ಭಾನುವಾರ, ಏಪ್ರಿಲ್ 27, 2025
Hometechnologyಕೇವಲ 8 ಸಾವಿರಕ್ಕೆ 5G ಮೊಬೈಲ್‌, ಜೊತೆಗೆ 50MP ಕ್ಯಾಮೆರಾ : ಅಮೆಜಾನ್‌ ಗ್ರೇಟ್‌ ಇಂಡಿಯನ್‌...

ಕೇವಲ 8 ಸಾವಿರಕ್ಕೆ 5G ಮೊಬೈಲ್‌, ಜೊತೆಗೆ 50MP ಕ್ಯಾಮೆರಾ : ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌

- Advertisement -

ಇ- ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2023 (Amazon Great Indian Festival Sale 2023) ಹಮ್ಮಿಕೊಂಡಿದೆ. ನವರಾತ್ರಿ, ದಸರಾ, ದೀಪಾವಳಿಯ ಹಿನ್ನೆಲೆಯಲ್ಲಿ ಈ ಸೇಲ್‌ ಆಯೋಜಿಸಲಾಗಿದೆ. ಅತ್ಯಂತ ಕಡಿಮೆ ಬೆಲೆ ಸ್ಮಾರ್ಟ್‌ಪೋನ್‌ ಗಳನ್ನು (Lowest Price Smart Phone) ಖರೀದಿಸುವ ಸುವರ್ಣಾವಕಾಶವನ್ನು ಅಮೆಜಾನ್‌ (Amazon) ಕಲ್ಪಿಸಿದೆ.

ಕೇವಲ 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಗ್ರಾಹಕರು ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಪೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅತ್ಯಂತ ಕಡಿಮೆ ಬೆಲೆಗೆ 50 MP ಕ್ಯಾಮೆರಾ ಮೊಬೈಲ್‌ ಜೊತೆಗೆ ದೀರ್ಘಕಾಲ ಬ್ಯಾಟರಿ ಬಾಳಿಕೆಯ ಮೊಬೈಲ್‌ ಪೋನ್‌ಗಳನ್ನು ಖರೀದಿಸಲು ಅವಕಾಶವಿದೆ.

5G mobile with 50MP camera for just 8000 Huge discount in Amazon Great Indian festival Sale
Image Credit to Original Source

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್‌ ಸೇಲ್‌ನಲ್ಲಿ ಗ್ರಾಹಕರು ಕಡಿಮೆ ಬೆಲೆಗೆ ಯಾವೆಲ್ಲಾ ಮೊಬೈಲ್‌ ಪೋನ್‌ಗಳನ್ನು ಖರೀದಿ ಮಾಡಬಹುದು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 (Samsung Galaxy M13)

ಸ್ಯಾಮ್‌ಸಂಗ್‌ ಮೊಬೈಲ್‌ಗಳನ್ನು ಮೇಲೆ ಈ ಬಾರಿ ಅಮೆಜಾಬ್‌ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಇದೀಗ ಕೇವಲ 9,199 ರೂ.ಬೆಲೆಗೆ 6,000 mAh ಬ್ಯಾಟರಿ ಒಳಗೊಂಡಿರುವ ಸ್ಮಾರ್ಟ್‌ ಪೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಈ ಮೊಬೈಲ್‌ 6.6-ಇಂಚಿನ ಪೂರ್ಣ HD+ LCD ಡಿಸ್ಪ್ಲೇಯನ್ನು ಹೊಂದಿದೆ.

Exynos 850 SoC ಪ್ರೊಸೆಸರ್‌ನಿಂದ ಕೂಡಿದ್ದು, ಟ್ರಿಪಲ್‌ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಸುದೀರ್ಘ ಅವಧಿಯ ಬ್ಯಾಟರಿ ನೀಡಲಾಗಿದ್ದು, ಜೊತೆಗೆ 6GB RAM ಮತ್ತು 128GB ಸ್ಟೋರೆಜ್‌ ಸಾಮರ್ಥ್ಯವನ್ನು ನೀಡಲಾಗಿದೆ.

5G mobile with 50MP camera for just 8000 Huge discount in Amazon Great Indian festival Sale
Image Credit to Original Source

ಇಂಟೆಲ್‌ P55 5G (Intel P55 5G)

ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅತ್ಯಂತ ಕಡಿಮೆ ಬೆಲೆಯ 5G ಮೊಬೈಲ್‌ ಇದಾಗಿದೆ. ಇಂಟೆಲ್‌ ಕಂಪೆನಿ ಸಿದ್ದಪಡಿಸಿರುವ ಈ ಮೊಬೈಲ್‌ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಸಾಧ್ಯತೆಯಿದೆ.1612 x 720 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 6.6-ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ.

