇಂದ್ರ ಮೋದಿ ಬಾಯಿಂದ ಆ ಮಾತನ್ನು ಹೇಳಿಸಿದ್ದರು .ಬಿಜೆಪಿ ಅಧ್ಯಕ್ಷನಾಗಿರುವ ನಳೀನ್​ ಕುಮಾರ್​ ಕಟೀಲ್​ ಓರ್ವ ವಿದೂಷಕ, ಆತನಿಗೆ ಪ್ರಬುದ್ಧತೆಯಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.


ಲೋಕಾಯುಕ್ತ ಬಂದ್​ ಮಾಡಿಸದೇ ಹೋಗಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗಬೇಕಾಗಿತ್ತು ಎಂಬ ಕಟಿಲ್​ ಹೇಳಿಕೆಗೂ ಇದೇ ವೇಳೆ ಟಾಂಗ್​ ನೀಡಿದ ಅವರು ಕಟೀಲ್​ಗೆ ಮೆಚ್ಯೂರಿಟಿ ಇಲ್ಲ. ನಮ್ಮ ಸರ್ಕಾರ ಹೋಗಿ ಎಷ್ಟು ಸಮಯ ಆಯ್ತು..? ರಾಜ್ಯದಲ್ಲಿ ಈಗ ಯಾವ ಸರ್ಕಾರವಿದೆ..? ಮೂರು ವರ್ಷದಿಂದ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ..? ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿ ಯಾರಿದ್ದರು..? ಆಗ ಯಾಕೆ ಇವರೆಲ್ಲ ಲೋಕಾಯುಕ್ತ ವಿಚಾರದ ಬಗ್ಗೆ ಧ್ವನಿ ಎತ್ತಲಿಲ್ಲ..? ಆಗ ಬಾಯಿಗೆ ಕಡುಬು ಸಿಕ್ಕಿಕೊಂಡಿತ್ತಾ..?ನಾವು ಭ್ರಷ್ಟಾಚಾರದ ಆರೋಪ ಎತ್ತಿದ ಮೇಲೆ ಈಗ ಹಿಂದಿನ ಸರ್ಕಾರದಲ್ಲಿ ಅದಾಗಿತ್ತು, ಇದಾಗಿತ್ತು ಅಂತಾರೆ. ನಾವು ಐದು ವರ್ಷ ಅಧಿಕಾರದಲ್ಲಿದ್ದೆವು. ಭ್ರಷ್ಟಾಚಾರದ ಆರೋಪ ಮಾಡುವವರು 2006ರಿಂದ ಇವತ್ತಿನವರೆಗಿನ ದಾಖಲೆಗಳನ್ನು ತನಿಖೆ
ಮಾಡಿಸಿ ಎಂದು ಸವಾಲೆಸೆದಿದ್ದಾರೆ.


ಸುಮ್ಮನೇ ಜನರ ಗಮನ ಸೆಳೆಯಲು ಹೇಳಿಕೆ ನೀಡಬೇಡಿ. ನಮ್ಮ ಕಾಲದ್ದೂ ಸೇರಿಸಿ 16 ವರ್ಷಗಳಲ್ಲಿ ನಡೆದ ಭ್ರಷ್ಟಾಚಾರಗಳನ್ನು ತನಿಖೆ ಮಾಡಿ. ನಾನು ಈ ಬಗ್ಗೆ ಅಸೆಂಬ್ಲಿಯಲ್ಲಿಯೂ ದನಿಯೆತ್ತಿದ್ದೇನೆ. ಈಗ ಎಲ್ಲ ಬಿಟ್ಟು ಜಾತಿ ಹಿಡಿದುಕೊಂಡಿದ್ದಾರೆ. ಜಾತಿಗು ಭ್ರಷ್ಟಾಚಾರಕ್ಕೂ ಏನು ಸಂಬಂಧ..? ನಾನು ಬೊಮ್ಮಾಯಿ ಮೇಲೆ ಆರೋಪ ಮಾಡ್ತಿದ್ದೀನಿ, ನಾನು ಜಾತಿ ಮೇಲೆ ಆರೋಪ ಮಾಡೇ ಇಲ್ಲ. ಸರ್ಕಾರದ ಮೇಲೆ ನಾನು ಆರೋಪ ಮಾಡಿದ್ದೇನೆ. ನೀವು ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದೀರಿ. ಆದರೆ ಜನರು ಬುದ್ಧಿವಂತರಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ : Oscar Award : ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್- ಮರೆಯಲಾರದ ಅನುಭವ ಎಂದ ನಿರ್ದೇಶಕ

ಇದನ್ನೂ ಓದಿ : Naleen Kumar Kateel:‘ಸೋನಿಯಾ ಗಾಂಧಿಗೆ ಹಣ ನೀಡಿ ಸಿಎಂ ಆಗಿದ್ದವರು ಸಿದ್ದರಾಮಯ್ಯ’ : ನಳೀನ್​ಕುಮಾರ್​ ಕಟೀಲ್​ ಆರೋಪ

Siddaramaiah hit back at Nalin Kumar Kateel’s allegations

Comments are closed.