IMA Scam : ಐಎಂಎ ಗ್ರಾಹಕರಿಗೆ ಸಿಹಿಸುದ್ದಿ: ನಿಯಮ ಪಾಲಿಸಿದ್ರೇ ವಾಪಸ್ ಸಿಗುತ್ತೆ ನಿಮ್ಮ ಚಿನ್ನ

ಬೆಂಗಳೂರು : ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಐಎಂಎ (IMA Scam ) ಕೂಡ ಒಂದು. ಐಎಂಎ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಚಿನ್ನ ಅಡ ಇಟ್ಟವರು ಹಾಗೂ ಚಿನ್ನಕ್ಕಾಗಿ ಹೂಡಿಕೆ‌ ಮಾಡಿದವರು ಇಬ್ಬರೂ ಕಂಗಾಲಾಗಿದ್ದರು. ಆದರೆ ಈಗ ಚಿನ್ನ ಅಡ ಇಟ್ಟ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದೆ. ಹೌದು, ಐಎಂಎನಲ್ಲಿ ಚಿನ್ನ ಆಡ ಇಟ್ಟ ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಷ್ಟಕ್ಕೆ ಅಡವಿಟ್ಟ ಹಣ ಕಳೆದುಕೊಳ್ಳೋ ಭೀತಿಯಲ್ಲಿದ್ದ ಜನರಿಗೆ ಸಮಾಧಾನದ ಸುದ್ದಿಯೊಂದು ಸಿಕ್ಕಿದ್ದು, ಶೀಘ್ರದಲ್ಲೇ ಅಡವು ಇಟ್ಟವರ ಒಡವೆ ಅವರ ಕೈಸೇರೋದು ಫಿಕ್ಸ್ ಎನ್ನಲಾಗ್ತಿದೆ.

ಐಎಂಎನಲ್ಲಿ ಅಡವಿಟ್ಟ ಚಿನ್ನ ವಾಪಸ್ ನೀಡಲು ಐಎಂಎ (IMA Scam ) ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಚಿನ್ನ ಅಡ ಇಟ್ಟಿರೋ ಗ್ರಾಹಕರಿಗೆ ಐಎಂಎ ಸಕ್ಷಮ ಪ್ರಾಧಿಕಾರ ಎರಡು ಕಂಡಿಶನ್ ವಿಧಿಸಿದೆ. ಕಂಡಿಶನ್ ಏನೇಂದರೇ, ಚಿನ್ನ ಅಡವಿಟ್ಟು ಸಾಲ ಪಡೆದವರು ಬಾಕಿ ಸಾಲದ ಹಣ ಕಟ್ಟಬೇಕು. ಹಾಗೂ ಈವರೆಗಿನ ಭದ್ರತಾ ಶುಲ್ಕ ಪಾವತಿಸಬೇಕು. ಏಪ್ರಿಲ್ 5 ರೊಳಗೆ ಸಾಲದ ಹಣ ಹಾಗೂ ಭದ್ರತಾ ಶುಲ್ಕ ಕಟ್ಟಿದಲ್ಲಿ ನಿಮ್ಮ ಒಡವೆ ನಿಮ್ಮ ಕೈಸೇರಲಿದೆ.

ಏಪ್ರಿಲ್ 5 ರ ಒಳಗೆ ನೀವು ಹಣ ಕಟ್ಟಿದಲ್ಲಿ, ಏಪ್ರಿಲ್ 6 ರಿಂದ ಹಣ ನಿಮ್ಮ ಕೈ ಸೇರಲಿದೆ.ಇನ್ನು ನಿಮ್ಮ ನೆಚ್ಚಿನ ಚಿನ್ನಾಭರಣದ ಮೇಲೆ ಸಾಲ ಬಡ್ಡಿ ಎಲ್ಲವೂ ಸೇರಿ ಬಾಕಿ ಎಷ್ಟಿದೆ ಎಂದು ತಿಳಿದುಕೊಳ್ಳಲು ನೀವು ಐಎಂಎ ( IMA ) ಕ್ಲೈಮ್ಸ್ ವೆಬ್ ಸೈಟ್ ಅವಕಾಶ ಕಲ್ಪಿಸಿದೆ. ಬಳಿಕ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಅಕೌಂಟ್ ಗೆ ಎನ್ಇಎಫ್ ಟಿ, ಅರ್ ಟಿ ಜಿಎಸ್ ಮಾಡಲು ಸೂಚನೆ. ನಂತರ ಯುಟಿಆರ್ ಸಂಖ್ಯೆ ವೆಬ್ ಸೈಟ್ ನಲ್ಲಿ ನಮೂದಿಸಲು ಸೂಚನೆ ನೀಡಲಾಗಿದೆ. ನಿಮ್ಮ ಯುಟಿಆರ್ ಸಂಖ್ಯೆ ಎಂಟ್ರಿ ಆದ ಬಳಿಕ ಮೆಸೇಜ್ ಮೂಲಕ ಚಿನ್ನ ವಾಪಸ್ ನೀಡುವ ಮಾಹಿತಿ ರವಾನೆಯಾಗಲಿದೆ.

ಈ ಬಗ್ಗೆ ಈಗಾಗಲೇ ಐಎಂಎ (IMA Scam )ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರಿಗೆ ಮೆಸೇಜ್ ಮೂಲಕ ಮಾಹಿತಿ ರವಾನೆಯಾಗಿದ್ದು, ಬಹುದಿನಗಳ ನಂತರ ಐಎಂಎ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತಾಗಿದೆ. ನಗರದ ವಿಶ್ವೇಶ್ವರಯ್ಯ ಟವರ್ ನ ಐಎಂಎ ಸಕ್ಷಮ ಪ್ರಾಧಿಕಾರ ಕಚೇರಿಯಲ್ಲಿ ಹಣ ಪಾವತಿಸಿ ಬಂದ ಗ್ರಾಹಕರಿಗೆ ಐಎಂಎ ಅಧಿಕಾರಿಗಳು ಚಿನ್ನಾಭರಣ ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ : ಬಹುಕೋಟಿ ಐಎಂಎ ಹಗರಣ ಸಂತ್ರಸ್ಥರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ

ಇದನ್ನೂ ಓದಿ :  ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಕೋಮು ಗಲಭೆ ಸೃಷ್ಟಿಸುವ ಹುನ್ನಾರ : ಎನ್‌ಐಎ ವರದಿ

IMA Scam Good News for IMA Customers, Returning Your Gold

Comments are closed.