ಇದನ್ನೂ ಓದಿ : ಮಾರುಕಟ್ಟೆಗೆ ಬರಲಿದೆ ಆಪಲ್ I Phone 16, 16 Pro : ಆನ್‌ಲೈನ್‌ನಲ್ಲಿ ಪೋಟೋ, ವೈಶಿಷ್ಟ್ಯತೆ ಸೋರಿಕೆ

ಇದು MediaTek ಡೈಮೆನ್ಸಿಟಿ 6080 6nm ಪ್ರೊಸೆಸರ್ ಒಳಗೊಂಡಿದ್ದು, Android 13 OS ಅನ್ನು ಬೆಂಬಲಿಸುತ್ತದೆ. ಅಲ್ಲದೇ ಸುದೀರ್ಘ ಅವಧಿಯ 5,000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ ಡ್ಯುಯಲ್‌ ಹಿಂಬದಿ ಕ್ಯಾಮೆರಾವನ್ನು ಒಳಗೊಂಡಿದೆ. ಸದ್ಯ ಅಮೆಜಾನ್ ಈ ಮೊಬೈಲ್‌ ಅನ್ನು ಆಫರ್ ಬೆಲೆ 8,999 ರೂ.ಗೆ ಮಾರಾಟ ಮಾಡುತ್ತಿದೆ.

5G mobile with 50MP camera for just 8000 Huge discount in Amazon Great Indian festival Sale
Image Credit to Original Source

ಲಾವಾ ಬ್ಲೇಝ್‌ 5G ( Lava Blaze 5G)

5G ಮೊಬೈಲ್‌ ಖರೀದಿ ಮಾಡಲು ಫ್ಲ್ಯಾನ್‌ ಮಾಡಿಕೊಂಡವರಿಗೆ ಲಾವಾ ಬ್ಲೇಝ್‌ ಮತ್ತೊಂದು ಆಯ್ಕೆಯಾಗಿದೆ. ಈ ಸ್ಮಾರ್ಟ್‌ಪೋನ್‌ 6.51-ಇಂಚಿನ HD+ IPS ಡಿಸ್ಪ್ಲೇಯನ್ನು ಒಳಗೊಂಡಿದ್ದು, 720 x 1,600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 12 ನಲ್ಲಿ ಈ ಮೊಬೈಲ್‌ ಕಾರ್ಯನಿರ್ವಹಿಸಲಿದೆ. ಇನ್ನ ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಅಮೆಜಾನ್‌ ಈ ಮೊಬೈಲ್‌ ಪೋನ್‌ ಅನ್ನು ಆಫರ್ ಬೆಲೆ 8,774 ರೂ.ಗೆ ಮಾರಾಟ ಮಾಡುತ್ತಿದೆ.

5G mobile with 50MP camera for just 8000 Huge discount in Amazon Great Indian festival Sale
Image Credit to Original Source

ಮೊಟೊ ಜಿ 3 (Moto G32) ಸ್ಮಾರ್ಟ್‌ಫೋನ್:

ಮೊಟೊರೊಲಾ ಕಂಪನಿ ಕೂಡ ಆಫರ್‌ ಬೆಲೆಗೆ ಸ್ಮಾರ್ಟ್‌ಪೋನ್‌ಗಳನ್ನು ಮಾರಾಟ ಮಾಡುತ್ತಿದೆ. ಇದೀಗ Moto ಅತ್ಯುತ್ತಮ ಟೆಕ್ನಾಲಜಿಯ ಮೊಬೈಲ್‌ ಪೋನ್‌ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ.

1,080 x 2,400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 6.5-ಇಂಚಿನ ಪೂರ್ಣ HD+ LCD ಡಿಸ್ಪ್ಲೇ ಒಳಗೊಂಡಿದೆ. ಜೊತೆಗೆ Qualcomm Snapdragon 680 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೇ ಈ ಮೊಬೈಲ್‌ Android 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : 5,000mAh ಸುದೀರ್ಘ ಬ್ಯಾಟರಿ, 50 ಸೋನಿ ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು OnePlus 11R 5G

ಇನ್ನು ಮೊಟೊರೊಲಾ ಕಂಪೆನಿಯ ಈ ಮೊಬೈಲ್‌ ಟ್ರಿಪಲ್‌ ಕ್ಯಾಮೆರಾವನ್ನು ಒಳಗೊಂಡಿದೆ. 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, 5,000 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಮೊಬೈಲ್‌ ಪೋನ್‌ ಅನ್ನು 10,887 ರೂ. ಬೆಲೆಗೆ ಮಾರಾಟ ಮಾಡುತ್ತಿದೆ.

5G mobile with 50MP camera for just 8000 Huge discount in Amazon Great Indian festival Sale 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular