Mekedatu: ನಮ್ಮ ಅನುಮತಿ ಇಲ್ಲದೇ ಮೇಕೆದಾಟು ಜಾರಿಯಾಗಲ್ಲ…! ಕರುನಾಡಿಗೆ ಸೆಡ್ಡು ಹೊಡೆದ ಅಣ್ಣಾಮಲೈ…!!

ಯಾವುದೇ ನದಿ ಕೆಳಗಿನ ರಾಜ್ಯದ ಅನುಮತಿ ಇಲ್ಲದೇ ಆಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಆಣೆಕಟ್ಟು ಯೋಜನೆ ಜಾರಿಗೆ ಸಾಧ್ಯವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಅಣ್ಣಾಮಲೈ ಕರ್ನಾಟಕಕ್ಕೆ ಸೆಡ್ಡು ಹೊಡೆದಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಮಾಧ್ಯಮ ಸಂದರ್ಶನವೊಂದರಲ್ಲಿ‌ ಮಾತನಾಡಿದ್ದು, ತಮಿಳುನಾಡಿನ ಸಮ್ಮತಿ ಇಲ್ಲದೇ ಮೇಕೆದಾಟು ಯೋಜನೆ ಜಾರಿಗೆ ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತಮಿಳುನಾಡನ್ನು ಬಿಟ್ಟು ಕೊಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಮೇಕದಾಟು ವಿಚಾರದಲ್ಲಿ ತಮಿಳುನಾಡು ಬಿಜೆಪಿಯ ನಿಲುವು ಸ್ಪಷ್ಟವಾಗಿದೆ ಎಂದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ,ನಾವು ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತೇವೆ.ಈ ವಿವಾದ ೨೦೧೭ ರಿಂದಲೂ ಸುಪ್ರೀಂ ಕೋರ್ಟ್ ನಲ್ಲಿದೆ.ಅಲ್ಲದೇ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಸ್ಪಷ್ಟವಾಗಿದೆ.

ನದಿ ಕೆಳಗಿನ ರಾಜ್ಯದ ಅನುಮತಿ ಇಲ್ಲದೇ ನದಿಗೆ ಆಣೆಕಟ್ಟು ಕಟ್ಟುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹೇಳಿದೆ.ಹೀಗಾಗಿ ಮೇಲೆದಾಟಿ ನಲ್ಲಿ ಆಣೆಕಟ್ಟು ನಿರ್ಮಿಸಲು ನಮ್ಮ ಅನುಮತಿ ಬೇಕು.ಇದಲ್ಲದೇ ಕೇವಲ ಕರ್ನಾಟಕ ಚಿಂತಿಸಿದ ಮಾತ್ರಕ್ಕೆ‌ಆಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕು.

ಕೇಂದ್ರ ಸರ್ಕಾರ ನಮ್ಮ ವಾದವನ್ನು ಆಲಿಸಿ ಬೆಂಬಲಿಸುವ ವಿಶ್ವಾಸವಿದೆ ಎಂದಿದ್ದಾರೆ.ಅಲ್ಲದೇ ಈ ಯೋಜನೆಯಿಂದ ತಮಿಳುನಾಡಿನ ರೈತರ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದಿದ್ದಾರೆ.ಅಲ್ಲದೇ ನದಿಪಾತ್ರದ‌ ರಾಜ್ಯದ ಅನುಮತಿ ಅಗತ್ಯ ಎಂಬ ಸಂಗತಿಯನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆಯೂ ಹೇಳಿದೆ. ಹೀಗಾಗಿ ಕರ್ನಾಟಕ ಮೇಕೆದಾಟು ಆರಂಭಿಸಲು ಸಾಧ್ಯವಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

ಆದರೆ ಉಪವಾಸ ಸತ್ಯಾಗ್ರಹದ ಬಗ್ಗೆಯಾಗಲಿ ಅಥವಾ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಲು ಅಣ್ಣಾ ಮಲೈ ನಿರಾಕರಿಸಿದ್ದಾರೆ. ಒಟ್ಟಿನಲ್ಲಿ ಜಯಲಲಿತಾ ಕಾಲದಿಂದಲೂ ಮೇಕೆದಾಟು ಯೋಜನೆ ವಿರೋಧಿಸುತ್ತಲೇ ಬಂದಿದ್ದ ತಮಿಳುನಾಡು ಇನ್ನೂ ತನ್ನ ಖ್ಯಾತೆ ಮುಂದುವರೆಸುತ್ತಲೇ ಇರೋದು ದುರಂತವೇ ಸರಿ.

Comments are closed.