COVID-19 : ಐದು ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್​ ಕಡ್ಡಾಯವಲ್ಲವೆಂದ ಕೇಂದ್ರ ಸರ್ಕಾರ

COVID-19 : ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚಿದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಮಾಹಿತಿ ನೀಡಿವೆ. ಅಲ್ಲದೇ ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಈ ಎಲ್ಲದರ ನಡುವೆ ಕೇಂದ್ರ ಸರ್ಕಾರವು ಕೊರೊನಾ ಸೋಂಕಿನ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳತ್ತಲೇ ಬರ್ತಿದೆ. ಇದೀಗ ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯು ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರನ್ವಯ ಮಕ್ಕಳಿಗೆ ಕೋವಿಡ್​ ಸೋಂಕು ಎಷ್ಟೇ ತೀವ್ರತರವಾಗಿದ್ದರೂ ಸಹ ಆ್ಯಂಟಿ ವೈರಸ್​ ಹಾಗೂ ಮೊನೋಕ್ಲೊನಲ್​ ಆ್ಯಂಟಿಬಾಡಿಗಳನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ.


ಮಕ್ಕಳು ಹಾಗೂ ಹದಿಹರೆಯದವರಿಗೆ ಕೋವಿಡ್​ 19 ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್​ ಧರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇನ್ನು 6 ರಿಂದ 11 ವರ್ಷದ ಒಳಗಿನ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ಸೂಕ್ತವಾಗಿ ಮಾಸ್ಕ್​ ಧರಿಸಲು ಸಾಧ್ಯವಾದರೆ ಮಾತ್ರ ಮಾಸ್ಕ್​ ಧರಿಸಬಹುದು ಎಂದು ನಿರ್ದೇಶನ ನೀಡಿದೆ.


ಇನ್ನು 12 ವರ್ಷ ಮೇಲ್ಪಟ್ಟವರು ಮಾತ್ರ ಎಲ್ಲರಂತೆ ಮಾಸ್ಕ್​ ಧರಿಸುವುದು ಅನಿವಾರ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡ ತಜ್ಞರ ತಂಡವು ಈ ಮಾರ್ಗಸೂಚಿಯನ್ನು ಪರಿಷ್ಕೃತಗೊಳಿಸಿದೆ.


ಇನ್ನು ವಿದೇಶಗಳಲ್ಲಿ ಸಿಕ್ಕಂತಹ ದತ್ತಾಂಶಗಳನ್ನು ನೋಡಿದರೆ ಓಮಿಕ್ರಾನ್​​​ ರೂಪಾಂತರಿಯು ಹೆಚ್ಚು ಗಂಭೀರ ಲಕ್ಷಣಗಳನ್ನು ಹೊಂದಿಲ್ಲ. ಹಾಗೆಂದ ಮಾತ್ರಕ್ಕೆ ಕೊರೊನಾ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನು ಅಸಿಂಪ್ಟೋಮ್ಯಾಟಿಕ್​, ಸೌಮ್ಯ , ಮಧ್ಯಮ ಹಾಗೂ ಗಂಭೀರ ಎಂದು ವಿಂಗಡಿಸಲಾಗಿದೆ.


ಮಾರ್ಗಸೂಚಿಯ ಪ್ರಕಾರ ಕೋವಿಡ್​ 19 ಒಂದು ವೈರಲ್​ ಸೋಂಕಾಗಿದ್ದು ಈ ಸೋಂಕನ್ನು ನಿವಾರಿಸುವಲ್ಲಿ ಆಂಟಿಮೈಕ್ರೋಬಯಲ್ಸ್​ ಯಾವುದೇ ರೀತಿಯ ಪಾತ್ರ ವಹಿಸುವುದಿಲ್ಲ ಎಂದು ಹೇಳಲಾಗಿದೆ.

Masks Not Recommended For Children Below 5 Years, Says Revised Guidelines

ಇದನ್ನು ಓದಿ : T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

Comments are closed.