Price Hike in 2022 : ಮತ್ತೆ ದರ ಏರಿಕೆಯ ಬಿಸಿ; ಮುಂದಿನ 3 ತಿಂಗಳಲ್ಲಿ FMCJ ಉತ್ಪನ್ನಗಳ ಬೆಲೆ ಹೆಚ್ಚಳ ಖಚಿತ

ಮುಂದಿನ ದಿನಗಳಲ್ಲಿ ಜನರಿಗೆ ಇನ್ನೊಂದು ಹಂತದ ದರ ಏರಿಕೆಯ ಬಿಸಿ ತಟ್ಟುವ ಎಲ್ಲ ಸಾಧ್ಯತೆಗಳಿವೆ ಎಂದು ವರದಿಗಳು ಹೇಳುತ್ತಲೇ ಇವೆ. ಎಫ್ಎಂಸಿಜಿ (FMCJ Products) ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳು ಮುಂದಿನ ಮೂರು ತಿಂಗಳಿನಲ್ಲಿ ಶೇಕಡಾ 4ರಿಂದ 10ರಷ್ಟು ಬೆಲೆಯನ್ನು ಏರಿಕೆ ಮಾಡುವ ( Price Hike in 2022) ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಅಂದಹಾಗೆ 2020ರ ಡಿಸೆಂಬರ್​ನಿಂದ ಈವರೆಗೆ ಒಟ್ಟು ನಾಲ್ಕು ಬಾರಿ ಎಫ್‌​ಎಂಸಿಜಿ ಉತ್ಪನ್ನಗಳಲ್ಲಿ ದರ ಹೆಚ್ಚಳ ಕಂಡಿದೆ. ಈ ಡಿಸೆಂಬರ್​ ತಿಂಗಳಿನಲ್ಲೇ ರೆಫ್ರಿಜರೇಟರ್​, ವಾಷಿಂಗ್​ ಮಷಿನ್​ಗಳ ದರ ಶೇ. 3ರಿಂದ 5ರಷ್ಟು ಹೆಚ್ಚಾಗಿದೆ. ಮುಂದಿನ  ತ್ರೈಮಾಸಿಕದಲ್ಲಿ ಇವುಗಳ ಬೆಲೆ ಶೇ. 6ರಿಂದ 10ರಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ಎಫ್‌ಎಂಸಿಜಿ ವಲಯದ ತಜ್ಞರು ಅಂದಾಜು ಮಾಡಿದ್ದಾರೆ.

ಡಾಬರ್​ ಕಂಪನಿ ಮತ್ತೆ ಬೆಲೆ ಪರಿಷ್ಕರಣೆಗೆ ಸಿದ್ಧವಾಗಿದೆ. ಹಣದುಬ್ಬರ ಸುಧಾರಣೆ ಆಗದಿದ್ದರೆ ಮತ್ತೆ ಬೆಲೆ ಏರಿಸಬೇಕಾಗುತ್ತದೆ ಎಂದು ಈ ಕಂಪನಿಯ ಸಿಇಒ ಮೋಹಿತ್​ ಮಲ್ಹೋತ್ರಾ ಹೇಳಿದ್ದಾರೆ. ಅಡುಗೆ ಎಣ್ಣೆ ಬೆಲೆ ಎರಡು ಪಟ್ಟು ಮತ್ತು ಪ್ಯಾಕಿಂಗ್​ ವೆಚ್ಚ ಹೆಚ್ಚಳದ ಕಾರಣ ಹಿಂದೂಸ್ತಾನ್​ ಯುನಿಲಿವರ್​, ಡಾಬರ್​, ಬ್ರಿಟಾನಿಯಾ, ಮೊರಾಕೊ ಇನ್ನಿತರ ಕಂಪನಿ ಗಳು ಕಳೆದ ಎರಡು ತ್ರೈಮಾಸಿಕದಲ್ಲಿ  ಶೇ. 5ರಿಂದ 12ರವರೆಗೆ ಬೆಲೆ ಹೆಚ್ಚಳ ಮಾಡಿದ್ದವು.

ಏಕೆ ದರ ಹೆಚ್ಚಳ?
ದರ ಏರಿಕೆ ಮಾಡದಿದ್ದರೆ ಕಂಪನಿಯು ನಷ್ಟದ ಸುಳಿಗೆ ಸಿಲುಕುತ್ತವೆ. ಆದ್ದರಿಂದ ದರ ಪರಿಷ್ಕರಣೆ ಅನಿವಾರ್ಯ. ಶೇ. 4ರಿಂದ 5ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಕೃಷ್ಣರಾವ್​ ತಿಳಿಸಿದ್ದಾರೆ. ಸರಕು ಸಾಗಣೆಯ ಖಚಿರ್ನಲ್ಲಿ ಭಾರಿ ಏರಿಕೆ ಆಗಿದೆ. ಇದರ ಹೊರೆಯನ್ನು ತಾಳಿಕೊಳ್ಳುವ ಶಕ್ತಿ ಕಂಪನಿಗೆ ಇಲ್ಲ ಎಂದು ಎಲ್​ಜಿ ಎಲೆಕ್ಟ್ರಾನಿಕ್ಸ್​ನ ಉಪಾಧ್ಯಕ್ಷ ದೀಪಕ್​ ಬನ್ಸಾಲ್​ ತಿಳಿಸಿದ್ದಾರೆ.

ಭಾರತದಲ್ಲಿ ಕರೊನಾ ಎರಡನೇ ಅಲೆಯಿಂದ ಹೊರಬಂದ ಮೇಲೆ ವ್ಯಾಪಾರ  ಚೇತರಿಕೆ ಕಂಡುಬಂದಿದೆ. ಎಫ್ಎಂಸಿಜಿ ಮಾರುಕಟ್ಟೆಯು ಶೇ. 12ರಷ್ಟು ವಿಸ್ತರಣೆ ಆಗಿದೆ. ಇದೇ ಸಂದರ್ಭದಲ್ಲಿ ತಯಾರಿಕಾ ವೆಚ್ಚದಲ್ಲಿ ಶೇ. 22ರಿಂದ 23ರಷ್ಟು ಏರಿಕೆ ಆಗಿದೆ. ಉಕ್ಕು, ತಾಮ್ರ, ಅಲ್ಯುಮಿನಿಯಂ, ಪ್ಲಾಸ್ಟಿಕ್​ ಮತ್ತು ಬಿಡಿಭಾಗಗಳು ಬೆಲೆ ಗರಿಷ್ಠ ಮಟ್ಟಕ್ಕೆ ಹೆಚ್ಚಳ ಕಂಡಿದೆ ಎಂದು ಅಧ್ಯಯನವನ್ನು ಆಧಾರಿಸಿ ಎಕಾನಮಿಕ್ಸ್​ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

ಇದನ್ನೂ ಓದಿ: boAt Iris smart watch: ಬೋಟ್ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ: ಅಗ್ಗದ ಬೆಲೆಯಲ್ಲಿ ಸಿಗಲಿದೆ ಬೋಟ್ ಐರಿಸ್, ಎಲ್ಲಿ ಖರೀದಿಸಬಹುದು?

( Price Hike in 2022 : FMCG Product price hike in next 3 months)

Comments are closed.