rise in electricity rates : ರಾಜ್ಯದಲ್ಲಿ ಶೀಘ್ರದಲ್ಲಿಯೇ ವಿದ್ಯುತ್​ ದರ ಏರಿಕೆಯ ಸುಳಿವು ನೀಡಿದ ಸಚಿವ ಸುನೀಲ್​ ಕುಮಾರ್​

ಬೆಂಗಳೂರು : rise in electricity rates : ದಿನಬಳಕೆ ವಸ್ತುಗಳ ದರ ಏರಿಕೆ, ತೈಲೋತ್ಪನ್ನಗಳ ದರ ಏರಿಕೆ ಹೀಗೆ ಬೆಲೆ ಏರಿಕೆಯಿಂದ ಜನಸಾಮಾನ್ಯ ಕಂಗಾಲಾಗಿರುವ ಬೆನ್ನಲ್ಲೇ ಇದೀಗ ರಾಜ್ಯದ ಇಂಧನ ಸಚಿವಾಲಯ ಕೂಡ ಶ್ರೀಸಾಮಾನ್ಯನ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲು ಮುಂದಾಗಿದೆ. ಈ ಬಗ್ಗೆ ಸ್ವತಃ ಇಂಧನ ಸಚಿವ ವಿ.ಸುನೀಲ್​ ಕುಮಾರ್​ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.


ವಿಧಾನಸೌಧದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಿಫಾರಸು ಮಾಡಿದರೆ ದರ ಏರಿಕೆ ಮಾಡುವುದು ಅನಿವಾರ್ಯವಾಗಿರಲಿದೆ.ಇಂಧನ ಇಲಾಖೆಗೆ ಬೇರೆ ಬೇರೆ ಇಲಾಖೆಗಳಿಂದ ಹಣ ಬರಬೇಕಿದೆ. ನೀರಾವರಿ ಇಲಾಖೆ,ಬಿಡಬ್ಲುಎಸ್​ಎಎಸ್​ಬಿ , ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಇಂಧನ ಇಲಾಖೆಗೆ ಹಣ ನೀಡುವುದು ಬಾಕಿ ಇದೆ ಎಂದು ಹೇಳಿದ್ದಾರೆ.


ದರ ಏರಿಕೆ ಸಂಬಂಧ ಕೆಇಆರ್​ಸಿ ವರದಿಗೆ ಕಾಯುತ್ತಿದ್ದೇವೆ. ಅವರು ವರದಿ ನೀಡಿದ ಬಳಿಕ ಅದನ್ನು ಪರಿಶೀಲಿಸಿ ಬಳಿಕ ವಿದ್ಯುತ್​ ದರ ಏರಿಕೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಆರೋಗ್ಯ ಇಲಾಖೆ, ಬಿಬಿಎಂಪಿಗೆ ಶಾಕ್ : ನಗರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ ರೋಗಿಗಳ ದಾಖಲಾತಿ

ಬೆಂಗಳೂರು : ಕೊರೋನಾ ಹೆಚ್ಚಾದ್ರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ‌ಕಡಿಮೆ ಇದೆ ಎಂಬ ಸಮಾಧಾನದಲ್ಲಿದ್ದ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಗೆ ಸಖತ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಚಳಿ ಸೇರಿದಂತೆ ಹವಾಮಾನದ ವೈಪರೀತ್ಯ, ಆರೋಗ್ಯ ಸಮಸ್ಯೆ ಹಾಗೂ ಕೊರೋನಾ ಎಲ್ಲವೂ ಸೇರಿ ಜನರನ್ನು ಹೈರಾಣಾಗಿಸಿದ್ದು ನಿಧಾನಕ್ಕೆ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗುವವರ ( increasing patient enrollment ) ಸಂಖ್ಯೆಯಲ್ಲಿ ಏರಿಕೆಯಾಗ್ತಿದೆ.

ಪ್ರತಿನಿತ್ಯ ನಗರದ ಸಾವಿರಾರು ಖಾಸಗಿ ಆಸ್ಪತ್ರೆಗಳಲ್ಲಿ ನೂರಾರು ಜನರು ಆಡ್ಮಿಶನ್ ಪಡೆಯುತ್ತಿದ್ದು, ಶೀತ,ಜ್ವರ, ಮೈ ಕೈ ನೋವು, ತಲೆಭಾರ,ಉಸಿರಾಟದ ತೊಂದರೆ, ಸೈನಸ್ ಹೀಗೆ ನಾನಾ ಸಮಸ್ಯೆಗಳಿಂದ ದಾಖಲಾತಿ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನಗಳಲ್ಲಿ 4,795 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಜನವರಿ 18 ರಂದು 4,795 ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಇನ್ನೊಂದೆಡೆ ನಗರದಲ್ಲಿ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚು ಅವಲಂಬಿಸುತ್ತಿದ್ದು ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಲಾರಂಭಿಸಿದೆ.

