Ukraine crisis Naveen Death : ನವೀನ್ ಕುಟುಂಬಕ್ಕೆ ಸಿಎಂ ಸಹಾಯಹಸ್ತ : 25 ಲಕ್ಷದ ಚೆಕ್ ವಿತರಣೆ

ಬೆಂಗಳೂರು : ರಷ್ಯಾ ಉಕ್ರೇನ್ ಯುದ್ಧದಲ್ಲಿ (Ukraine crisis) ಸಾವನ್ನಪ್ಪಿದ ಕರ್ನಾಟಕದ ಹಾವೇರಿ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ (Naveen Death) ನಿವಾಸಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು ಸಂತ್ರಸ್ಥರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ್ದಾರೆ. ನವೀನ್ ತಂದೆ ಶೇಖರಪ್ಪ ಗ್ಯಾನ್ ಗೌಡರ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ಪರಿಹಾರದ ಚೆಕ್ ವಿತರಿಸಿದರು. ಈ ವೇಳೆ ಸಚಿವ ಸಂಪುಟದ ಸದಸ್ಯರು ಹಾಗೂ ನವೀನ್ ಕುಟುಂಬಸ್ಥರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ದುರ್ದೈವಶಾತ ನವೀನ್ (Naveen Death) ಸಾವು ಸಂಭವಿಸಿದೆ. ಈ ಸುದ್ದಿಯನ್ನು ತಡೆದುಕೊಳ್ಳೋಕೆ ಆಗಲ್ಲ. ಭವಿಷ್ಯ ರೂಪಿಸಿ ಕೊಳ್ಳೋಕೆ ಹೋದಾತ ದುರಂತ ಅಂತ್ಯ ಕಂಡಿದ್ದಾನೆ. ನಾವ್ಯಾರೂ ಊಹಿಸಿರಲಿಲ್ಲ. ನವೀನ್ ದೇಹವನ್ನು ತಾಯ್ನಾಡಿಗೆ ತರೋಕೆ ನಿರಂತರ ಪ್ರಯತ್ನ ನಡೆದಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ‌. ನವೀನ್ ಬಾಡಿಯನ್ನು ಮಾರ್ಚುರಿಯಲ್ಲಿ ಇಟ್ಟಿರೋದಾಗಿ ಮಾಹಿತಿ ಸಿಕ್ಕಿದೆ. ಬಾಂಬ್ ದಾಳಿ (Ukraine crisis ) ನಿಂತ ನಂತರ ಪಾರ್ಥೀವ ಶರೀರ ತರೋಕೆ ಪ್ರಯತ್ನಿಸ್ತೇವೆ. ಯುದ್ಧ ಆದಷ್ಟು ಬೇಗ ನಿಲ್ಲಲಿ. ಇನ್ನೂ ಹಲವಾರು ಜನ ಸಿಲುಕಿಕೊಂಡಿದ್ದಾರೆ ಅವರನ್ನು ಕರೆತರೋ ಪ್ರಯತ್ನ ನಡೆದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Ukraine crisis Naveen Death : CM Basavaraj Bommai distributes a check of Rs 25 lakh to Naveen family

ನವೀನ್ ಸಾವಿಗೆ ನೀಟ್ ಅವ್ಯವಸ್ಥೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ವ್ಯವಸ್ಥೆ ಬಗ್ಗೆ ನಾವು ಅವಲೋಕಿಸಬೇಕಿದೆ.ನೀಟ್ ನಿಂದ ಈ ರೀತಿ ಆಗಿದೆ ಅನ್ನೋ ವಿಚಾರ ಗಮನಕ್ಕೆ ಬಂದಿದೆ. ಎಲ್ಲದರ ಬಗ್ಗೆಯೂ ಕೂಲಂಕಷವಾಗಿ ಚರ್ಚೆ ಮಾಡ್ತೇವೆ.ಕೇಂದ್ರ ಸರ್ಕಾರದ ಜತೆಯೂ ಸಮಾಲೋಚನೆ ಮಾಡ್ತೇವೆ ಆದರೆ ಸದ್ಯದ ನಮ್ಮ ಮುಖ್ಯ ಉದ್ದೇಶ ನವೀನ್ ಪಾರ್ಥಿವ ಶರೀರ ತರೋದಾಗಿದೆ ಎಂದು ಬೊಮ್ಮಾಯಿ ನವೀನ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನವೀನ್ ದೇಹ ತರುವ ಪ್ರಯತ್ನಕ್ಕೆ ಮೊದಲ ಆದ್ಯತೆ ಕೊಟ್ಟು, ತಾಯ್ನಾಡಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಚಳಗೇರಿಯ ನವೀನ್ ನಿವಾಸದಲ್ಲಿ ಭರವಸೆ ನೀಡಿದ್ದಾರೆ.

ಇನ್ನು ಸಿಎಂ ಎದುರು ಭಾವುಕರಾದ ನವೀನ್ ಕುಟುಂಬಸ್ಥರು ಹೇಗಾದ್ರೂ ಮಾಡಿ ಹೆಣ ತರಿಸಿಕೊಡುವಂತೆ ಸಿಎಂಗೆ ಮನವಿ ಮಾಡಿದರು. ಅಷ್ಟೇ ಅಲ್ಲ ನವೀನ್ ತಾಯಿ ವಿಜಯಲಕ್ಷ್ಮಿ ಸಿಎಂ ಎದುರು ಸೆರಗೊಡ್ಡಿ ಬೇಡಿಕೊಂಡರು. ಈ ವೇಳೆ ಮಾತನಾಡಿದ ವಿಜಯಲಕ್ಷ್ಮೀ ಇಷ್ಟು ದಿನ ನನ್ನ ಮಗನ ಮೃತದೇಹ ಇದ್ಯಾ ಇಲ್ಲವಾ ಎನ್ನುವ ಆತಂಕವಿತ್ತು. ಈಗ ನನ್ನ ಮಗನ ದೇಹ ಇದೆ ಅನ್ನೋದು ಕನ್ಪರ್ಮ್ ಆಗಿದೆ. ಶವವನ್ನು ತರಿಸಿಕೊಡ್ತಾರೇ ಅನ್ನೋ ನಂಬಿಕೆ ಇದೆ ಎಂದರು.

ಇದನ್ನೂ ಓದಿ : ukraine crisis : ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು : ವಿಕೆ ಸಿಂಗ್ ಮಾಹಿತಿ

ಇದನ್ನೂ ಓದಿ : Hackers Army: 26 ಸಾವಿರ ಹ್ಯಾಕರ್‌ಗಳ ಐಟಿ ಆರ್ಮಿ ರೆಡಿ; ರಷ್ಯಾದ ವೆಬ್‌ಸೈಟ್‌ಗಳನ್ನು ನೆಲಕಚ್ಚಿಸಲು ಉಕ್ರೇನ್ ಪ್ಲಾನ್

( Ukraine crisis Naveen Death : CM Basavaraj Bommai distributes a check of Rs 25 lakh to Naveen family )

Comments are closed.