ಭಾನುವಾರ, ಏಪ್ರಿಲ್ 27, 2025
Hometechnologyಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

ಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

- Advertisement -

ವಿವೋ ವಿ27 5ಜಿ (Vivo V27 5G) ಸ್ಮಾರ್ಟ್‌ಪೋನ್‌ ಮೇಲೆ ಭರ್ಜರಿ ಆಫರ್‌ ಘೋಷಿಸಿದೆ. 12GB RAM ಜೊತೆಗೆ 50-ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿರುವ ಸ್ಮಾರ್ಟ್‌ಪೋನ್‌ ಇದೀಗ ಅರ್ಧ ಬೆಲೆಗೆ ದೊರೆಯುತ್ತಿದೆ. ಅಷ್ಟಕ್ಕೂ ಈ ಹೊಸ ವಿವೋ ಮೊಬೈಲ್‌ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ.

Big discount Vivo V27 5G 12GB RAM 50 MP Camera smartphone will be available at half price
Image Credit to Original Source

ವಿವೋ ಕಂಪೆನಿ ಹೊಸ ವಿನ್ಯಾಸದ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸುತ್ತಿದೆ. ಭಾರತದಲ್ಲಿ ಮಧ್ಯಮ ಶ್ರೇಣಿಯ Vivo ಸ್ಮಾರ್ಟ್‌ಪೋನ್‌ ಗಳಿಗೆ ಬಾರೀ ಬೇಡಿಕೆಯಿದೆ. ಅದ್ರಲ್ಲೂ Vivo V27 5G ಸ್ಮಾರ್ಟ್‌ಫೋನ್ ಮೇಲೆ ಬಾರೀ ಆಫರ್‌ ಘೋಷಣೆ ಮಾಡಿದೆ. 12GB RAM, 50-ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ ಟ್ರಿಪಲ್‌ ಕ್ಯಾಮೆರಾ ಪೋನ್‌ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ.

ಇದನ್ನೂ ಓದಿ : IPhone 15 Pro Max ನಿಂದ Google Pixel 8 ವರೆಗೆ : ನೀವು ಖರೀದಿಸಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಪೋನ್‌

Big discount Vivo V27 5G 12GB RAM 50 MP Camera smartphone will be available at half price
Image Credit to Original Source

ವಿವೋ ವಿ27 5ಜಿ ಸ್ಮಾರ್ಟ್‌ಪೋನ್‌ ಮಾರುಕಟ್ಟೆ ಬೆಲೆ ರೂ 40,999. ಆದರೆ ಈ ಸ್ಮಾರ್ಟ್‌ಪೋನ್‌ ಅನ್ನು ಆಫರ್‌ ನಲ್ಲಿ ನೀವು ಕೇವಲ ರೂ.34,990 ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಭಾರತದ ಇಕಾಂ ದೈತ್ಯ ಪ್ಲಿಪ್‌ಕಾರ್ಟ್‌ ಈ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ ಫೋನ್‌ 14% ರಿಯಾಯಿತಿ ದರದಲ್ಲಿ ಲಭ್ಯವಿದೆ. ಆದರೂ ವಿವಿಧ ಬ್ಯಾಂಕುಗಳು ಇನ್ನಷ್ಟು ಹೆಚ್ಚಿನ ಆಫರ್‌ ನೀಡಲಿವೆ.

ಇದನ್ನೂ ಓದಿ : ಗುಡ್​ ನ್ಯೂಸ್​ : ಶೀಘ್ರದಲ್ಲೇ ಮಾರುಕಟ್ಟೆಗೆ ಬರ್ತಿದೆ 15 ಸಾವಿರಕ್ಕೂ ಕಡಿಮೆ ದರದ ಜಿಯೋ ಲ್ಯಾಪ್​ಟಾಪ್​​

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ವಿವೋ ವಿ27 5ಜಿ ಖರೀದಿಸಿದರೆ, ನೀವು 5% ಕ್ಯಾಶ್‌ಬ್ಯಾಕ್ ಪಡೆಯಹುದಾಗಿದೆ. ಅಲ್ಲದೇ ಹೆಚ್ಚುವರಿಯಾಗಿ 500 ರೂಪಾಯಿಗಳ ರಿಯಾಯಿತಿ ದೊರೆಯಲಿದೆ. ಜೊತೆಗೆ FreebieSpotify ಪ್ರೀಮಿಯಂ ಚಂದಾದಾರಿಕೆ ಕೂಡ ದೊರೆಯಲಿದೆ. ಗ್ರಾಹಕರು ಈ ಸ್ಮಾರ್ಟ್‌ಪೋನ್‌ ಅನ್ನು ತಿಂಗಳಿಗೆ 1,231 ರೂಪಾಯಿ ಇಎಂಐ ಪಾವತಿ ಮಾಡಿಯೂ ಖರೀದಿ ಮಾಡಬಹುದಾಗಿದೆ.

