Dinesh Karthik : ದಿನೇಶ್ ಕಾರ್ತಿಕ್ ಕರಿಯರ್ ಕ್ಲೋಸ್, ಇನ್ನು ಡಿಕೆಗಿಲ್ಲ ಸೆಕೆಂಡ್ ಚಾನ್ಸ್

ಅಡಿಲೇಡ್: (Dinesh Karthik cricket Carrier End )ಕಂಬ್ಯಾಕ್ ಕಿಂಗ್ ದಿನೇಶ್ ಕಾರ್ತಿಕ್ ಅವರ ಟೀಮ್ ಇಂಡಿಯಾ ಜೊತೆಗಿನ ಪ್ರಯಾಣ ಬಹುತೇಕ ಅಂತ್ಯಗೊಂಡಿದೆ. ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಡುವ ಬಳಗದಲ್ಲಿ ಹೊರಗಿಟ್ಟು ರಿಷಭ್ ಪಂತ್ ಅವರನ್ನು ಆಡಿಸಲಾಗಿತ್ತು. ಹೀಗಾಗಿ ಮುಂದಿನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ರಿಷಭ್ ಪಂತ್ ಅವರೇ ಆಡುವುದು ಖಚಿತವಾಗಿದ್ದು, ದಿನೇಶ್ ಕಾರ್ತಿಕ್’ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ನವೆಂಬರ್ 2ರಂದು ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯವೇ ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್ ಅವರಿಗೆ ಅಂತಿಮ ಪಂದ್ಯ ಎನ್ನಲಾಗ್ತಿದೆ.

37 ವರ್ಷದ ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದ ಡಿಕೆ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗಿ ನಿಲ್ಲುವ ಬದಲು ಹೊಣೆಗೇಡಿಯಂತೆ ಆಡಿ 6 ರನ್ನಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ರನ್ನಿಗೆ ಔಟಾಗಿದ್ದರು. ಹೀಗಾಗಿ ಜಿಂಬಾಬ್ವೆ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಟೀಮ್ ಇಂಡಿಯಾ ಪ್ಲೇಯಿಂಗ್ XIನಿಂದ ಹೊರಗಿಡಲಾಗಿತ್ತು.

ಇಂಗ್ಲೆಂಡ್’ನಲ್ಲಿ ನಡೆದ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೈಫಲ್ಯದ ನಂತರ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ದಿನೇಶ್ ಕಾರ್ತಿಕ್, 2022ರ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಬ್ಬರಿಸಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಳಲ್ಲಿ ಉತ್ತಮ ಆಟವಾಡಿದ್ದ ಡಿಕೆ, ವಿಶ್ವಕಪ್’ನಲ್ಲೂ ಮಿಂಚುವ ಉತ್ಸಾಹದಲ್ಲಿದ್ದರು. ಆದರೆ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲುವ ಮೂಲಕ ತಮ್ಮ ದಾರಿಗೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಬೆನ್ನಲ್ಲೇ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನಾಡಲಿದೆ. ಆ ಸರಣಿಯಲ್ಲಿ ಆಡಲಿರುವ ಟೀಮ್ ಇಂಡಿಯಾ ಟಿ20 ತಂಡದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಯೇ ಡಿಕೆ ಪಾಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊನೆಯ (Dinesh Karthik cricket Carrier End) ಟೂರ್ನಿಯಾಗಲಿದೆ.

ಇದನ್ನೂ ಓದಿ : Suryakumar 1000 runs : 550 ಎಸೆತಗಳಲ್ಲಿ 1026 ರನ್, T20Iನಲ್ಲಿ ಒಂದೇ ವರ್ಷ ಸಾವಿರ ರನ್ ಸರದಾರನಾದ ಸೂರ್ಯ

ಇದನ್ನೂ ಓದಿ : Suryakumar Yadav Batting : 20ನೇ ಓವರ್‌ನಲ್ಲಿ ಸೂರ್ಯನ ಬೆಂಕಿ-ಬಿರುಗಾಳಿ ಬಿರುಗಾಳಿ ಬ್ಯಾಟಿಂಗ್; 18 ಎಸೆತ, 10 ಸಿಕ್ಸರ್, 72 ರನ್

Dinesh Karthik cricket Carrier End no Chance to Second innings

Comments are closed.