ಖ್ಯಾತ ಸ್ಮಾರ್ಟ್‌ಪೋನ್ ಕಂಪೆನಿ ಎನಿಸಿಕೊಂಡಿರುವ ಆಪಲ್ ಇದೀಗ ದೀಪಾವಳಿಗೆ ವಿಶೇಷ ಆಫರ್ ಘೋಷಣೆ ಮಾಡಿದೆ. ಹೊಸ ಐಫೋನ್ 15 ಸರಣಿ (Apple iPhone 15 ), ಮ್ಯಾಕ್‌ಬುಕ್ ಏರ್, ಐಪ್ಯಾಡ್‌ಗಳು ಸೇರಿದಂತೆ ವಿವಿಧ ಸಾಧನಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ. ಇದೀಗ ಆಪಲ್ ಸ್ಟೋರ್‌ನಲ್ಲಿ ಆಫರ್‌ಗಳನ್ನು ಬಿಡುಗಡೆ ಮಾಡಿದೆ.
ಸ್ಮಾರ್ಟ್‌ಫೋನ್ ಪ್ರಿಯರು ಬಹುದಿನಗಳಿಂದ ಕಾಯುತ್ತಿದ್ದ iPhone 15 ಸರಣಿಯ ಸ್ಮಾರ್ಟ್‌ಪೋನ್‌ಗಳ ಮೇಲೆ ಬಾರೀ ರಿಯಾಯಿತಿಯನ್ನು ಐಪೋನ್ ಘೋಷಣೆ ಮಾಡಿದೆ. ಐಪೋನ್‌ಗಳ 15 ಪ್ರೋ (iPhone 15 Pro ) ಮತ್ತು iPhone 15 Pro Max ಪೋನ್‌ಗಳ ಮೇಲೆ ಭರ್ಜರಿ 6,000 ರೂಪಾಯಿಗಳ ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಲಭ್ಯವಿದೆ.

ಕೇವಲ ಆಪಲ್ ಸ್ಟೋರ್ ಮಾತ್ರವಲ್ಲದೇ, ದೀಪಾವಳಿಯ ವಿಶೇಷ ಮಾರಾಟದ Apple BKC ಮತ್ತು Apple Saket ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆಪಲ್ ಪೋನ್‌ಗಳು ಲಭ್ಯವಿದೆ. ಹಲವು ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ 10,000 ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಕೊಡುಗೆಯೂ ಲಭ್ಯವಿದೆ.
ಇದನ್ನೂ ಓದಿ: ಕೇವಲ 6,499ರೂ.ಗೆ ಸಿಗುತ್ತೆ 4,000mAh ಸುದೀರ್ಘ ಬ್ಯಾಟರಿ ಮೊಬೈಲ್ : ಭಾರತದಲ್ಲಿ ಬಿಡುಗಡೆ ಆಯ್ತು Itel A05s
ಈ ಬಾರಿಯ ದೀಪಾವಳಿಯ ಮಾರಾಟದಲ್ಲಿ ಪ್ರಮುಖವಾಗಿ Apple ಐಪೋನ್ 15 ಪ್ರೋ (iPhone 15 Pro) ಮತ್ತು ಐಪೋನ್ 15 ಪ್ರೋ ಮ್ಯಾಕ್ಸ್ ( iPhone 15 Pro Max) 6,000 ವರೆಗೆ ಕ್ಯಾಶ್‌ಬ್ಯಾಕ್ ರಿಯಾಯಿತಿ ಕೊಡುಗೆಯಲ್ಲಿ ಲಭ್ಯವಿದೆ. ಐಪೋನ್ 15(Apple iPhone 15) ಮತ್ತು iPhone 15 Plus ರೂ. 5,000 ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದಾಗಿದೆ. ಅಲ್ಲದೇ Apple ತನ್ನ ದೀಪಾವಳಿ ಮಾರಾಟದ ಕೊಡುಗೆಯ ಭಾಗವಾಗಿ ಐಪೋನ್ 14 (iPhone 14) ಮತ್ತು ಐಪೋನ್ 14 ಪ್ಲಸ್ ( iPhone 14 Plus) ಮೇಲೆ 4,000 ರೂ. iPhone 13 ಮೇಲೆ ರೂ 3,000 ಮತ್ತು iPhone SE ಮೇಲೆ ರೂ 2,000 ರಿಯಾಯಿತಿ ಸಿಗಲಿದೆ.
ಇದನ್ನೂ ಓದಿ: 15 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G ಮೊಬೈಲ್
ಇನ್ನು Apple iPhone 15 ಆರಂಭಿಕ ಬೆಲೆ 79,900 ರೂಪಾಯಿ ಇದ್ದು, ಇದರ ಪ್ಲಸ್ ಮಾದರಿ 89,900 ರೂಪಾಯಿಗೆ ಮಾರಾಟವಾಗುತ್ತಿದೆ.ಐಫೋನ್ 15 ಪ್ರೋ ಬೆಲೆ 1,34,900 ರೂ. ಮತ್ತು Apple ನ ಅತ್ಯಂತ ಪ್ರೀಮಿಯಂ ಐಫೋನ್ iPhone 15 Pro Max ಬೆಲೆ 1,59,900 ರೂ. ಮತ್ತು Apple iPhone 13 ಈಗ 59,900 ರೂ. ಇದೆ.

ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಮ್ಯಾಕ್‌ಬುಕ್ ಏರ್ ಎಂ2 ಮೇಲೆ ಭರ್ಜರಿ 10,000ರೂ. ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯವಿದೆ. ಆದರೆ ಈ ಆಫರ್ 13-ಇಂಚಿನ ಮತ್ತು 15-ಇಂಚಿನ ಮಾದರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅದ್ರಲ್ಲೂ ಭಾರತದಲ್ಲಿ ಮಾರಾಟವಾಗುತ್ತಿರುವ 13 ಇಂಚಿನ ಮ್ಯಾಕ್‌ಬುಕ್ ಏರ್ ಎಂ2 ಮಾದರಿಯ ಆರಂಭಿಕ ಬೆಲೆ 1,14,900 ರೂ.ಇದೆ.
ಆಪಲ್ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಮ್ಯಾಕ್‌ಬುಕ್ ಏರ್ M1 (MacBook Air M1) ಸ್ಮಾರ್ಟ್‌ಪೋನ್ ಖರೀದಿ ಮಾಡಿದ್ರೆ ಭರ್ಜರಿ 8,000 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.ಈ ಮಾದರಿಯ ಪೋನ್‌ನ ಮೂಲ ಬೆಲೆ 99,900 ರೂ.ಆದರೆ ಅಮೆಜಾನ್ ಹಬ್ಬದ ಕೊಡುಗೆಯಾಗಿ 69,990 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇನ್ನು 24-ಇಂಚಿನ iMac ಮತ್ತು Mac mini ಮೇಲೆಯೂ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.