Airtel Plans : ಉಚಿತ ‘ಅಮೆಜಾನ್‌ ಪ್ರೈಮ್‌ ವೀಡಿಯೊ’ ಸಬ್‌ಸ್ಕ್ರಿಪ್ಷನ್‌ ನೀಡುತ್ತಿವೆ ಏರ್‌ಟೆಲ್‌ನ ಈ ಪ್ಲಾನ್‌ಗಳು

ಭಾರ್ತಿ ಏರ್‌ಟೆಲ್ (Airtel) ತನ್ನ ಪ್ರೀಪೇಯ್ಡ್‌ (Prepaid) ಗ್ರಾಹಕರಿಗೆ ಕೆಲವು ಪ್ರಯೋಜನಗಳನ್ನು ನೀಡುತ್ತಿದೆ. ಅದರಲ್ಲಿ ಕೆಲವು ಆಯ್ದ ಪ್ರಿಪೇಯ್ಡ್ ಯೋಜನೆ (Airtel Plans) ಗಳೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ನೀಡುತ್ತಿದೆ. OTT ಚಂದಾದಾರಿಕೆಯನ್ನು ಒಳಗೊಂಡಿರುವ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಗಳು 28 ದಿನಗಳಿಂದ 84 ದಿನಗಳವರೆಗೆ ಈ ಚಂದಾದಾರಿಕೆ ಮಾನ್ಯತೆಯನ್ನು ಹೊಂಇದೆ. ಈ ಯೋಜನೆಗಳು ರೂ 359 ರಿಂದ ರೂ 999 ವರೆಗೆ ಇದೆ. ಹೆಚ್ಚುವರಿಯಾಗಿ, ಏರ್‌ಟೆಲ್‌ ಟೆಲಿಕಾಂ ಆಪರೇಟರ್ ಅನಿಯಮಿತ ಧ್ವನಿ ಕರೆಗಳು, SMS, ಡೇಟಾ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತಿದೆ.

ಏರ್‌ಟೆಲ್ ಈ ಪ್ರಿಪೇಯ್ಡ್ ಯೋಜನೆಗಳು ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಅಥವಾ ಅಮೆಜಾನ್ ಪ್ರೈಮ್ ಸದಸ್ಯತ್ವ ಸೇರಿದಂತೆ ಹಲವಾರು ಪ್ರಯೋಜನಗಳಿಗೆ ಯಾವುದೇ ಹೆಚ್ಚುವರಿ ವೆಚ್ಚ ವಿಧಿಸುತ್ತಿಲ್ಲ. ಈ ಯೋಜನೆಗಳು Xstream ಮೊಬೈಲ್ ಪ್ಯಾಕ್, Apollo 24|7 ಸರ್ಕಲ್ ಸದಸ್ಯತ್ವ, FASTag ನಲ್ಲಿ ಕ್ಯಾಶ್‌ಬ್ಯಾಕ್ ಮುಂತಾದವುಗಳನ್ನು ಸಹ ಒಳಗೊಂಡಿದೆ.

ನೀವು ಅನಿಯಮಿತ ಕರೆ, ದೈನಂದಿನ ಹೆಚ್ಚಿನ ವೇಗದ ಡೇಟಾ ಮತ್ತು Amazon Prime ಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ಏರ್‌ಟೆಲ್ ಈ ಪ್ರಿಪೇಯ್ಡ್ ಯೋಜನೆಗಳ
ವಿವರಗಳು ಇಲ್ಲಿವೆ.

