ಕರಾವಳಿಗರಿಗೆ ಗುಡ್‌ನ್ಯೂಸ್‌ : ಬೆಂಗಳೂರು – ಮಂಗಳೂರು ನಡುವೆ ಸಂಚರಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ವಂದೇ ಭಾರತ್‌ ರೈಲನ್ನು ಮಂಗಳೂರು - ಬೆಂಗಳೂರು (Mangalore - Bangalore Vande Bhart Express) ನಡುವೆ ಓಡಿಸಬೇಕು ಎನ್ನುವ ಬೇಡಿಕೆ ಶೀಘ್ರದಲ್ಲಿಯೇ ಈಡೇರಿಕೆ ಆಗಲಿದೆ.

ಮಂಗಳೂರು : ಬೆಂಗಳೂರಿನಿಂದ ಮಂಗಳೂರು ವರೆಗೆ ರೈಲು ಸಂಚಾರ ಇದ್ದರೂ ಕೂಡ ಕರಾವಳಿಗರಿಗೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದುಬಾರಿ ಹಣ ನೀಡಿ ಬಸ್ಸುಗಳಲ್ಲೇ ಸಂಚರಿಸುವ ದುಸ್ಥಿತಿಯಿದೆ. ಆದ್ರೆ ಈ ನಡುವಲ್ಲೇ ಕರಾವಳಿಗರಿಗೆ ಗುಡ್‌ನ್ಯೂಸ್‌ ಒಂದು ಸಿಕ್ಕಿದ್ದು, ಶೀಘ್ರದಲ್ಲೇ ಬೆಂಗಳೂರು ಹಾಗೂ ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (vande bharat express)  ಸಂಚಾರ ನಡೆಸಲಿದೆ.

ವಂದೇ ಭಾರತ್‌ ರೈಲನ್ನು ಮಂಗಳೂರು – ಬೆಂಗಳೂರು (Mangalore – Bangalore Vande Bhart Express) ನಡುವೆ ಓಡಿಸಬೇಕು ಎನ್ನುವ ಬೇಡಿಕೆ ಶೀಘ್ರದಲ್ಲಿಯೇ ಈಡೇರಿಕೆ ಆಗಲಿದೆ. ಈ ಕುರಿತು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು (Nalin Kumar Kateel) ಮಾಹಿತಿ ನೀಡಿದ್ದಾರೆ. ಮಂಗಳೂರು -ಮಡಗಾಂ ವಂದೇ ಭಾರತ್‌ ರೈಲು ಓಡಾಟಕ್ಕೆ ಸರ್ವ ಸನ್ನದ್ದವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆ ಆಗಬಹುದು ಎಂದಿದ್ದಾರೆ.

 

Good news for coastal Karnataka Peoples vande bharat express will travel between Bangalore and Mangalore
Image Credit to Original Source

ಅಲ್ಲದೇ ಮಂಗಳೂರು- ಬೆಂಗಳೂರು ವಂದೇ ಭಾರತ್‌ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿಯೇ ಈ ಬೇಡಿಕೆ ಈಡೇರಿಕೆ ಆಗಲಿದೆ. ಈ ಸಿಹಿ ಸುದ್ದಿಯನ್ನು ನೀಡಿರುವುದಕ್ಕಾಗಿ ಜಿಲ್ಲೆಯ ನಾಗಕರಿಕರ ಪರವಾಗಿ ಕೇಂದ್ರ ಸರಕಾರದ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಈಗಾಗಲೇ ತಿರುವನಂತಪುರನಿಂದ ಕಾಸರಗೋಡು ವರೆಗೆ ಸಂಚಾರ ನಡೆಸುತ್ತಿರುವ ವಂದೇ ಭಾರತ್‌ ರೈಲನ್ನು ಮಂಗಳೂರು ತನಕ ವಿಸ್ತರಣೆ ಆಗಲಿದೆ. ಅಲ್ಲದೇ ಮಂಗಳೂರು – ಎರ್ನಾಕುಲಂ, ಮಂಗಳೂರು – ಮಡಗಾವ್‌ ನಡೆವೆಯೂ ವಂದೇ ಭಾರತ ಸಂಚಾರ ನಡೆಸಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ

ಸದ್ಯ ಬೆಂಗಳೂರು ಮಂಗಳೂರು ನಡುವೆ ಸಂಚಾರ ನಡೆಸುತ್ತಿರುವ ರೈಲು ಕಾಸರಗೋಡು ವರೆಗೂ ಸಂಚರಿಸುತ್ತಿದೆ. ಅಲ್ಲದೇ ಕರಾವಳಿ ಭಾಗದಲ್ಲಿ ರೈಲು ಓಡಾಟಕ್ಕೆ ಉತ್ತಮ ಬೆಂಬಲವೂ ವ್ಯಕ್ತವಾಗುತ್ತಿದೆ. ಇದೀಗ ವಂದೇ ಭಾರತ ರೈಲು ಸಂಚಾರ ಆರಂಭವಾದ್ರೆ ಕರಾವಳಿಗರಿಗೆ ವರದಾನವಾಗಿ ಪರಿಣಮಿಸಲಿದೆ.

