How to earn from Instagram: ಇನ್ಸ್ಟಾಗ್ರಾಮ್ ಮೂಲಕವೂ ಹಣ ಗಳಿಸಬಹುದು!

ಇನ್ಮುಂದೆ ಇನ್ಸ್ಟಾಗ್ರಾಮ್ ಮೂಲಕವೂ ಹಣ ಗಳಿಸಲು (How to earn from Instagram) ಸಾಧ್ಯವಿದೆ. ಅದು ಹೇಗಪ್ಪಾ ಅಂತೀರಾ, ಇಲ್ಲಿದೆ ನೋಡಿ ಪೂರ್ತಿ ವಿವರ. ಇನ್ಸ್ಟಾಗ್ರಾಮ್ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳಲ್ಲಿ ನಂ1 (No 1 Social Media) ಎನಿಸಿಕೊಂಡಿದೆ. ಸದಾ ಹೊಸ ಹೊಸ ಫೀಚರ್ಸ್ ನೀಡುವ ಇನ್ಸ್ಟಾಗ್ರಾಮ್ ನೂತನ ಪ್ರಯೋಗಗಳಿಗೇ ಹೆಸರುವಾಸಿ ಆಗಿದೆ. ಇನ್ಮುಂದೆ ಇನ್ಸ್ಟಾಗ್ರಾಮ್ ಕೇವಲ ಮನರಂಜನೆ ಮಾತ್ರವಲ್ಲ, ಆದಾಯಕ್ಕೆ (Instagram Paid Subscriptions) ಕೂಡ ಉತ್ತಮ ಮಾರ್ಗವಾಗಲಿದೆ.

ಜೂನ್ 2020 ರಲ್ಲಿ, ಕ್ರಿಯೇಟರ್ಸ್ ತಮ್ಮ ಕಮ್ಯುನಿಟಿ ಬೆಂಬಲದೊಂದಿಗೆ ಹಣವನ್ನು ಗಳಿಸಲು ಫೇಸ್ಬುಕ್ (Facebook )ಸಬ್ಸ್ಕ್ರಿಪ್ಶನ್ ಪ್ರಾರಂಭಿಸಿತು.
ಇದೀಗ ಅದೇ ಸೌಲಭ್ಯ ಮೆಟಾ ಕಂಪೆನಿ ಅಧೀನದ ಇನ್ಸ್ಟಾಗ್ರಾಮ್ ಗೂ ವಿಸ್ತರಿಸಿದೆ. ಇನ್ಸ್ಟಾಗ್ರಾಮ್ ಸಬ್ಸ್ಕ್ರಿಪ್ಶನ್ ಜೊತೆಗೆ, ಇನ್ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವ ವ್ಯಕ್ತಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. “ಅವರ ಹೆಚ್ಚು ತೊಡಗಿಸಿಕೊಂಡಿರುವ ಫಾಲೋವರ್ಸ್ ಜೋಯೆಗೆ ಆಳವಾದ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಮತ್ತು ಸಬ್ಸ್ಕ್ರಯಿಬಾರ್ಸ್ ವಿಶೇಷವಾದ ವಿಷಯ ಮತ್ತು ಪ್ರಯೋಜನಗಳಿಗೆ ಪ್ರವೇಶವನ್ನು ನೀಡುವ ಮೂಲಕ ಅವರ ಮರುಕಳಿಸುವ ಮಾಸಿಕ ಆದಾಯವನ್ನು ಹೆಚ್ಚಿಸಲಾಗುತ್ತದೆ. ಮತ್ತು, ಫಾಲೋವರ್ಸ್ ರಚನೆಕಾರರಿಗೆ ಸಾಬ್ಸ್ಕ್ರಯಿಬ್ ಆದ ನಂತರ, ಅವರು ಸಬ್ಸ್ಕ್ರಯಿಬಾರ್ಸ್ ಲೈವ್ಸ್, ಸ್ಟೋರಿಸ್ ಮತ್ತು ಬ್ಯಾಡ್ಜ್‌ಗಳ ಪ್ರಯೋಜನಗಳನ್ನು ಪಡೆಯುತ್ತಾರೆ.” ಎಂದು ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಈ ವೈಶಿಷ್ಟ್ಯಗಳನ್ನು ಹೇಳುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ.

ಸದ್ಯ ಈ ಫೀಚರ್ ಯುಎಸ್ ನಲ್ಲಿ ಕೆಲವೇ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಇನ್ನು ಕೆಲವು ತಿಂಗಳಲ್ಲಿ ಈ ಫೀಚರ್ ಹೆಚ್ಚಿನ ಜನರಿಗೆ ತಲುಪಿಸುವ ಗುರಿ ಇನ್ಸ್ಟಾಗ್ರಾಮ್ ಹೊಂದಿದೆ. ಈ ಸಬ್ಸ್ಕ್ರಿಪ್ಶನ್ ಫೀಚರ್ ಕ್ರಿಯೇಟರ್ಸ್ ಗಳಿಗೆ “ಸಬ್‌ಸ್ಕ್ರೈಬ್” ಆಪ್ಶನ್ ಅನ್ ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇಲ್ಲಿ ಕ್ರಿಯೇಟರ್ಸ್ ತಮ್ಮ ಇಷ್ಟವಾದಷ್ಟು ತಿಂಗಳಿಗೆ ಇಂತಿಷ್ಟರಂತೆ ದುಡ್ಡನ್ನು ಸೇರಿಸಬಹುದು.

ಇನ್ಸ್ಟಾಗ್ರಾಮ್ ಹೇಳಿಕೆ ಪ್ರಕಾರ, ಈ ಕಂಟೆಂಟ್ ಕ್ರಿಯೇಟ್ ಮಾಡುವ ವ್ಯಕ್ತಿಗಳಿಂದ ಯಾವುದೇ ರೀತಿಯ ದುಡ್ಡನ್ನು 2023ರ ತನಕ ಪಡೆಯುವುದಿಲ್ಲ ಎಂದು ಹೇಳಿದೆ. ಈ ಮೂಲಕ ತನ್ನ ಯುಸರ್ಸ್ ಗಳಿಗೆ ಸಪೋರ್ಟ್ ಮಾಡುವ ಚಿಂತನೆ ಹೊಂದಿದೆ. ಈ ಹೊಸ ಫೀಚರ್ ಯುಎಸ್ ನಲ್ಲಿ ಮಾತ್ರವೇ ಅಥವಾ ಇತರ ದೇಶಗಳಲ್ಲೂ ಲಭ್ಯವಿದೆ ಎಂಬುದರ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ಕಂಪೆನಿ ಹೊರಹಾಕಿಲ್ಲ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?
(Instagram starts testing paid subscriptions to help creators earn money)

Comments are closed.