  • ಏರ್‌ಟೆಲ್‌ನ ರೂ 359 ಯೋಜನೆ:
    ಈ ಯೋಜನೆಯು 28 ದಿನಗಳ ಪ್ಯಾಕ್ ಮಾನ್ಯತೆಯನ್ನು ನೀಡುತ್ತದೆ. ಇದರಲ್ಲಿ ಅನಿಯಮಿತ ಧ್ವನಿ ಕರೆ, 2GB ಡೇಟಾ ಮತ್ತು ದಿನಕ್ಕೆ 100 SMS ಸೇವೆಗಳಿವೆ. ಏರ್‌ಟೆಲ್, ಅಮೆಜಾನ್ ಪ್ರೈಮ್‌ನ ಮೊಬೈಲ್ ಆವೃತ್ತಿ, ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್, ಅಪೊಲೊ 24|7 ಸರ್ಕಲ್ ಸಬ್‌ಸ್ಕ್ರಿಪ್ಶನ್ ಅನ್ನು ಪ್ಲಾನ್ ವ್ಯಾಲಿಡಿಟಿಯೊಳಗೇ ನೀಡುತ್ತದೆ. ಫಾಸ್ಟ್‌ಟ್ಯಾಗ್‌ನಲ್ಲಿ ಬಳಕೆದಾರರು ಹೆಚ್ಚುವರಿ ಉಚಿತ ಹೆಲೋ ಟ್ಯೂನ್‌ಗಳು, Wynk ಸಂಗೀತ ಮತ್ತು 100 ರೂ. ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ.
  • ಏರ್‌ಟೆಲ್‌ನ ರೂ 699 ಯೋಜನೆ:
    ಈ ಯೋಜನೆಯು 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ದಿನಕ್ಕೆ 3GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಆಫರ್‌ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವವೂ ಸೇರಿದೆ. ಈ ಯೋಜನೆಯ ಮಾನ್ಯತೆಯ ಪ್ರಕಾರ ಪರಿಣಾಮಕಾರಿಯಾದ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್ ಹೆಚ್ಚುವರಿಯಾಗಿ ನೀಡುತ್ತಿದೆ. ಏರ್‌ಟೆಲ್ ಫಾಸ್ಟ್‌ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಮತ್ತು 3 ತಿಂಗಳವರೆಗೆ ಉಚಿತ ಅಪೊಲೊ 24|7 ಸರ್ಕಲ್ ಚಂದಾದಾರಿಕೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒದಗಿಸುತ್ತದೆ.
  • ಏರ್‌ಟೆಲ್‌ನ ರೂ 999 ಯೋಜನೆ: ‌
    ಈ ಯೋಜನೆಯು ಎಲ್ಲಾ ಭಾರತೀಯ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 2.5GB ಡೇಟಾವನ್ನು ನೀಡುತ್ತದೆ. ಇದು 84 ದಿನಗಳ ಪ್ಲಾನ್ ಮಾನ್ಯತೆಯನ್ನು ಹೊಂದಿದೆ. ದಿನಕ್ಕೆ 100 SMS ನೀಡಿದೆ. ಹೆಚ್ಚುವರಿ ಪ್ರಯೋಜನಗಳಲ್ಲಿಅಮೆಜಾನ್‌ ಪ್ರೈಮ್‌ ಸದಸ್ಯತ್ವ ಮತ್ತು Xstream ಮೊಬೈಲ್ ಪ್ಯಾಕ್‌ಗೆ ಉಚಿತ ಪ್ರವೇಶವು ಈ ಯೋಜನೆಯಲ್ಲಿದೆ. ಅದರೊಂದಿಗೆ ಈ ಯೋಜನೆಯು ಫಾಸ್ಟ್ಯಾಗ್‌ನಲ್ಲಿ 100 ರೂ. ಕ್ಯಾಶ್‌ಬ್ಯಾಕ್ ಮತ್ತು 3 ತಿಂಗಳವರೆಗೆ ಉಚಿತ ಅಪೊಲೊ 24|7 ಸರ್ಕಲ್ ಚಂದಾದಾರಿಕೆಯನ್ನು ನೀಡುತ್ತದೆ.

ಇದನ್ನೂ ಓದಿ : VLC Media Player Banned : ಭಾರತದಲ್ಲಿ ನಿಷೇಧವಾದ ವಿಎಲ್‌ಸಿ ಮೀಡಿಯಾ ಪ್ಲೇಯರ್‌ : ಕಾರಣ ಏನು ಅಂತೀರಾ…

ಇದನ್ನೂ ಓದಿ : Mehindra Scorpio Classic : ಹೊಸ ಮಹೀಂದ್ರ ಸ್ಕಾರ್ಪಿಯೊ ಕ್ಲಾಸಿಕ್ 2022 ಅನಾವರಣ : ಬೆಲೆ ಮತ್ತು ವೈಶಿಷ್ಟ್ಯತೆಗಳು ಹೀಗಿದೆ.

(Airtel Plans is offering free Amazon Prime Video subscription with some plans)

Comments are closed.