Good news for coastal Karnataka Peoples vande bharat express will travel between Bangalore and Mangalore
Image Credit to Original Source

ಕರಾವಳಿ ಭಾಗದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮೂರಿಗೆ ಬರಲು ಅಥವಾ ಬೆಂಗಳೂರಿಗೆ ವಾಪಾಸಾಗಲು ಸದ್ಯ ಬಸ್‌ ಪ್ರಯಾಣವನ್ನೇ ಅನುಸರಿಸಬೇಕಾಗಿದೆ. ಆದರೆ ಮಳೆಗಾಲದ ಅವಧಿಯಲ್ಲಿ ಪದೇ ಪದೇ ಶಿರಾಡಿ ಘಾಟಿ ಕುಸಿತ ಆಗುತ್ತಿರುವುದು ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಇದನ್ನೂ ಓದಿ : ಬಿಜೆಪಿಗೆ ಬಿಎಸ್‌ ಯಡಿಯೂರಪ್ಪ ಅನಿವಾರ್ಯ : ಕರ್ನಾಟಕ ರಾಜ್ಯ ಬಿಜೆಪಿಗೆ ಬಿವೈ ವಿಜಯೇಂದ್ರ ಅಧ್ಯಕ್ಷ

ಇನ್ನು ಕರಾವಾರ – ಉಡುಪಿ- ಮಂಗಳೂರು – ಬೆಂಗಳೂರು ನಡುವೆ ರೈಲು ಸಂಚಾರ ನಡೆಸುತ್ತಿದೆ ಆದ್ರೂ , ಕರಾವಳಿಗರಿಗೆ ಅಷ್ಟೊಂದು ಲಾಭದಾಯಕ ಆಗುತ್ತಿಲ್ಲ. ಹೆಚ್ಚುವರಿ ರೈಲು ಓಡಾಟಕ್ಕೆ ಕರಾವಳಿಗರು ಹಲವು ಬಾರಿ ಬೇಡಿಕೆಯನ್ನು ಇಟ್ಟಿದ್ದಾರೆ.  ರೈಲ್ವೆ ಇಲಾಖೆ ಕರಾವಳಿಗರ ಬೇಡಿಕೆಯನ್ನು ಈಡೇರಿಸಿಲ್ಲ.

ಇದೀಗ ವಂದೇ ಭಾರತ್‌ ರೈಲು ರಾಜಧಾನಿ ಹಾಗೂ ಬಂದರು ನಗರಿಯ ನಡುವೆ ಸಂಚಾರ ನಡೆಸಿದ್ರೆ ಕರಾವಳಿಗರಿಗೆ ವರದಾನವಾಗಲಿದೆ. ಇನ್ನು ಬೆಂಗಳೂರು ಮಂಗಳೂರು ನಡುವೆ ಸಂಚಾರ ನಡೆಸುವ ರೈಲನ್ನು ಕಾರವಾರ – ಗೋವಾದ ವರೆಗೆ ಕೂಡ ವಿಸ್ತರಣೆ ಮಾಡಬೇಕು ಅನ್ನೋ ಬೇಡಿಕೆಯೂ ಕೇಳಿ ಬರುವ ಸಾಧ್ಯತೆಯಿದೆ.  ಒಟ್ಟಿನಲ್ಲಿ ಕೇಂದ್ರ ಸರಕಾರ ಶೀಘ್ರದಲ್ಲಿಯೇ ಕರಾವಳಿಗರ ಬೇಡಿಕೆ ಈಡೇರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ :ಕಾಂಗ್ರೆಸ್ ಟೀಕೆಯಿಂದ ಮುಜುಗರ: ವಿಪಕ್ಷ ನಾಯಕನಿಲ್ಲದೇ ಅಧಿವೇಶನದಿಂದ ದೂರ ಉಳಿಯಲು ಬಿಜೆಪಿ ಶಾಸಕರ ನಿರ್ಧಾರ

Good news for coastal Karnataka Peoples vande bharat express will travel between Bangalore and Mangalore

Comments are closed.