Mukesh Ambani : ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ಖರೀದಿಸಲು ಮುಂದಾದ ರಿಲಯನ್ಸ್‌

ರಿಲಯನ್ಸ್‌ ಇಂಡಸ್ಟ್ರೀ ಲಿಮಿಟೆಡ್‌, ಜರ್ಮನ್‌ನ ರಿಟೇಲ್‌ ವ್ಯಾಪಾರ ಸಂಸ್ಥೆ ‘ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಇಂಡಿಯಾ’ ವನ್ನು (Mukesh Ambani metro AG)ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ. ವರದಿಯ ಪ್ರಕಾರ ಮುಖೇಶ್‌ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್‌ (Reliance) 4,060 ಕೋಟಿ ರೂ. ಗಳಿಗೆ ಖರೀದಿಸುತ್ತಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಜರ್ಮನ್ ರಿಟೇಲ್‌ ವ್ಯಾಪಾರ ಸಂಸ್ಥೆಯ ಒಡೆತನದಲ್ಲಿರುವ 31 ಸಗಟು ವಿತರಣಾ ಕೇಂದ್ರಗಳು, ಲ್ಯಾಂಡ್ ಬ್ಯಾಂಕ್‌ಗಳ ಖರೀದಿಯು ಈ ಒಪ್ಪಂದಲ್ಲಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ರಿಲಯನ್ಸ್‌ ಕಂಪನಿಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕಳೆದ ಕೆಲವು ತಿಂಗಳುಗಳಿಂದ ಎರಡೂ ಕಂಪನಿಗಳ ನಡುವೆ ಮಾತುಕತೆಗಳು ನಡೆದಿತ್ತು ಎಂದು ಹೇಳಲಾಗುತ್ತಿದೆ. ಮೆಟ್ರೋ AG ಕ್ಯಾಶ್‌ ಆಂಡ್‌ ಕ್ಯಾರಿ ಸಂಸ್ಥೆಯು ರಿಟೇಲ್‌, ಕಿರಾಣಿ ಸ್ಟೋರ್ಸ್‌, ಹೋಟೇಲ್‌, ರೆಸ್ಟೋರೆಂಟ್‌, ಕೇಟರಿರ್‍ಸ, ಕರ್ಪೊರೇಟ್‌ ಕಂಪನಿಗಳೊಂದಿಗೆ ವ್ಯವಹಾರಗಳನ್ನು ಹೊಂದಿದೆ. ಲೋ–ಮಾರ್ಜಿನ್‌ B2B ವ್ಯಾಪಾರದ ಫ್ಪೆಂಚ್‌ ಕ್ಯಾರಿಫೋರ್‌ ಭಾರತದಿಂದ ನಿರ್ಗಮಿಸಿದ ನಂತರ ಮೆಟ್ರೋ AG ಸಂಸ್ಥೆಯು ಎರಡನೇ ಬಹುರಾಷ್ಟ್ರೀಯ ರಿಟೇಲ್‌ ಕಂಪನಿಯಾಗಿತ್ತು. ಇದಕ್ಕೂ ಮೊದಲು, 2020 ರಲ್ಲಿ, ಇ-ಕಾಮರ್ಸ್‌ನ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್, ವಾಲ್‌ಮಾರ್ಟ್ ಇಂಡಿಯಾದ ಸಗಟು ವ್ಯಾಪಾರದಲ್ಲಿ ನೂರು ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತ್ತು. ಅದು ಅತ್ಯುತ್ತಮ ಬೆಲೆಯ ಕ್ಯಾಶ್‌ ಆಂಡ್‌ ಕ್ಯಾರಿ ವ್ಯವಹಾರವನ್ನು ನಿರ್ವಹಿಸುತ್ತಿತ್ತು.

2003 ರಲ್ಲಿ ಭಾರತದ ರಿಟೇಲ್‌ ಮಾರುಕಟ್ಟೆಯನ್ನು ಪ್ರವೇಶಿಸಿದ ಮೆಟ್ರೋ 34 ದೇಶದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಮೆಟ್ರೋ ಸಗಟು ವ್ಯವಹಾರವು ಬೆಂಗಳೂರಿನಲ್ಲಿ ಆರು, ಹೈದರಾಬಾದ್‌ನಲ್ಲಿ ನಾಲ್ಕು, ಮುಂಬೈ ಎರಡು ಮತ್ತು ದೆಹಲಿಯಲ್ಲಿ ಎರಡು, ಕೋಲ್ಕತ್ತಾ, ಜೈಪುರ, ಜಲಂಧರ್, ಜಿರಾಕ್‌ಪುರ, ಅಮೃತಸರ, ವಿಜಯವಾಡ, ಅಹಮದಾಬಾದ್, ಸೂರತ್, ಇಂದೋರ್, ಲಕ್ನೋ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಶಾಖಪಟ್ಟಣಂ, ಗುಂಟೂರು ಮತ್ತು ಹುಬ್ಬಳ್ಳಿಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 31 ಸಗಟು ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತದೆ.

ಸಣ್ಣ ಚಿಲ್ಲರೆ ವ್ಯಾಪಾರಿಗಳು, ಕಿರಾಣಿ ಸ್ಟೋರ್‌ಗಳು, ಹೋಟೆಲ್‌ಗಳ ಮತ್ತು ರೆಸ್ಟೋರೆಂಟ್‌ಗಳು, ಕೇಟರರ್‌ಗಳು, ಕಾರ್ಪೊರೇಟ್‌ಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸಂಸ್ಥೆಗಳು ಮತ್ತು ಸ್ವಯಂ ಉದ್ಯೋಗಿಗಳೇ ಭಾರತದಲ್ಲಿ ಮೆಟ್ರೋ ಕ್ಯಾಶ್‌ ಮತ್ತು ಕ್ಯಾರಿ ವ್ಯವಹಾರದ ಪ್ರಮುಖ ಗ್ರಾಹಕರು. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಹದಿನೆಂಟು ವರ್ಷಗಳ ಅನುಭವವನ್ನು ಹೊಂದಿದೆ. ಇದರ ಜೊತೆಗೆ ಅಂತರಾಷ್ಟ್ರೀಯ ಪರಿಣತಿಯನ್ನು ಹೊಂದಿರುವ ಮೆಟ್ರೋ ಕ್ಯಾಶ್ ಆಂಡ್‌ ಕ್ಯಾರಿ ಇಂಡಿಯಾವು ಈ ಎಲ್ಲಾ ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಿ ಉತ್ತಮ ಸ್ಥಾನದಲ್ಲಿದೆ.

ಇದನ್ನೂ ಓದಿ :Meta Company : Twitter ಬೆನ್ನಲ್ಲೇ ಫೇಸ್‌ಬುಕ್ ನ ಮೆಟಾ ಕಂಪೆನಿಯಲ್ಲೂ ಉದ್ಯೋಗಿಗಳಿಗೆ ಗೇಟ್ ಪಾಸ್

ಇದನ್ನೂ ಓದಿ : Tata Motors : ನವೆಂಬರ್‌ 7 ರಿಂದ ಪ್ರಯಾಣಿಕ ವಾಹನಗಳ ದರ ಹೆಚ್ಚಿಸಲಿರುವ ಟಾಟಾ

(Mukesh Ambani’s reliance likely to acquire metro AG cash and carry India business)

Comments are closed.