Meta Company : Twitter ಬೆನ್ನಲ್ಲೇ ಫೇಸ್‌ಬುಕ್ ನ ಮೆಟಾ ಕಂಪೆನಿಯಲ್ಲೂ ಉದ್ಯೋಗಿಗಳಿಗೆ ಗೇಟ್ ಪಾಸ್

ನವದೆಹಲಿ : ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಮೈಕ್ರೋಸಾಫ್ಟ್, ಸ್ನ್ಯಾಪ್, ಟ್ವಿಟರ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಿಗಳನ್ನು (Meta Company)ವಜಾಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ನಿರ್ವಹಿಸುತ್ತಿರುವ ‘ಮೆಟಾ’ ಕಂಪನಿಯು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ತಯಾರಿಯನ್ನು ನಡೆಸುತ್ತಿರುತ್ತದೆ. ಟ್ವಿಟರ್ ನಂತರ, ಫೇಸ್‌ಬುಕ್ ಮೂಲ ಕಂಪನಿಯಾದ ಮೆಟಾ ತನ್ನ ಬಹುತೇಕ ಉದ್ಯೋಗಿಗಳನ್ನು ವಜಾಗೊಳಿಸಿರುತ್ತದೆ.

ಮೇಟಾ ಕಂಪೆನಿ ಕೆಲಸದಿಂದ ವಜಾಗೊಳಿಸಬೇಕಾದ ನೌಕರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ನವೆಂಬರ್‌ 9 ರಿಂದ ವಜಾ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿರುತ್ತದೆ. ಇತ್ತೀಚೆಗೆ ಟ್ವಿಟರ್ ಸಹ ತನ್ನ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಆರ್ಥಿಕ ಹಿಂಜರಿತದ ಪರಿಣಾಮಗಳ ಬಗ್ಗೆ ಆತಂಕವನ್ನು ಹೆಚ್ಚಿಸುತ್ತಿದೆ.

ಆದರೆ ‘ಮೆಟಾ’ ಕಂಪನಿಯು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿಯನ್ನು ನಿರಾಕರಿಸಿರುತ್ತದೆ. ಕಳೆದ ತಿಂಗಳು (ಅಕ್ಟೋಬರ್) ಮೆಟಾ ಕಂಪನಿಯ ತ್ರೈಮಾಸಿಕ ಆದಾಯದಲ್ಲಿ ಕುಸಿತದ ಅಪಾಯವನ್ನು ಎದುರಿಸಿದನ್ನು ತೋರಿಸಿರುತ್ತದೆ. ಈ ಹೇಳಿಕೆ ಹೊರಬಿದ್ದ ಬಳಿಕ ಸತತ ಕುಸಿತ ಕಂಡಿದ್ದ ಮೆಟಾ ಕಂಪನಿ ಷೇರುಗಳು 67 ಬಿಲಿಯನ್ ಡಾಲರ್‌ನಷ್ಟು ಮೌಲ್ಯವನ್ನು ಕಳೆದುಕೊಂಡಿರುತ್ತದೆ.

ಈ ವರ್ಷ ಮೆಟಾದ ಬಂಡವಾಳ ನಷ್ಟವು ಸುಮಾರು 50,000 ಕೋಟಿಗಳಾಗಿರುತ್ತದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿನ ನಿಧಾನಗತಿ ಮತ್ತು ಮುಂದಿನ ದಿನಗಳಲ್ಲಿ ಹಿಂಜರಿತದ ಭಯಗಳು ಮೆಟಾದ ಲಾಭದ ಮೇಲೆ ನೇರ ಪರಿಣಾಮ ಬೀರಲಿರುತ್ತದೆ. ಇದರ ಜೊತೆಗೆ TikTok ಎದುರಿಸುತ್ತಿರುವ ಪ್ರಬಲ ಪೈಪೋಟಿ, ಖಾಸಗಿತನ ಮತ್ತು ಖಾಸಗಿತನದ ವಿಷಯದಲ್ಲಿ Apple ತನ್ನ ನಿಯಮಗಳನ್ನು ಬದಲಾಯಿಸಿರುವುದು ಮತ್ತು Metaverse ಗೆ ಹೆಚ್ಚು ವೆಚ್ಚವಾಗುತ್ತದೆ ಎಂಬ ಲೆಕ್ಕಾಚಾರ ಮತ್ತು ನಿಯಮಗಳಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಭಯವಿದೆ.