Big discount Vivo V27 5G 12GB RAM 50 MP Camera smartphone will be available at half price
Image Credit to Original Source

ವಿವೋ ವಿ27 5ಜಿ ಸ್ಮಾರ್ಟ್‌ಪೋನ್‌ 1080 x 2340 ಪಿಕ್ಸೆಲ್‌ ರೆಸಲ್ಯೂಶನ್ ಒಳಗೊಂಡಿದೆ. 6.5-ಇಂಚಿನ ಬೆಜೆಲ್-ಲೆಸ್ ಡಿಸ್ಪ್ಲೇ ಹೊಂದಿದ್ದು, IPS ಡಿಸ್ಪ್ಲೇ ವಾಟರ್‌ಡ್ರಾಪ್ ನಾಚ್ ಶೈಲಿಯನ್ನು ಒಳಗೊಂಡಿದೆ. 396 ppi ಪಿಕ್ಸೆಲ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿರುವುದರಿಂದ ಸ್ಮಾರ್ಟ್‌ಪೋನ್‌ಗೆ ಹೆಚ್ಚು ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ ಸ್ಮಾರ್ಟ್‌ಪೋನ್‌ಎರಡು ಕಾರ್ಟೆಕ್ಸ್ A715 ಮತ್ತು ಒಂದು ಕಾರ್ಟೆಕ್ಸ್ A510 ವಿನ್ಯಾಸದೊಂದಿಗೆ ಆಕ್ಟಾ-ಕೋರ್ MediaTek ಪ್ರೊಸೆಸರ್‌ ಒಳಗೊಂಡಿದೆ.

ಇದನ್ನೂ ಓದಿ : ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಮೊಬೈಲ್​ ಸ್ಕ್ರೀನ್​ ಯಾವ ರೀತಿ ಇರಬೇಕು..?

12GB RAM ಹೊಂದಿರುವುದರಿಂದ ಸ್ಮಾರ್ಟ್‌ಪೋನ್‌ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಒಳಗೊಂಡಿದೆ. ಟಚ್-ಟು-ಫೋಕಸ್, ISO ಹೊಂದಾಣಿಕೆ ಮತ್ತು ಡಿಜಿಟಲ್ ಜೂಮ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ.

Big discount Vivo V27 5G 12GB RAM 50 MP Camera smartphone will be available at half price
Image Credit to Original Source

ಗ್ರಾಹಕರಿಗೆ ಸೆಲ್ಪೀ ಮತ್ತು ವಿಡಿಯೋ ಕರೆಗಾಗಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ಅದ್ರಲ್ಲೂ ಹೆಚ್ಚಿನ ಸಮಯದ ವರೆಗೆ ಸ್ಮಾರ್ಟ್‌ಪೋನ್‌ ಬಳಕೆ ಮಾಡುವ ಸಲುವಾಗಿ ಸ್ಮಾರ್ಟ್‌ಪೋನ್‌ನಲ್ಲಿ 66W ವೇಗದ ಚಾರ್ಜಿಂಗ್ ನೀಡಲಾಗಿದೆ. ಇದರಿಂದಾಗಿ ಅತೀ ವೇಗದಲ್ಲಿ ಮೊಬೈಲ್‌ ಚಾರ್ಜ್‌ ಮಾಡಬಹುದಾಗಿದೆ. ಅಲ್ಲದೇ 4600mAh ಬ್ಯಾಟರಿ ಹೊಂದಿರುವುದರಿಂದ ಹೆಚ್ಚು ಸಮಯದ ವರೆಗೆ ಬಳಕೆ ಮಾಡಬಹುದು.

Big discount Vivo V27 5G 12GB RAM 50 MP Camera smartphone will be available at half price

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular