Pramod Muthalik’s outrage : ಬಿಜೆಪಿಗರ ಕೈಲಾಗದೇ ಇದ್ದರೆ ಮನೆ ಹೋಗಲಿ : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಕಿಡಿ

ಧಾರವಾಡ : Pramod Muthalik’s outrage : ಶಿವಮೊಗ್ಗದಲ್ಲಿ ನಡೆಯುತ್ತಿರುವ ಹಿಂಸಾಚಾರವು ದಿನಕ್ಕೊಂದು ರೀತಿಯಲ್ಲಿ ತಿರುವನ್ನು ಪಡೆದುಕೊಳ್ತಿದೆ. ವೀರ ಸಾವರ್ಕರ್​ ಫೋಟೋ ವಿಚಾರವಾಗಿ ಉಂಟಾದ ಗಲಭೆಯು ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಹೋಗಿದೆ. ಈ ವಿಚಾರವಾಗಿ ಇಂದು ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಅಂದು ಕಾಂಗ್ರೆಸ್​ ಹಾಕಿದ ಬೀಜದಿಂದ ಇಂದು ಮುಸ್ಲಿಂ ಹುಳುಗಳು ಹೊರಬರುತ್ತಿದ್ದಾರೆ ಎಂದು ಗುಡುಗಿದ್ದಾರೆ.


ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಆಕಸ್ಮಿಕವಾದದ್ದಲ್ಲ .40 ವರ್ಷದಿಂದ ಶಿವಮೊಗ್ಗದಲ್ಲಿ ಹಿಂದೂ ಮಹಸಭಾ ಗಣೇಶೋತ್ಸವವನ್ನು ಮಾಡಲಾಗುತ್ತದೆ. ಆದ ಗಣೇಶ ಮೆರವಣಿಗೆ ಮಸೀದಿ ಮಾರ್ಗವಾಗಿ ಹೋಗಬಾರದು ಅಂತಾ ಗಲಾಟೆ ಮಾಡಿದ್ದರು. ಆಗಿನಿಂದಲೇ ಇದು ಶುರುವಾಗಿದೆ. ಸ್ವಾತಂತ್ರ್ಯದ 75 ವರ್ಷಗಳವರೆಗೆ ಅದು ಮುಂದುವರೆದು ಬಂದಿದೆ. ಇದು ಸೊಕ್ಕಿನ ನಡೆ. ಸಾವರ್ಕರ್​​ರನ್ನು ವಿರೋಧ ಮಾಡಲಾಗುತ್ತಿದೆ. ಈ ವಿರೋಧವನ್ನು ಮೊದಲು ಶುರು ಮಾಡಿದ್ದು ಕಾಂಗ್ರೆಸ್​ ಎಂದು ಕಿಡಿಕಾರಿದ್ದಾರೆ .


ಸಾವರ್ಕರ್​ ಪ್ರಖರ ಹಿಂದೂವಾದಿ ಹಾಗೂ ರಾಷ್ಟ್ರೀಯವಾಗಿಯಾಗಿದ್ದಾರೆ. ಕಾಂಗ್ರೆಸ್​ಗೆ ನೆಹರೂ, ಇಂಧಿರಾಗಾಂಧಿ,ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಮಾತ್ರ ಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಇವರಿಗೆ ಬೇಕಾಗಿಲ್ಲ. ಇದು ಕಾಂಗ್ರೆಸ್​ ದೇಶದಲ್ಲಿ ಬಿತ್ತಿರುವ ಬೀಜ, ಇಂದು ಮುಸ್ಲಿಂ ಹುಳಗಳಂತೆ ಹೊರಬರುತ್ತಿದ್ದಾರೆ. ಸಾವರ್ಕರ್​ ಬಗ್ಗೆ ಮಾತನಾಡಲು ಕಾಂಗ್ರೆಸ್​ಗಾಗಲಿ ಅಥವಾ ಮುಸ್ಲಿಮರಿಗಾಗಲಿ ಯಾವುದೇ ರೀತಿಯ ಹಕ್ಕಿಲ್ಲ ಎಂದು ಗುಡುಗಿದರು.

ಸಿದ್ದರಾಮಯ್ಯ ವಿರುದ್ಧವೂ ಇದೇ ವೇಳೆ ವಾಗ್ದಾಳಿ ನಡೆಸಿದ ಮುತಾಲಿಕ್​, ಸಿದ್ದರಾಮಯ್ಯ ಮುಸ್ಲಿ ಏರಿಯಾದಲ್ಲಿ ಸಾವರ್ಕರ್​ ಫೋಟೋ ಏಕೆ ಬೇಕು ಎಂದು ಪ್ರಶ್ನೆ ಮಾಡ್ತಾರೆ. ನಮ್ಮಲ್ಲಿ ಹಿಂದೂ,ಮುಸ್ಲಿಂ ಏರಿಯಾ ಅಂತಾ ಬರೋದಿಲ್ಲ. ಎಲ್ಲವೂ ಭಾರತೀಯರ ಏರಿಯಾ. ಮುಸ್ಲಿಮರು ಮೊದಲು ಬಾಯಿ ಮುಚ್ಚಿಕೊಂಡು ಇರೋದನ್ನು ಕಲಿಯಬೇಕು ಎಂದು ಆಕ್ರೋಶ ಹೊರ ಹಾಕಿದರು.


ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದವರ ಜೇಬಿನಲ್ಲಿ ಚಾಕು ಯಾಕೆ ಇತ್ತು..? ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಅವರ ಕೈಯಲ್ಲಿ ಧ್ವಜಗಳು ಇರಬೇಕಿತ್ತು ತಾನೇ..? ಆದರೆ ಇವರ ಕೈಯಲ್ಲಿ ಚಾಕು ಇದೆ ಅಂದರೆ ಈ ಘಟನೆ ಪೂರ್ವ ನಿಯೋಜಿತ ಎಂದೇ ಅರ್ಥ. ಬಿಜೆಪಿಯವರು ಬರೀ ಕಠಿಣ ಕ್ರಮ ಅಂತಷ್ಟೇ ಹೇಳ್ತಾರೆ. ಈ ಎಲ್ಲಾ ಘಟನೆಗಳಿಗೆ ಬಿಜೆಪಿಯೂ ಕಾರಣ, ಶಿವಮೊಗ್ಗ ಮಾಜಿ ಸಿಎಂ ಹಾಗೂ ಗೃಹ ಸಚಿವರ ಊರು. ಆದರೂ ಈ ಬಗ್ಗೆ ಬಿಜೆಪಿಯವರು ಗಮನಿಸುತ್ತಿಲ್ಲ. ಇನ್ನಾದರೂ ಹದ್ದುಬಸ್ತಿನಲ್ಲಿ ಇಡಬೇಕು. ನಿಮ್ಮ ಕೈಯಲ್ಲಿ ಆಗಿಲ್ಲ ಅಂದರೆ ಮನೆಗೆ ಹೋಗಿ ಎಂದು ಗುಡುಗಿದರು.

ಇದನ್ನು ಓದಿ : BCCI former Secretary Amitabh Chaudhary : ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ಸಾವು

ಇದನ್ನೂ ಓದಿ : Assault case in Bhadravati:ಭದ್ರಾವತಿ ಹಲ್ಲೆ ಪ್ರಕರಣ : ಆರೋಪಿ ಬಂಧನ; ಗೃಹ ಸಚಿವರಿಂದ ಶಿವಮೊಗ್ಗದಲ್ಲಿ ಹೈಲೆವೆಲ್​ ಮೀಟಿಂಗ್​

Pramod Muthalik’s outrage against the BJP government

Comments are closed.