ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ತ್ರಿಶೂಲ ಹಾಗೂ ವಿಜಯಪುರ ಮತ್ತು ಕಾಪು ಪೋಲಿಸರು ಧರಿಸಿದ್ದ ಕೆಸರಿ ವಸ್ತ್ರಕ್ಕೆ ಸಂಬಂಧಪಟ್ಟಂತೆ ಟ್ವಿಟ್ ಮಾಡಿ ಗಮನ ಸೆಳದಿದ್ದರು. ಇದೇ ವೇಳೆ ಹಲವು ಮಂದಿ ಈ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ನಡೆಸಿದ್ದರು. ಆದರೆ ಇಲ್ಲೋಬ್ಬ ಆಸಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವಿಟರ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ.
ರಾಜಕೀಯ ಕಾರಣಕ್ಕಾಗಿ ರಾಜಕಾರ್ಣಿಗಳು ಹಲವು ರೀತಿಯ ಹೇಳಿಕೆಗಳನ್ನು ನೀಡುತ್ತಾ ಇರುತ್ತಾರೆ. ಸಿದ್ದರಾಮಯ್ಯನವರ ಹೇಳಿಕೆಗೆ ಮರು ಉತ್ತರ ಕೊಡುವ ಬರದಲ್ಲಿ ಈ ವ್ಯಕ್ತಿ ಕೊಲೆ ಬೆದರಿಕೆಯನ್ನೇ ಹಾಕಿದ್ದಾನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವಿಟರ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪ್ರಕಾಶ್ ಎನ್ನುವ ಟ್ವಿಟರ್ ಅಕೌಂಟ್ ನಿಂದ ಈ ಕೊಲೆ ಬೆದರಿಕೆಯನ್ನು ಟ್ವಿಟ್ ಮಾಡಲಾಗಿದೆ.
ಈಗ ಟ್ವಿಟರ್‌ನಲ್ಲಿ #prakash ಎನ್ನುವ ಹೆಸರಿನಲ್ಲಿರುವ ಟ್ವಿಟ್ ಬಳಕೆ ದಾರ ಸಿದ್ದರಾಮಯ್ಯ ಅವರ ಟ್ವಿಟ್ ಅನ್ನು ರೀಟ್ವಿಟ್ ಮಾಡಿ ನಮ್ಮ @CMofKarnataka @BSBommai ಅವರಿಗೆ ಯಾರ ಕೈಗೆ ಏನು ಕೊಡಬೇಕೆಂದು ಚೆನ್ನಾಗಿ ಗೊತ್ತು! ತ್ರಿಶೂಲ ಕೊಟ್ರೆ ಮೊದಲ ಬೇಟೆ ನೀನೇ ಅಂತ ಕೊಲೆ ಬೆದರಿಕೆ ಹಾಕಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂಕೂಡ ವಿರೋಧ ವ್ಯಕ್ತವಾಗುತ್ತಿದ್ದು, ಮಾಜಿ ಸಿಎಂಗೆ ಈ ರೀತಿ ಕೊಲೆ ಬೆದರಿಕೆ ಹಾಕಿದ್ರೆ ಜನಸಾಮಾನ್ಯನ ಗತಿ ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡೀಲ್ ರಾಜ ಎಂದ ಕಾಂಗ್ರೆಸ್ ನಾಯಕರು
(Former CM threatened with death on Twitter : What about the masses?)