Inauguration of Dussehra : ಯಾರ ಪಾಲಿಗೆ ದಸರಾ ಉದ್ಘಾಟನೆಯ ಸೌಭಾಗ್ಯ ? HD ದೇವೆಗೌಡ್ರು, ರಜನಿಕಾಂತ್, ಯೋಗಿ ಆದಿತ್ಯ ನಾಥ ಹೆಸರು ಮುನ್ನಲೆಗೆ

ಬೆಂಗಳೂರು : (Inauguration of Dussehra) ಕಳೆದ ಎರಡು ಮೂರು ವರ್ಷಗಳಿಂದ ಕಳೆಗುಂದಿದ್ದ ನಾಡಹಬ್ಬ ದಸರಾ ಈ ಭಾರಿ ಅದ್ದೂರಿಯಾಗಿ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಮಧ್ಯೆ ನಾಡ ದಸರಾ ಉದ್ಘಾಟನೆಯ ಸೌಭಾಗ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ರಾಜ್ಯ ಸರ್ಕಾರ ಯಾರನ್ನು ಆಯ್ಕೆ ಮಾಡಬಹುದು ಎಂಬ ಚರ್ಚೆ ಆರಂಭವಾಗಿದೆ.

ನಾಡಹಬ್ಬ ದಸರಾ ಈ‌ ನಾಡಿನ ಶ್ರೀಮಂತ ಪರಂಪರೆಯ ದ್ಯೋತಕ.‌ ಹೀಗಾಗಿ ನಾಡಹಬ್ಬ ದಸರಾ ಉದ್ಘಾಟನೆಯ ಸೌಭಾಗ್ಯ ಯಾರಿಗೆ ಸಿಗುತ್ತೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿರುತ್ತೆ. ಅದರಲ್ಲೂ ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ಲೆಕ್ಕಾಚಾರಗಳನ್ನು ಆಧರಿಸಿಯೇ ದಸರಾ ಉದ್ಘಾಟಕರನ್ನು ಆಯ್ಕೆ ಮಾಡೋದು ಕಾಮನ್ ಸಂಗತಿ. ಹೀಗಾಗಿ ಪ್ರಸ್ತುತ ರಾಜ್ಯದಲ್ಲಿ ದಸರಾ ಹಬ್ಬದ ಅಚರಣೆಗೆ 40 ದಿನಗಳು ಬಾಕಿ ಇರುವಂತೆಯೇ ದಸರಾ ಉದ್ಘಾಟಕರು ಯಾರಾಗಬಹುದು ಎಂಬ ಕುತೂಹಲ‌ ಮನೆ ಮಾಡಿದೆ. ಮಾತ್ರವಲ್ಲ ವಿವಿಧ ಕ್ಷೇತ್ರದ ಸಾಧಕರ ಹೆಸರುಗಳು ದಸರಾ ಉದ್ಘಾಟಕರ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಸದ್ಯ ಉದ್ಘಾಟಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಚರ್ಚೆಯಲ್ಲಿರೋ ಹೆಸರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನ ಹಿರಿಯ ನಾಯಕ ಎಚ್.ಡಿ.ದೇವೆಗೌಡರದ್ದು. ಅವರ ಹಿರಿತನ, ರಾಜಕೀಯ ಮುತ್ಸದ್ದಿತನ ಹಾಗೂ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಗೌರವಾರ್ಥ ಅವರನ್ನು ಬಿಜೆಪಿ ಸರ್ಕಾರ ದಸರಾ ಉದ್ಘಾಟಕರಾಗಿ ಆಹ್ವಾನಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತದೆ.

ಇನ್ನುಳಿದಂತೆ, ನಟ ರಜನಿಕಾಂತ್, ಬಹುಭಾಷಾ ನಟ ಕಮಲ ಹಾಸನ್ , ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನಾಥ್ಯ,ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀ ,ಜಗ್ಗಿವಾಸುದೇವ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಗಣಪತಿ ಆಶ್ರಮದ ಸಚ್ಚಿದಾನಂದ ಸ್ವಾಮೀಜಿ ,ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗಡೆ,ಜೋಗತಿ ಮಂಜಮ್ಮ ಅಂಬಾನಿ, ಅದಾನಿ ಹೀಗೆ ಹಲವಾರು ಸಾಧಕರ ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇನ್ನು ಸಿಎಂ ಬೊಮ್ಮಾಯಿ ದಸರಾ ಉದ್ಘಾಟನೆಗೆ ಯಾರು ಸೂಕ್ತ ಎಂಬುದರ ಬಗ್ಗೆ ಸದ್ಯ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹ ಮಾಡಲು ಸಜ್ಜಾಗಿದ್ದು, ರಾಜಕೀಯ ಲೆಕ್ಕಾಚಾರಕ್ಕೆ ಮೊದಲ ಆದ್ಯತೆ ಕೊಟ್ಟು ದಸರಾ ಉದ್ಘಾಟಕರ ಹೆಸರು ಸದ್ಯದಲ್ಲೇ ಅಂತಿಮಗೊಳ್ಳಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಶಾಲೆಯಲ್ಲಿ ಗಣೇಶೋತ್ಸವಕ್ಕೆ ವಿರೋಧ: ಸರ್ಕಾರದ ನಿಲುವಿನ ಬಗ್ಗೆ ಶಿಕ್ಷಣ ಸಚಿವರ ಸ್ಪಷ್ಟನೆ

ಇದನ್ನೂ ಓದಿ : Vinod Kambli : ಸಚಿನ್ ಆತ್ಮೀಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುರ್ಗತಿ ? ಕೆಲಸ ಹುಡುಕುತ್ತಿದ್ದಾರೆ ಮಾಜಿ ಕ್ರಿಕೆಟರ್

Who is Inauguration of Dussehra HD DeveGowda, Rajinikanth, Yogi Aditya Nath

Comments are closed.