Assault case in Bhadravati:ಭದ್ರಾವತಿ ಹಲ್ಲೆ ಪ್ರಕರಣ : ಆರೋಪಿ ಬಂಧನ; ಗೃಹ ಸಚಿವರಿಂದ ಶಿವಮೊಗ್ಗದಲ್ಲಿ ಹೈಲೆವೆಲ್​ ಮೀಟಿಂಗ್​

ಶಿವಮೊಗ್ಗ : Assault case in Bhadravati: ಶಿವಮೊಗ್ಗದ ಭದ್ರಾವತಿಯಲ್ಲಿ ಭಜರಂಗದಳದ ಸದಸ್ಯ ಸುನೀಲ್​ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುಬಾರಕ್​ ಅಲಿಯಾಸ್​ ಡಿಚ್ಚಿ ಎಂದು ಗುರುತಿಸಲಾಗಿದೆ.ಇಂದು ಬೆಳಗ್ಗೆ ಭದ್ರಾವತಿಯ ನೆಹರೂ ನಗರದಲ್ಲಿ ಸುನೀಲ್​ ಎಂಬಾತನ ಮೇಲೆ ಮುಬಾರಕ್​​ ಹಲ್ಲೆ ನಡೆಸಿದ್ದ. ಈ ಘಟನೆ ನಡೆದು ಕೆಲವೇ ಸಮಯದಲ್ಲಿ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.


ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಹಿಂಸಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್​ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಎಡಿಜಿಪಿ ಅಲೋಕ್​ ಕುಮಾರ್​ ಹಾಗೂ ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್​ ಜೊತೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ನಡೆಸುತ್ತಿದ್ದಾರೆ.


ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಈ ಮೀಟಿಂಗ್​ ನಡೆಯುತ್ತಿದ್ದು ಚಾಕು ಇರಿತ ಪ್ರಕರಣ ಸಂಬಂಧ ಗೃಹ ಸಚಿವರು ಪೊಲೀಸ್​ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ . ಜೊತೆಯಲ್ಲಿ ಭದ್ರಾವತಿಯಲ್ಲಿ ಮಾರಕ ದಾಳಿಗೆ ಒಳಗಾಗಿರುವ ಹಿಂದೂ ಕಾರ್ಯಕರ್ತ ಸುನೀಲ್​ ಕುಮಾರ್​ ಪ್ರಕರಣದ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆರಗ ಜ್ಞಾನೇಂದ್ರ ಪೊಲೀಸ್​ ಅಧಿಕಾರಿಗಳ ಜೊತೆಯಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇನ್ನು ಈ ಸಭೆಗೂ ಮುನ್ನ ಎಡಿಜಿಪಿ ಅಲೋಕ್​ ಕುಮಾರ್​ ಭದ್ರಾವತಿಯಲ್ಲಿ ಸಿಟಿ ರೌಂಡ್ಸ್​ ಹಾಕಿದರು. ಭದ್ರಾವತಿ ನಗರದಲ್ಲಿ ಖುದ್ದು ಎಡಿಜಿಪಿ ಅಲೋಕ್​ ಕುಮಾರ್​ ಭದ್ರತಾ ಪರಿಶೀಲನೆಯನ್ನು ಮಾಡಿದ್ದಾರೆ. ಸುನೀಲ್​ ಕುಮಾರ್​ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಬೆಳಕಿಗೆ ಬರ್ತಿದ್ದಂತೆಯೇ ಎಡಿಜಿಪಿ ಅಲೋಕ್​ ಕುಮಾರ್​, ಐಜಿಪಿ ತ್ಯಾಗರಾಜನ್​ ಹಾಗೂ ಎಸ್ಪಿ ಲಕ್ಷ್ಮೀ ಪ್ರಸಾದ್​​ ಭದ್ರಾವತಿಯಲ್ಲಿ ಖುದ್ದು ಫೀಲ್ಡಿಗಿಳಿದು ತಪಾಸಣೆ ನಡೆಸಿದ್ದಾರೆ.

ಇದನ್ನು ಓದಿ : Deadly attack on Hindu youth : ಶಿವಮೊಗ್ಗ ಚಾಕು ಇರಿತ ಪ್ರಕರಣ ಬೆನ್ನಲ್ಲೇ ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಇದನ್ನೂ ಓದಿ : BCCI former Secretary Amitabh Chaudhary : ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ಸಾವು

Assault case in Bhadravati: Accused Mubarak arrested

Comments are closed.