ಮಾಹಿತಿಗಳ ಪ್ರಕಾರ ನಗರದಲ್ಲಿ ಆಕ್ಸಿಜನ್ ಮತ್ತು ಹೆಚ್ ಡಿ ಯು ಬೆಡ್ ದಾಖಲಾತಿ ಹೆಚ್ಚಳವಾಗಿದೆ. ಇದುವರೆಗೂ ಆಕ್ಸಿಜನ್ ಹಾಗೂ HDU ಬೆಡ್ ಗಳ ಸಂಖ್ಯೆ 851ಕ್ಕೆ ಏರಿಕೆಯಾಗಿದೆ. ಜನವರಿ 14-18ರವರೆಗೆ 538 ರಷ್ಟಿದ್ದ ದಾಖಲಾತಿ ಒಂದೇ ದಿನ 538 ರಿಂದ‌ 871ಕ್ಕೆ ಏರಿಕೆಯಾಗಿದೆ. ಇನ್ನು ಐಸಿಯು ಹಾಗೂ ವೆಂಟಿಲೇಟರ್ ಬೆಡ್ ಗಳ ದಾಖಲಾತಿಯೂ ಅಧಿಕವಾಗಿದ್ದು, ವೆಂಟಿಲೇಟರ್ ಬೆಡ್ ಗಳ ದಾಖಲಾತಿ 35 ರಿಂದ 100 ಕ್ಕೆ ಏರಿಕೆಯಾಗಿದೆ.

ಇನ್ನೊಂದೆಡೆ ನಗರದಲ್ಲಿ ಕೊರೋನಾ ಸೋಂಕಿತರಿಗೆ ಸುಲಭವಾಗಿ ಚಿಕಿತ್ಸೆ ಒದಗಿಸಲು ಟ್ರಯಾಜಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮಾತ್ರವಲ್ಲ ನಗರದಲ್ಲಿ 6 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ೫೦೦೦ ಕ್ಕೂ ಅಧಿಕ ಬೆಡ್ ಮೀಸಲಿರಿಸಲಾಗಿದೆ. ಆದರೂ ಸರ್ಕಾರಿ ಆಸ್ಪತ್ರೆಗಳತ್ತ ಮುಖಮಾಡಲು ರೋಗಿಗಳು ಮನಸ್ಸು ಮಾಡುತ್ತಿಲ್ಲ. ಬದಲಾಗಿ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚು ದಾಖಲಾತಿ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್‌ಗಳು ಇದ್ರೂ ಅಡ್ಮಿಟ್ ಆಗದ ರೋಗಿಗಳು ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದಾರೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರಲ್ 4,293 ಬೆಡ್‌ಗಳ ನಿಯೋಜನೆಯಾಗಿದ್ದು ಈ ಪೈಕಿ 4,293 ರಲ್ಲಿ 3,983 ಬೆಡ್‌ಗಳು ಲಭ್ಯವಿದೆ. ಇನ್ನು HDU 2,723 ಬೆಡ್‌ಗಳು ನಿಯೋಜನೆ ಯಾಗಿದ್ದು ಇದರಲ್ಲಿ 2,723ರಲ್ಲಿ 2,533 ಬೆಡ್‌ಗಳು ಲಭ್ಯವಿದೆ. 451 ICU ಬೆಡ್‌ಗಳಲ್ಲಿ 382 ಬೆಡ್ ಲಭ್ಯವಿದೆ. ಆದರೂ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾದ ಸಮಸ್ಯೆಯಿಂದ ಭಯಭೀತರಾದಂತಿರೋ ಜನರುಖಾಸಗಿ ಆಸ್ಪತ್ರೆಗೆ ಒಲವು ತೋರುತ್ತಿದ್ದಾರೆ.

There might be rise in electricity rates in Karnataka & minister sunil kumar statements

ಇದನ್ನು ಓದಿ : Coronavirus pandemic : ದೇಶದಲ್ಲಿ 3 ಲಕ್ಷ ಗಡಿದಾಟಿದ ದೈನಂದಿನ ಕೋವಿಡ್​ ಪ್ರಕರಣ

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

Comments are closed.