ಜಯಲಕ್ಷ್ಮೀ ಸಿಲ್ಕ್ಸ್‌ ಮಾಲೀಕ, ಸಿಬ್ಬಂದಿಗಳಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆಗೆ ಯತ್ನ : ಸಾರ್ವಜನಿಕರಿಂದ ತೀವ್ರ ಆಕ್ರೋಶ

ಉಡುಪಿ ನಗರ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ಸ್‌ ಮುಂಭಾಗದ ರಸ್ತೆಯಲ್ಲಿ ಆಟೋ ಪಾರ್ಕ್‌ ಮಾಡಲಾಗಿತ್ತು. ಈ ವೇಳೆಯಲ್ಲಿ ಆಟೋ ಚಾಲಕ ಹಾಗೂ ಜಯಲಕ್ಷ್ಮೀ ಸಿಲ್ಕ್ಸ್‌ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ

ಉಡುಪಿ : ಹೊಟ್ಟೆಪಾಡಿಗಾಗಿ ದುಡಿಯುವ ಅಟೋ ಚಾಲಕನ ಮೇಲೆ ಉಡುಪಿಜಯಲಕ್ಷ್ಮೀ ಸಿಲ್ಕ್ಸ್‌ (Udupi Jayalakshmi Silks)  ಮಾಲೀಕ ಹಾಗೂ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಆಟೋ ರಸ್ತೆಯಲ್ಲಿ ಪಾರ್ಕ್‌ ಮಾಡಿದ ಕಾರಣಕ್ಕೆ ಹಿಂದೆ ಮುಂದೆ ಕಾರುಗಳನ್ನು ಅಡ್ಡ ಇಟ್ಟು ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಉಡುಪಿ ನಗರ ಬನ್ನಂಜೆಯಲ್ಲಿರುವ (Udupi Bannanje) ಜಯಲಕ್ಷ್ಮೀ ಸಿಲ್ಕ್ಸ್‌ ಮುಂಭಾಗದ ರಸ್ತೆಯಲ್ಲಿ ಆಟೋ ಪಾರ್ಕ್‌ ಮಾಡಲಾಗಿತ್ತು. ಈ ವೇಳೆಯಲ್ಲಿ ಆಟೋ ಚಾಲಕ ಹಾಗೂ ಜಯಲಕ್ಷ್ಮೀ ಸಿಲ್ಕ್ಸ್‌ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಬಂದ ಜಯಲಕ್ಷ್ಕೀ ಸಿಲ್ಕ್ಸ್‌ ಮಾಲೀಕರ ಸೂಚನೆಯಂತೆ ಆಟೋದ ಹಿಂದೆ ಮುಂದೆ ಜಯಲಕ್ಷ್ಮೀ ಸಿಲ್ಕ್ಸ್‌ಗೆ ಸೇರಿದ ವಾಹನವನ್ನು ಇಟ್ಟು ಅಡ್ಡಗಟ್ಟಿದ್ದಾರೆ.

Udupi Jayalakshmi Silks owner and staff attempt to attack a rickshaw Driver public outrage
Image Credit to Original Source

ಅಲ್ಲದೇ ಆಟೋ ಚಾಲಕನ ಕಿಸೆಯಲ್ಲಿದ್ದ ಕೀಯನ್ನು ಕಸಿದುಕೊಂಡು ಸುಮಾರು 3 ಗಂಟೆಗೂ ಅಧಿಕ ಕಾಲ ಆಟೋ ಮುಂದೆಕ್ಕೆ ಚಲಿಸದಂತೆ ಮಾಡಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಜಯಲಕ್ಷ್ಮೀ ಸಿಲ್ಕ್ಸ್‌ ಸಿಬ್ಬಂದಿ ಹಾಗೂ ಮಾಲೀಕರ ವರ್ತನೆಗೆ ಸಾರ್ವಜನಿಕರು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ವೇಳೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆರಂಭದಲ್ಲಿ ಆಟೋ ಚಾಲಕನನ್ನೇ ಬೆದರಿಸಿದ್ದಾರೆ.

ಇದನ್ನೂ ಓದಿ : ಬಡವರಿಗೆ ಮನೆಗಳನ್ನು ನಿರ್ಮಿಸಿ ಮಾದರಿ ಆಯ್ತು ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ಕಾರ್ಯ

ಈ ವೇಳೆಯಲ್ಲಿ ಇತರ ಆಟೋ ಚಾಲಕರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಕೂಡ ಪೊಲೀಸರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತಲೇ ಸ್ಥಳಕ್ಕೆ ಬಂದ ಟ್ರಾಫಿಕ್‌ ಪೋಲಿಸರು ಜಯಲಕ್ಷ್ಮೀ ಸಿಲ್ಕ್ಸ್‌ಗೆ ಸೇರಿದ ವಾಹನ ತೆರವು ಗೊಳಿಸಿದ್ದು, ಆಟೋ ಚಾಲಕನಿಗೆ ಕೀ ಕೊಡಿಸಿದ್ದಾರೆ.

