Gajanana And Gang trailer : ಡಿಸೆಂಬರ್ 22ಕ್ಕೆ ‘ಗಜಾನನ ಅಂಡ್ ಗ್ಯಾಂಗ್’ ಟ್ರೇಲರ್ ಅನಾವರಣ

ಕನ್ನಡ ಸಿನಿ ಲೋಕದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ನಂತರ ಕಾಲೇಜ್ ಸ್ಟೋರಿ ಸಿನಿಮಾಗಳು ತೆರೆಗೆ ಬಂದಿಲ್ಲ. ಇದೀಗ ಕಾಲೇಜು ಹುಡುಗ, ಹುಡುಗಿಯ ಲವ್‌ ಸ್ಟೋರಿಯೊಂದು ಸದ್ದಿಲ್ಲದೇ ನಿರ್ಮಾಣಗೊಂಡಿದೆ. ಅಭಿಷೇಕ್ ಶೆಟ್ಟಿ ಸಾರಥ್ಯದಲ್ಲಿ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ರೆಡಿಯಾಗಿದೆ. ಗಜಾನನ ಆಂಡ್‌ ಗ್ಯಾಂಗ್ ಸಿನಿಮಾದ ಟ್ರೇಲರ್ ಬಿಡುಗಡೆಗೆ (Gajanana And Gang trailer) ದಿನಗಣನೆ ಶುರುವಾಗಿದೆ.

ಕಿರುತೆರೆಯಲ್ಲಿ ಮಿಂಚುತ್ತಿರುವ ಶ್ರೀ ಮಹಾದೇವ್ ಮೂರು ವರ್ಷಗಳ ಬಳಿಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲವರ್ ಬಾಯ್ ಗೆಟಪ್ ನಲ್ಲಿ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಶ್ರೀ ಮಾಸ್ ಗೆಟಪ್ ನಲ್ಲಿ‌ ಮಿಂಚಿದ್ದು, ಇದೊಂದು ಕಾಲೇಜ್ ಲವ್ ಸ್ಟೋರಿ ಜೊತೆಗೆ ಕಾಮಿಡಿ ಕಥಾ ಹಂದರದ ಸಿನಿಮಾವಾಗಿದೆ.

ಈ ಹಿಂದೆ ಗಣಿ ಬಿಕಾಂ ಪಾಸ್ ಸಿನಿಮಾ ಕಥೆ ಹೇಳಿದ್ದ ಅಭಿಷೇಕ್ ಶೆಟ್ಡಿ ಗಜಾನನ ಅಂಡ್ ಗ್ಯಾಂಗ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀಗೆ ಜೋಡಿಯಾಗಿ ಶ್ಯಾನೆ ಟಾಪಾಗಿರುವ ಬ್ಯೂಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. ತೆಲುಗು ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಮ್ಯೂಸಿಕ್ ನೀಡಿದ್ದಾರೆ.

ಪುನೀತ್ ಕಂಠಸಿರಿಯಲ್ಲಿ ಮೂಡಿ ಬಂದಿದ್ದ ನಾನ್ ಒಳ್ಳೆಯವನೇ ನಮ್ ಟೈಮ್ ಸರಿಯಿಲ್ಲ ಹಾಡು ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ನಾಗೇಶ್ ಕುಮಾರ್ ಯುಎಸ್ ಗಜಾನನ ಅಂಡ್ ಗ್ಯಾಂಗ್ ಚಿತ್ರಕ್ಕೆ ನಿರ್ಮಾಣ ಮಾಡಿದ್ದು, ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ, ರಘು ಗೌಡ ಮತ್ತು ಚೇತನ್ ದುರ್ಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಗಜಾನನ ಅಂಡ್ ಗ್ಯಾಂಗ್ ಟ್ರೇಲರ್ ರಿಲೀಸ್ ಆಗಿದ್ದು, ಸದ್ಯದಲ್ಲಿ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ ಚಿತ್ರತಂಡ.

ಇದನ್ನೂ ಓದಿ : Oo Antava Pushpa Songs : ಐಕಾನ್ ಸ್ಟಾರ್ ಜೊತೆ ಸಮಂತಾ ರೋಮಾನ್ಸ್ : ದಾಖಲೆ ಬರೆದ ಐಟಂ ಸಾಂಗ್

ಇದನ್ನೂ ಓದಿ : mangli Sister Indravati : ಪುಷ್ಪ ಸಿನಿಮಾಕ್ಕೆ ಬಂದ್ರು‌ ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ ಇಂದ್ರಾವತಿ ಚೌಹ್ಹಾಣ ಧ್ವನಿ

ಇದನ್ನೂ ಓದಿ : Google Puneeth Record : ನಿಧನದಂದೇ ಪುನೀತ್ ಬರೆದ್ರು ಹೊಸ ದಾಖಲೆ : ಗೂಗಲ್ ನಲ್ಲಿ ಅಪ್ಪು ರೆಕಾರ್ಡ್

(Kannada New Movie Gajanana And Gang trailer Release on December 22)

Comments are closed.