Taliban : ಅಫ್ಘನ್​ ಮಹಿಳೆಯರ ದೂರ ಪ್ರಯಾಣಕ್ಕೆ ಶಾಕಿಂಗ್ ನಿಯಮ ಘೋಷಿಸಿದ ತಾಲಿಬಾನ್​..!

Taliban :ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿ ತಾಲಿಬಾನ್​ ಅಫ್ಘಾನಿಸ್ತಾನದಲ್ಲಿ ಪಾರುಪತ್ಯವನ್ನು ಸ್ಥಾಪಿಸಿ ಅನೇಕ ತಿಂಗಳುಗಳೇ ಕಳೆದಿದೆ. ಅಪ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್​ ವಹಿಸಿಕೊಂಡಾಗಿನಿಂದ ಅಲ್ಲಿನ ಜನತೆಯ ಪಾಡು ನರಕಕ್ಕಿಂತಲೂ ಕಡೆಯಾಗಿದೆ. ಮಹಿಳೆಯರಿಗಂತೂ ದಿನಕ್ಕೊಂದು ಕಾನೂನುಗಳನ್ನು ತಾಲಿಬಾನ್​ ತರುತ್ತಲೇ ಇದೆ.


ಬುರ್ಕಾ ಕಡ್ಡಾಯ, ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ, ಬಣ್ಣದ ಲೋಕಕ್ಕೆ ಕಾಲಿಡುವಂತಿಲ್ಲ ಹೀಗೆ ನಾನಾ ನಿಬಂಧನೆಗಳನ್ನು ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ವಿಧಿಸಲಾಗಿದೆ. ಇದೇ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತಾಲಿಬಾನ್​ ಸರ್ಕಾರವು ದೂರದ ಪ್ರಯಾಣ ಮಾಡುವ ಮಹಿಳೆಯ ಜೊತೆಯಲ್ಲಿ ಪುರುಷ ಸಂಬಂಧಿ ಇಲ್ಲ ಎಂದಾದಲ್ಲಿ ಆಕೆಗೆ ರಸ್ತೆ ಸಾರಿಗೆ ಸೌಕರ್ಯವನ್ನು ನೀಡಲೇಬಾರದು ಎಂದು ಹೇಳಿದೆ.


ಸಚಿವಾಲಯು ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಹೆಡ್​ಸ್ಕಾರ್ಫ್​ ಧರಿಸದ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಡ್ರಾಪ್​ ನೀಡುವಂತಿಲ್ಲ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಆಗಸ್ಟ್​ 15ರಂದು ಅಪ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ ಸರ್ಕಾರವು ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಿದೆ. ಸಚಿವಾಲಯದಿಂದ ಹೊರಗಿಡಲಾಗಿದೆ ಹಾಗೂ ಮಾಧ್ಯಮಿಕ ಶಿಕ್ಷಣದಿಂದಲೂ ಕೊಕ್ ನೀಡಲಾಗ್ತಿದೆ.


ಇದೀಗ ಈ ಸಾಲಿಗೆ ಹೊಸದೊಂದು ನಿಯಮಾವಳಿಯು ಸೇರ್ಪಡೆಯಾಗಿದೆ. 75 ಕಿಲೋಮೀಟರ್​ಗೂ ಹೆಚ್ಚು ದೂರದ ಪ್ರದೇಶಕ್ಕೆ ಪ್ರಯಾಣಿಸಲಿಚ್ಚಿಸುವ ಮಹಿಳೆಯರು ತಮ್ಮೊಂದಿಗೆ ಪುರುಷ ಸಂಬಂಧಿಯನ್ನು ಕರೆದೊಯ್ಯಬೇಕು. ಒಂಟಿಯಾಗಿ ಪ್ರಯಾಣಿಸಲು ಇಚ್ಛಿಸುವ ಮಹಿಳೆಯರಿಗೆ ಸವಾರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಚಿವಾಲಯದ ವಕ್ತಾರ ಸಾಡೆಕ್​ ಅಕಿಫ್​ ಮುಹಾಜಿರ್​ ಹೇಳಿದ್ದಾರೆ. ಅಲ್ಲದೇ ಆ ಪುರುಷನು ಮಹಿಳೆಯ ಅತ್ಯಂತ ಹತ್ತಿರದ ಸಂಬಂಧಿ ಆಗಿರಬೇಕು ಎಂದೂ ಸೂಚಿಸಲಾಗಿದೆ.


ವಾರಗಳ ಹಿಂದಷ್ಟೇ ಅಫ್ಘಾನಿಸ್ತಾನದ ಟೆಲಿವಿಷನ್​​ ಚಾನೆಲ್​​ಗಳಿಗೆ ಮಹಿಳೆಯರನ್ನು ಶೋಗಳಲ್ಲಿ, ಧಾರಾವಾಹಿಗಳಲ್ಲಿ ತೋರಿಸುವಂತಿಲ್ಲ. ಹಾಗೂ ಮಹಿಳಾ ವರದಿಗಾರ್ತಿಯರು ಸುದ್ದಿ ಪ್ರಸ್ತುತ ಪಡಿಸುವ ವೇಳೆಯಲ್ಲಿ ಕಡ್ಡಾಯವಾಗಿ ಹೆಡ್​ ಸ್ಕಾರ್ಫ್​ ಧರಿಸಬೇಕು ಎನ್ನಲಾಗಿತ್ತು.

Taliban say Afghan women can’t go on long-distance road trips ‘without male escort’

ಇದನ್ನು ಓದಿ : Price Hike in 2022: ಮತ್ತೆ ದರ ಏರಿಕೆಯ ಬಿಸಿ; ಮುಂದಿನ 3 ತಿಂಗಳಲ್ಲಿ FMCJ ಉತ್ಪನ್ನಗಳ ಬೆಲೆ ಹೆಚ್ಚಳ ಖಚಿತ

ಇದನ್ನೂ ಓದಿ : China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

Comments are closed.