Apple iPhone vs Android: ಈ ಅಂಶಗಳು ಆ್ಯಂಡ್ರಾಯ್ಡ್‌ನಿಂದ ಆ್ಯಪಲ್ ಐಫೋನ್‌ಗೆ ಬದಲಾಗಲು ಪ್ರೇರೇಪಿಸುತ್ತವೆ!

ಐಫೋನ್ (Apple iPhone) ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಆ್ಯಪಲ್ ಇತ್ತೀಚೆಗೆ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದ್ದರೂ ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳು (Android Smartphones) ಹೆಚ್ಚು ಸೇಲ್ ಆಗುತ್ತಿವೆ. ಆ್ಯಪಲ್ ಭಾರತದಲ್ಲಿ ಲಭಿಸುತ್ತಿದ್ದರೂ, ಜನರು ಕೊಳ್ಳಲು ಮುಂದಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಅದು ದುಬಾರಿಯಾಗಿದೆ. ತನ್ನ ಬೇಡಿಕೆ ಹೆಚ್ಚಿಸಲು, ಆ್ಯಪಲ್ ತನ್ನ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡುತ್ತಿದೆ (Apple iPhone vs Android). ಕೆಲವು ಕಾರಣಗಳು ಇಲ್ಲಿವೆ.

ಐಫೋನ್ ಹೆಚ್ಚು ಪ್ರೈವೇಟ್ ಹಾಗೂ ಸೆಕ್ಯೂರ್ ಆಗಿವೆ
“ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಐಫೋನ್ ಬೆಸ್ಟ್” ಎಂದು ಆ್ಯಪಲ್ ಹೇಳುತ್ತದೆ. ಫೇಸ್ ಅಥವಾ ಫಿಂಗರ್‌ಪ್ರಿಂಟ್ ದೃಢೀಕರಣದಂತಹ ವೈಶಿಷ್ಟ್ಯಗಳು ಅಥವಾ ಆನ್‌ಲೈನ್‌ನಲ್ಲಿ ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವುದರಿಂದ ಅಪ್ಲಿಕೇಶನ್‌ಗಳನ್ನು ನಿಲ್ಲಿಸುವುದು, ಐಫೋನ್ ಅದನ್ನು ಉತ್ತಮವಾಗಿ ಮಾಡುತ್ತದೆ. ಐ ಮೆಸೇಜಸ್ ಮತ್ತು ವೀಡಿಯೊ ಕರೆಗಳನ್ನು ಎಂಡ್‌ಟಿಎಂಡ್‌ ಎನ್‌ಕ್ರಿಪ್ಟ್ ಮಾಡಲಾಗಿದೆ.

ಅಡ್ವಾನ್ಸ್ಡ್ ಕಾಮೆರಾ
ಐಫೋನ್ ನಲ್ಲಿ ಪೋರ್ಟ್ರೇಟ್, ನೈಟ್ ಮೋಡ್, ಸಿನೆಮಾಟಿಕ್ ಕಿಕ್ ಮೋಡ್ ಇದೆ. ಇದು ಆಟೊಮ್ಯಾಟಿಕ್ ಆಗಿ ಒಳ್ಳೆ ಚಿತ್ರಗಳನ್ನು ಕ್ಲಿಕ್ ಮಾಡಲು ಸಹಾಯ ಮಾಡುತ್ತದೆ.

ರೆಗ್ಯುಲರ್ ಅಪ್ಡೇಟ್
ಆಂಡ್ರಾಯ್ಡ್ ಫೋನ್ ಗಳು ನಿಧಾನವಾಗಿ ಅಪ್ಡೇಟ್ ಹೊಂದಿವೆ. ಆದರೆ ಐಫೋನ್ ರೆಗ್ಯುಲರ್ ಅಪ್ಡೇಟ್ ಹೊಂದಿದ್ದು, ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತದೆ.

ಐಫೋನ್ ಬಳಕೆ ಸುಲಭ
ಆ್ಯಂಡ್ರಾಯ್ಡ್ ಬಳಕೆ ಮಾಡುವವರು ಐಫೋನ್ ಬಳಸಲು ಇಚ್ಛೆ ಇದ್ದರೆ ತುಂಬಾ ಸುಲಭ. ಬಹಳ ಬೇಗ ಸ್ವಿಚ್ ಆಗಲು ಸಾಧ್ಯ. ಹೆಚ್ಚು ಬಾಳಿಕೆ ಬರುತ್ತದೆ. ಆ್ಯಂಡ್ರಾಯ್ಡ್ ಫೋನುಗಳಿಗೆ ಹೋಲಿಸಿದರೆ, ಆಪಲ್ ಫೋನುಗಳು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಹೊಸ ಫೋನುಗಳಲ್ಲಿ ಸಾಮಾನ್ಯ ಗ್ಲಾಸ್ ಬದಲು ಸಿರಾಮಿಕ್ ಗ್ಲಾಸ್ ಬಳಸಲಾಗುತ್ತಿದೆ. ಹಾಗೆಯೇ ಸಾಫ್ಟ್ ವೇರ್ ಅಪ್ಡೇಟ್ ಫೋನ್ ದೀರ್ಘ ಕಾಲ ಉಪಯೋಗಿಸಲು ಸಹಕರಿಸುತ್ತದೆ.

ಫಾಸ್ಟ್ ಪ್ರೊಸೆಸರ್
ಐಫೋನ್ ಎ ಸಿರೀಸ್ ಪ್ರೊಸೆಸರ್ ಹೊಂದಿದೆ. ಇದು ಪರ್ಫಾರ್ಮೆನ್ಸ್ ಬೆಟರ್ ಆಗಿಸುತ್ತದೆ.

ಐಒಎಸ್ಆ್ಯಪ್‌ ಮೂಲಕ ಶೇರಿಂಗ್ ಸುಲಭ
ನಿಮ್ಮ ಹಳೆಯ ಆ್ಯಂಡ್ರಾಯ್ಡ್ ಫೋನ್ ನಿಂದ ಐಫೋನ್ ಗೆ ಕಾಂಟ್ಯಾಕ್ಟ್, ವಿಡಿಯೋ, ಇಮೇಜ್ ಶೇರ್ ಮಾಡುವುದು ತುಂಬಾ ಸುಲಭ. ಅದಕ್ಕಾಗಿ ಆ್ಯಂಡಾಯ್ಡ್ ಫೋನಲ್ಲಿ ಐಒಎಸ್ಆ್ಯಪ್‌ ಡೌನ್ಲೋಡ್ ಮಾಡಿ ಐಫೋನ್ ಗೆ ಶೇರ್ ಮಾಡಬಹುದು.

ಇದನ್ನೂ ಓದಿ: Komaki Ranger: ಕೊಮಾಕಿ ರೇಂಜರ್; ದೇಶದ ಮೊದಲ ಎಲೆಕ್ಟ್ರಿಕ್ ಕ್ರೂಸರ್ ವಿಶೇಷತೆಗಳೇನು?

(Apple iPhone vs Android reasons to switch android to iPhone)

Comments are closed.