ಮೆಟಾವರ್ಸ್‌ನ ಹೂಡಿಕೆಗಳು ತೀರಿಸಲು ಸುಮಾರು 10 ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಜ್ಯೂಕರ್‌ಬರ್ಗ್ ಉದ್ಯೋಗಿಗಳ ನೇಮಕಾತಿಯನ್ನು ನಿಲ್ಲಿಸಿದ್ದಾರೆ. ಅದರ ಜೊತೆಯಲಿ ಹಲವಾರು ಯೋಜನೆಗಳನ್ನು ಕೈಬಿಟ್ಟಿದ್ದಾರೆ ಮತ್ತು ಹಲವಾರು ವೆಚ್ಚ ಕಡಿತ ಕ್ರಮಗಳನ್ನು ಘೋಷಿಸಿರುತ್ತಾರೆ. “2023 ರಲ್ಲಿ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಕಡಿಮೆ ಸಂಖ್ಯೆಯ ಪ್ರದೇಶಗಳಲ್ಲಿ ನಾವು ನಮ್ಮ ಹೂಡಿಕೆಗಳನ್ನು ಕೇಂದ್ರೀಕರಿಸುತ್ತೇವೆ. ಹೀಗೆ ಕೆಲವು ತಂಡಗಳು ಅರ್ಥಪೂರ್ಣವಾಗಿ ಬೆಳೆಯುತ್ತವೆ. ಆದರೆ ಇತರ ಬಹುತೇಕ ತಂಡಗಳು ಪ್ರಗತಿ ಕಾಣುತ್ತಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ ತಂಡದ ಸದಸ್ಯರೂ ಕಡಿಮೆಯಾಗುತ್ತಾರೆ. 2023 ರ ಕೊನೆಯಲಿ ನಮ್ಮ ತಂಡವು ಹೆಚ್ಚು ಕಡಿಮೆ ಅದೇ ಸಂಖ್ಯೆಯಲ್ಲಿರುತ್ತದೆ ಅಥವಾ ಸ್ವಲ್ಪ ಕಡಿಮೆಯಾಗಬಹುದು ಎಂದು ಮಾರ್ಕ್ ಜುಕರ್‌ಬರ್ಗ್ ಕಳೆದ ಅಕ್ಟೋಬರ್‌ನಲ್ಲಿ ಹೇಳಿದ್ದಾರೆ. ಇಂಜಿನಿಯರ್‌ಗಳ ನೇಮಕಾತಿ ದರವನ್ನು ಶೇ.30ರಷ್ಟು ಕಡಿತಗೊಳಿಸುವುದಾಗಿ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಆರ್ಥಿಕ ಕುಸಿತವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜುಕರ್‌ಬರ್ಗ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Tanzania Plane Crash : ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ವಿಮಾನ ಪತನ

ಇದನ್ನೂ ಓದಿ : Twitter Down : ಟ್ವೀಟರ್ ನಲ್ಲಿ ತಾಂತ್ರಿಕ ದೋಷ: ಪರದಾಡಿದ ವೆಬ್ ಬಳಕೆದಾರರು

ಇದನ್ನೂ ಓದಿ : WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

ಆಲ್ಟಿಮೀಟರ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್, ಮೆಟಾದ ಹೂಡಿಕೆದಾರ ಕಂಪನಿಯು ಮಾರ್ಕ್ ಜುಕರ್‌ಬರ್ಗ್‌ಗೆ ಬಹಿರಂಗ ಪತ್ರ ಬರೆದು, ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕಂಪನಿಯನ್ನು ಒತ್ತಾಯಿಸಿರುತ್ತದೆ. ಮೆಟಾವರ್ಸ್‌ನಲ್ಲಿ ಹೂಡಿಕೆದಾರರ ವಿಶ್ವಾಸ ಕ್ಷೀಣಿಸುತ್ತಿದೆ ಎನ್ನುವುದರ ಕುರಿತು ಮರುಪತ್ರವನ್ನು ಬರೆದಿರುತ್ತಾರೆ.

After Twitter : Facebook parent company Meta lay off employees

Comments are closed.