Seedlings : ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸುತ್ತೆ ಮೊಳಕೆ ಕಾಳು

(Seedlings)ನಾನಾ ಕಾರಣಗಳಿಂದಾಗಿ ಮಕ್ಕಳು ಜ್ಞಾಪಕಶಕ್ತಿಯ ಕೊರತೆ ಕಾಡುತ್ತಿದೆ. ಇದ್ದರಿಂದಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ತೊಡುಕುಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಪೌಷ್ಟಿಕಾಂಶ ಕೊರತೆ, ಇನ್ನೊಂದು ಅತಿಯಾದ ಮೊಬೈಲ್‌ ಬಳಕೆ. ಹೌದು, ಹಾಗೆ ಪದೇ ಪದೇ ಕಾಯಿಲೆಗೆ ಒಳಗಾಗುವುದು ಕೂಡ ಜ್ಞಾಪಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಸರಿಯಾದ ಸಮಯಕ್ಕೆ ಊಟ ಹಾಗೂ ತಿಂಡಿಗಳನ್ನು ತಿನ್ನದೇ ಇರುವುದರಿಂದ ಅಪೌಷ್ಟಿಕಾಂಶ ಉಂಟಾಗುತ್ತದೆ. ಹಾಗಾಗಿ ಮಕ್ಕಳಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ.

ಬೇಕಾಗುವ ಪದಾರ್ಥಗಳು:
ಪಚ್ಚೆ ಹೆಸರು ಕಾಳು
ಕ್ಯಾರೆಟ್‌

ಬಳಸುವ ವಿಧಾನ:
ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆ ಕಟ್ಟಿಸಿದ ಪಚ್ಚೆ ಹೆಸರು ಕಾಳು ಹಾಗೂ ತುರಿದ ಕ್ಯಾರೆಟ್‌ನ್ನು ಮಿಶ್ರಣ ಮಾಡಿ ಕೊಡುವುದರಿಂದ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಅದಲ್ಲದೇ ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಮೊಳಕೆ ಕಾಳನ್ನು ಎಷ್ಟು ತಿಂದರೂ ದೇಹದ ತೂಕ ಹೆಚ್ಚಾಗುವುದಿಲ್ಲ. ಈ ಮೊಳಕೆ ಕಾಳಿನಲ್ಲಿ ಹೆಚ್ಚಿನ ವಿಟಮಿನ್‌ ಬಿ, ಸಿ ಮತ್ತು ವಿಟಮಿನ್‌ ಕೆ ಇರುವುದ್ದರಿಂದ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಸಕ್ಕರೆಕಾಯಿಲೆ ಹಾಗೂ ಸ್ಥೂಲಕಾಯದಿಂದ ದೂರ ಇರಬಹುದಾಗಿದೆ.

ಪಚ್ಚೆ ಹೆಸರು ಮೊಳಕೆ ಕಾಳು ಮತ್ತು ಕ್ಯಾರೆಟ್‌ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಹೃದಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದು ಗರ್ಭಿಣಿಯವರಿಗೆ ಉತ್ತಮ ಆಹಾರವಾಗಿದೆ. ಗರ್ಭಿಣಿಯರು ಮೊಳಕೆಕಾಳು ಮತ್ತು ತುರಿದ ಕ್ಯಾರೆಟ್‌ನ್ನು ಪ್ರತಿದಿನ ಸೇವಿಸುವುದ್ದರಿಂದ ಮಗುವಿನ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಕ್ಯಾರೆಟ್‌ ತಿನ್ನುವುದರಿಂದ ಕಣ್ಣಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಕಾಲು ನೋವು ಹಾಗೂ ಸೆಳೆತ ಇದ್ದವರು ಪ್ರತಿದಿನ ಸೇವಿಸುವುದರಿಂದ ನೋವು ಶಮನಗೊಳ್ಳುತ್ತದೆ. ದೇಹದಲ್ಲಿ ಪ್ರೋಟೀನ್‌ ಕೊರತೆಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆ ಆಗುತ್ತದೆ. ಒಂದು ಕಪ್‌ ಈ ಮೊಳಕೆ ಕಾಳಿನಲ್ಲಿ ಶೇ ೨೮ರಷ್ಟು ಪ್ರೋಟೀನ್‌ ಅಂಶವಿರುತ್ತದೆ. ಹಾಗಾಗಿ ಪಚ್ಚೆ ಹೆಸರನ್ನು ಮೊಳಕೆ ಕಟ್ಟಿಸಿ ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ದೇಹಕ್ಕೆ ಬೇಕಾಗುವಷ್ಟು ಪ್ರೋಟೀನ್‌ನ್ನು ಒದಗಿಸುತ್ತದೆ.

ಇದನ್ನೂ ಓದಿ : ಸಂಧಿವಾತದ ನೋವಿಗೆ ಪರಿಹಾರ ಸಂದುಬಳ್ಳಿ

ಇದನ್ನೂ ಓದಿ : ಕಾಡುತ್ತಿರುವ ಮಂಡಿ ನೋವಿಗೆ ಮನೆಯಲ್ಲೇ ಔಷಧ : ಈ ಜೆಲ್‌ ಒಮ್ಮೆ ಟ್ರೈ ಮಾಡಿ

ಇದನ್ನೂ ಓದಿ : ಮಕ್ಕಳಲ್ಲಿ ಕಾಡುವ ಜೆಂತು ಹುಳು, ಕ್ರಿಮಿಹುಳುಗಳಿಗೆ ಮನೆಯಲ್ಲೇ ಇದೆ ಔಷಧ

ಇದನ್ನೂ ಓದಿ : ಹೃದಯಾಘಾತದ ಹಿಂದೆ ಇರುವ ಅಪಾಯಕಾರಿ ಅಂಶಗಳ ಬಗ್ಗೆ ನಿಮಗೆ ಗೊತ್ತಾ

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಹಾಗೇ ಮಕ್ಕಳಲ್ಲಿ ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಒಂದಲಗ ಸೊಪ್ಪು, ತುಳಸಿದಳ ಹಾಗೂ ಬೂದಕುಂಬಳಕಾಯಿನ್ನು ಕೂಡ ನೀಡುತ್ತಾರೆ. ಒಂದಲಗ ಸೊಪ್ಪುನ್ನು ಚಟ್ನಿ ಹಾಗೂ ತಂಬುಳಿ ಮಾಡುವುದರ ಮೂಲಕ ಸೇವಿಸುತ್ತಾರೆ. ಬೂದಕುಂಬಳಕಾಯಿಯನ್ನು ಜ್ಯೂಸ್‌, ಕಡಬು ಹಾಗೂ ಸಾರು ಮಾಡಿ ತಿನ್ನುತ್ತಾರೆ.

Sprouts improve children’s memory

Comments are closed.