Udupi Jayalakshmi Silks owner and staff attempt to attack a rickshaw Driver public outrage
Image Credit to Original Source

ಆಟೋ ಚಾಲಕರಿಗೆ ಈ ಬಟ್ಟೆ ಅಂಗಡಿಯಿಂದ ಕಳೆದ ಕೆಲವು ಸಮಯಗಳಿಂದಲೂ ಸಮಸ್ಯೆ ಆಗುತ್ತಿದೆ ಎಂಬ ಅಳಲನ್ನು ರಿಕ್ಷಾ ಚಾಲಕರು ತೋಡಿಕೊಂಡಿದ್ದಾರೆ. ಬಟ್ಟೆ ಅಂಗಡಿಗೆ ಬರುವ ಗ್ರಾಹಕರಿಗೆ ತಮ್ಮ ಮಹಿಗೆಯಲ್ಲಿಯೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಅನ್ನೋ ನಿಯಮವಿದೆ. ಆದರೆ ಇಲ್ಲಿ ನಿಯಮವನ್ನು ಪಾಲಿಸಲಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಮಾಲೀಕರ, ಸಿಬ್ಬಂದಿಗಳ ವರ್ತನೆಗೆ ಸಾರ್ವಜನಿಕರ ಆಕ್ರೋಶ :
ಆಟೋವನ್ನು ಮೂರು ಗಂಟೆಗಳ ಕಾಲ ತಡೆ ಹಿಡಿದು ಹೊಟ್ಟೆ ಪಾಡಿಗೆ ದುಡಿಯುವ ಆಟೋ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿರುವ ಬಟ್ಟೆ ಅಂಗಡಿಯ ಮಾಲೀಕರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Udupi Jayalakshmi Silks owner and staff attempt to attack a rickshaw Driver public outrage
Image Credit to Original Source

ಜಯಲಕ್ಷ್ಮೀ ಸಿಲ್ಕ್‌ನಿಂದ ಟ್ರಾಫಿಕ್‌ ಸಮಸ್ಯೆ :
ಮಲ್ಪೆಯಿಂದ ಉಡುಪಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಬನ್ನಂಜೆ ಬಳಿಯಲ್ಲಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಜಯಲಕ್ಷ್ಮೀ ಸಿಲ್ಕ್ಸ್‌ ಉದ್ಯಾವರದಿಂದ ಇಲ್ಲಿಗೆ ಸ್ಥಳಾಂತರವಾಗಿತ್ತು. ಆದರೆ ನಿತ್ಯವೂ ಬಟ್ಟೆ ಖರೀದಿಗ ಬರುವ ಸಾವಿರಾರು ಸಾರ್ವಜನಿಕರು ಹೆದ್ದಾರಿಯ ಪಕ್ಕದಲ್ಲಿಯೇ ವಾಹನ ನಿಲ್ಲಿಸುತ್ತಿದ್ದಾರೆ.

ಇದರಿಂದಾಗಿ ಪ್ರತಿನಿತ್ಯ, ಅದರಲ್ಲೂ ವೀಕೆಂಡ್‌ಗಳಲ್ಲಂತೂ ವಾಹನ ಸಂಚಾರವೇ ದುಸ್ಥರವಾಗುತ್ತಿದೆ. ಕೆಲವೊಮ್ಮೆ ಬನ್ನಂಜೆಯಿಂದ ಶಿರಿಬೀಡಿನ ವರೆಗೂ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಿ, ಬಟ್ಟೆ ಖರೀದಿಗೆ ತೆರಳುತ್ತಿದ್ದಾರೆ. ಹೀಗಾಗಿ ಬನ್ನಂಜೆಯಿಂದ ಶಿರಿಬೀಡಿನ ವರೆಗೆ ವಾಹನ ನಿಲ್ಲಿಸುವುದಕ್ಕೆ ನಿಷೇಧ ಹೇರಬೇಕು ಅನ್ನೋ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಇದನ್ನೂ ಓದಿ : ಕರಾವಳಿಗರಿಗೆ ಗುಡ್‌ನ್ಯೂಸ್‌ : ಬೆಂಗಳೂರು – ಮಂಗಳೂರು ನಡುವೆ ಸಂಚರಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಯೂ ಟರ್ನ್‌ ಬಂದ್‌ ಮಾಡಿ :
ಬನ್ನಂಜೆಯ ನಾರಾಯಣಗುರು ಮಂದಿರದ ಬಳಿಯಲ್ಲಿ ಯೂ ಟರ್ನ್‌ ನೀಡಲಾಗಿದೆ. ಅಲ್ಲದೇ ಇದೀಗ ಜಯಲಕ್ಷ್ಮೀ ಮಳಿಗೆಯ ಬಳಿಯಲ್ಲಿಯೂ ಯೂಟರ್ನ್‌ ಇದೆ. ಇದರಿಂದಾಗಿ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು, ಪೊಲೀಸ್‌ ಇಲಾಖೆ ಈ ಯೂ ಟರ್ನ್‌ ಬಂದ್‌ ಮಾಡಬೇಕು ಎಂಬ ಆಕ್ರೋಶ ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಯೂಟರ್ನ್‌ ಬಂದ್‌ ಮಾಡಿದ್ರೆ ಆಟೋ ಚಾಲಕರಿಗೆ, ಸಾರ್ವಜನಿಕರಿಗೂ ಸಹಕಾರಿ ಆಗಲಿದೆ ಎಂಬ ಮಾತುಗಳು ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟೊಂದು ಹತ್ತಿರದಲ್ಲಿ ಯೂಟರ್ನ್‌ ನೀಡುವಂತಿಲ್ಲ ಎಂಬ ನಿಯಮವಿದೆ. ಆದರೂ ಪೊಲೀಸರು ಇಲ್ಲಿ ಯೂಟರ್ನ್‌ಗೆ ಅವಕಾಶ ನೀಡಿರುವ ಕ್ರಮದ ವಿರುದ್ದವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Udupi Jayalakshmi Silks owner and staff attempt to attack a rickshaw Driver, public outrage

Comments are closed.