ಮಂಗಳೂರಿಗೆ ಬಂತು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು : ಇಂದಿನಿಂದ ಪ್ರಾಯೋಗಿಕ ಓಡಾಟ, ಡಿ.30 ರಂದು ಪ್ರಧಾನಿ ಚಾಲನೆ

Vande Bharat Express : ಮಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಆಗಮಿಸಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ. ಮೂರು ದಿನಗಳ ಕಾಲ ಪ್ರಾಯೋಗಿಕ ಓಡಾಟದ ನಂತರ ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

Vande Bharat Express : ಮಂಗಳೂರು : ಕರಾವಳಿಗರ ಹಲವು ಸಮಯಗಳ ಬೇಡಿಕೆ ಕೊನೆಗೂ ಈಡೇರಿಕೆಯಾಗಿದೆ. ಮಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಆಗಮಿಸಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ನಡೆಸಲಿದೆ. ಮೂರು ದಿನಗಳ ಕಾಲ ಪ್ರಾಯೋಗಿಕ ಓಡಾಟದ ನಂತರ ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಈಗಾಗಲೇ ಮಂಗಳೂರಿಗೆ ಆಗಮಿಸಿರುವ ರೈಲು ಮೂರು ದಿನಗಳ ಕಾಲ ಪ್ರಾಯೋಗಿಕ ಓಡಾಟವನ್ನು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ 30 ರಂದು ದೇಶದ 6 ಕಡೆಗಳಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಎರಡು ಕಡೆಗಳಲ್ಲಿ ಅಮೃತ್‌ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದು, ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ 4 ಮತ್ತು 5ನೇ ಫ್ಲ್ಯಾಟ್‌ ಫಾರಂ ಅನ್ನು ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಲಿದ್ದಾರೆ.

Vande Bharat Express train reached Mangalore: Goa  to Mangalore trial run from today, Prime Minister's drive on December 30
Image Credit to Original Source

ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ. ಮಂಗಳೂರು – ಗೋವಾ ನಡುವೆ ಸಂಚರಿಸಲಿರುವ ರೈಲು ಮಂಗಳವಾರವನ್ನು ಹೊರತು ಪಡಿಸಿ ಉಳಿದ 6 ದಿನಗಳ ಕಾಲ ಸಂಚಾರ ನಡೆಸಲಿದೆ. ಬೆಳಗ್ಗೆ 8.30ಕ್ಕೆ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ಹೊರಟು ಮಧ್ಯಹ್ನಾ 1.05 ಕ್ಕೆ ಮಡ್ಗಾಂವ್‌ ತಲುಪಲಿದೆ. ಅಲ್ಲದೇ ಸಂಜೆ 6.10 ಕ್ಕೆ ಮಡ್ಗಾಂವ್‌ನಿಂದ ಹೊರಡುವ ರೈಲು ರಾತ್ರಿ 10.45 ಕ್ಕೆ ಮಂಗಳೂರು ತಲುಪಲಿದೆ.

ಇದನ್ನೂ ಓದಿ : ಕರಾವಳಿಗರಿಗೆ ಗುಡ್‌ನ್ಯೂಸ್‌ : ಬೆಂಗಳೂರು – ಮಂಗಳೂರು ನಡುವೆ ಸಂಚರಿಸಲಿದೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಮಂಗಳೂರು ಮತ್ತು ಮಡ್ಗಾಂವ್‌ ನಡುವೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರವೇ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್  ಮೊದಲ ರೈಲು ಸಂಚಾರ ಯಶಸ್ವಿ ಆದ್ರೆ ಮುಂಬೈ ಮಂಗಳೂರು ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ.

Vande Bharat Express train reached Mangalore: Goa  to Mangalore trial run from today, Prime Minister's drive on December 30
Image Credit to Original Source

ಕೇರಳದ ತಿರುವನಂತಪುರನಿಂದ ಕಾಸರಗೋಡು ವರೆಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಅದನ್ನು ಮಂಗಳೂರು ವರೆಗೆ ವಿಸ್ತರಣೆಯನ್ನು ಮಾಡಿ ಮಂಗಳೂರು – ಎರ್ನಾಕುಲಂ ನಡುವೆ ಸಂಚಾರ ನಡೆಸಲಿದೆ ಎನ್ನಲಾಗುತ್ತಿದೆ. ಕರಾವಳಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನಲ್ಲಿ ನೆಲೆಸಿದ್ದಾರೆ. ಇದೀಗ ಗೋವಾದ ವರೆಗೆ ವಂದೇ ಭಾರತ್‌ ರೈಲು ಸಂಚಾರ ನಡೆಸುವುದು ಅನುಕೂಲಕರವಾಗಲಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ 8 ಮಂದಿಗೆ ಕೊರೊನಾ ರೂಪಾಂತರಿ JN1 ಸೋಂಕು ದೃಢ

ಇನ್ನು ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ನಡುವೆ ವಂದೇ ಭಾರತ್‌ ರೈಲು ಓಡಾಟಕ್ಕೆ ಬೇಡಿಕೆಯಿದ್ದು, ಸದ್ಯದಲ್ಲಿಯೇ ಈ ಯೋಜನೆ ಕೂಡ ಕೈಗೂಡಲಿದೆ ಎನ್ನಲಾಗುತ್ತಿದೆ. ಕಾರವಾರ – ಉಡುಪಿ- ಮಂಗಳೂರು – ಬೆಂಗಳೂರು ನಡುವೆ ರೈಲು ಸಂಚಾರ ನಡೆಸುತ್ತಿದ್ದು, ಕರಾವಳಿ ಭಾಗದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಚಾರ ನಡೆಸಿದ್ರೆ ಕರಾವಳಿಗರಿಗೆ ವರದಾನವಾಗಲಿದೆ. ಸದ್ಯ ಮಂಗಳೂರು – ಗೋವಾ ನಡುವೆ ವಂದೇ ಭಾರತ್‌ ರೈಲು ಸಂಚಾರ ನಡೆಸುತ್ತಿರುವುದು ಕರಾವಳಿಗರಿಗೆ ವರದಾನವಾಗಿಯೇ ಪರಿಣಮಿಸಿದೆ.

ಇದನ್ನೂ ಓದಿ : ನಿಮಗಿನ್ನೂ ಗೃಹಲಕ್ಷ್ಮೀ ಹಣ ಬಂದಿಲ್ವಾ: ಸಮಸ್ಯೆ ಆಗ್ತಿದ್ಯಾ ? ಚಿಂತೆ ಬೇಡ ಸರ್ಕಾರವೇ ಬರ್ತಿದೆ ನಿಮ್ಮ ಗ್ರಾಮಕ್ಕೆ

Vande Bharat Express train reached Mangalore: Goa  to Mangalore trial run from today, Prime Minister’s drive on December 30

Comments are closed.