Yuva Nidhi Scheme Karnataka : ಕರ್ನಾಟಕ ಸರಕಾರ ಪಂಚ ಗ್ಯಾರಂಟಿ ಯೋಜನೆಯ ಪೈಕಿ ಕೊನೆಯ ಗ್ಯಾರಂಟಿ ಯುವನಿಧಿ ಯೋಜನೆಯನ್ನು ಇಂದಿನಿಂದ ಜಾರಿಗೊಳಿಸಲಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಅನಭಾಗ್ಯ ಯೋಜನೆಯನ್ನು ಜಾರಿಗೊಳಿಸಿರುವ ಸರಕಾರ ಇದೀಗ ಯುವನಿಧಿ ಯೋಜನೆ ಜಾರಿಗೆ ಮುಂದಾಗಿದೆ.

ಡಿಸೆಂಬರ್ 26 ರಿಂದ ಯುವನಿಧಿ ಯೋಜನೆ ಕರ್ನಾಟಕ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ. ಪದವೀಧರರು ಹಾಗೂ ಡಿಪ್ಲೊಮಾ ಶಿಕ್ಷಣ ಪಡೆದವರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಾಗಿದ್ದಾರೆ. ಶಿಕ್ಷಣ ಪಡೆದು ಉದ್ಯೋಗ ಸಿಗದೇ ಇರುವ ನಿರುದ್ಯೋಗಿಗಳಿಗೆ ಆರ್ಥಿಕ ನೆರವು ನೀಡುವುದು ಯುವನಿಧಿ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ : ನಿಮಗಿನ್ನೂ ಗೃಹಲಕ್ಷ್ಮೀ ಹಣ ಬಂದಿಲ್ವಾ: ಸಮಸ್ಯೆ ಆಗ್ತಿದ್ಯಾ ? ಚಿಂತೆ ಬೇಡ ಸರ್ಕಾರವೇ ಬರ್ತಿದೆ ನಿಮ್ಮ ಗ್ರಾಮಕ್ಕೆ
ಯುವನಿಧಿ ಯೋಜನೆಗೆ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. sevasindhugs.Karnataka.gov.in ವೆಬ್‌ಸೈಟ್‌ಗೆ ಲಾಗಿನ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪದವಿ/ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಎನ್ ಎಡಿ ಪೋರ್ಟಲ್ ಸಂಬಂಧಪಟ್ಟ ವಿವಿಗಳು, ಶೈಕ್ಷಣಿಕ ಸಂಸ್ಥೆಗಳು ಮಂಡಳಿಗಳು ಧೃಡಿಕರಿಸಲು nad.karnataka.gov.in/#/YuvaNidhi ಜಾಲತಾಣದಲ್ಲಿ ಲಾಗಿನ್ ಮಾಡಬೇಕು.
ಯುವನಿಧಿ ಯೋಜನೆಗೆ (Yuva Nidhi Scheme) ಯಾರೆಲ್ಲಾ ಅರ್ಹರು ?
- ಕಳೆದ ಆರು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು
- ಕರ್ನಾಟಕದಲ್ಲಿಯೇ ಪದವಿ ಅಥವಾ ಡಿಪ್ಲೋಮಾ ಹಾಗೂ ತತ್ಸಮಾನ ಶಿಕ್ಷಣವನ್ನು ಪಡೆದಿರಬೇಕು.
- ಕರ್ನಾಟಕ ನಿವಾಸಿ ಪ್ರಮಾಣ ಪತ್ರಕ್ಕಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ ನೋಂದಣಿ ಸಂಖ್ಯೆ ಅಥವಾ ಪಡಿತರ ಚೀಟಿ ಹೊಂದಿರಬೇಕು.
- ಡಿಪ್ಲೊಮಾ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ೮ ಅಥವಾ ೯ನೇ ತರಗತಿ ಅಂಕಪಟ್ಟಿ ಅಥವಾ ರೇಷನ್ ಕಾರ್ಡ್ ಹೊಂದಿರಬೇಕು.
- ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ ಕಡ್ಡಾಯ
ಇದನ್ನೂ ಓದಿ : ಯುವನಿಧಿಗೆ ಅರ್ಜಿ ಸಲ್ಲಿಸಲು ಹೊಸ ರೂಲ್ಸ್ : ಆನ್ಲೈನ್, ಆಫ್ ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
Yuva Nidhi Scheme : ಎಲ್ಲಿ ಅರ್ಜಿ ಸಲ್ಲಿಸಬಹುದು ?
ಯುವನಿಧಿ ಯೋಜನೆಗೆ ಇಂದಿನಿಂದ ಅರ್ಜಿ ಸಲ್ಲಿಸಲು ಕರ್ನಾಟಕ ಸರಕಾರ ಅವಕಾಶವನ್ನು ಕಲ್ಪಿಸಿದೆ. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕವೂ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Yuva Nidhi Scheme : ಏನಿದು ಯುವನಿಧಿ ಯೋಜನೆ ?
ಸಿಎಂ ಸಿದ್ದರಾಮಯ್ಯ ಸರಕಾರ ನೇತೃತ್ವದ ಕಾಂಗ್ರೆಸ್ ಸರಕಾರ 5ನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದೆ. ಯುವನಿಧಿ ಯೋಜನೆ ಡಿಸೆಂಬರ್ ೨೬ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಮೂಲಕ ಪದವೀಧರರಿಗೆ ಮಾಸಿಕ 3,000 ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ : ಮಂಗಳೂರಿಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು : ಇಂದಿನಿಂದ ಪ್ರಾಯೋಗಿಕ ಓಡಾಟ, ಡಿ.30 ರಂದು ಪ್ರಧಾನಿ ಚಾಲನೆ
ಡಿಪ್ಲೋಮಾ ಅಥವಾ ಪದವಿ ಶಿಕ್ಷಣವನ್ನು ಪಡೆದು 180 ದಿನಗಳು ಕಳೆದರೂ ಕೂಡ ಉದ್ಯೋಗ ಸಿಗದೇ ಇರುವವರು ಮಾತ್ರವೇ ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಉತೀರ್ಣರಾದ ದಿನದಿಂದ 6 ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟು ಪ್ರತಿ ನೀಡಬೇಕು. ಒಂದೊಮ್ಮೆ ಪದವಿ, ಡಿಪ್ಲೊಮಾ ಶಿಕ್ಷಣ ಪಡೆದ ಬಳಿಕ ಉನ್ನತ ಶಿಕ್ಷಣ ಮುಂದುವರಿಸಿದ್ರೆ ಅಂತಹ ಅಭ್ಯರ್ಥಿಗಳು ಯೋಜನೆಗೆ ಅರ್ಹತೆ ಪಡೆಯುವುದಿಲ್ಲ.
ಯೋಜನೆಗೆ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವವರೆಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯಲಿದೆ. ಅಲ್ಲದೇ ಅರ್ಜಿ ಸಲ್ಲಿಸಿದ ದಿನದಿಂದ ಗರಿಷ್ಠ 2 ವರ್ಷಗಳ ಅವಧಿಗೆ ಮಾತ್ರವೇ ಯುವನಿಧಿ ಯೋಜನೆಯ ಭತ್ಯೆ ದೊರೆಯಲಿದೆ.
Yuva Nidhi Scheme Karnataka implemented from today: How to apply ? Who is eligible ?