BSNL Best Prepaid Plans: ಬಿಎಸ್‌ಎನ್‌ಎಲ್‌ ರೂ.699ರ ಪ್ಲಾನ್ ಜಿಯೋ,ಏರ್ಟೆಲ್‌ಗೆ ನಷ್ಟ ತರಬಹುದು! ಸಖತ್ ಆಫರ್ ವಿವರ ಓದಿ

ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಗಳಲ್ಲಿ ಅತಿ ದೊಡ್ಡ ಸಂಸ್ಥೆಯಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು (BSNL Best Prepaid Plans) ಪ್ರಾರಂಭಿಸಿದೆ. ಇದು ಕಡಿಮೆ ವೆಚ್ಚದಲ್ಲಿ ಡೇಟಾ ಮತ್ತು ಕರೆ ಸೆವೆಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ  ದೀರ್ಘ ಅವಧಿಯವರೆಗೆ ಮಾನ್ಯವಾಗಿರುತ್ತದೆ.  ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಈ ಯೋಜನೆಯೊಂದಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದಂತಹ ಇತರ ಜನಪ್ರಿಯ ಟೆಲಿಕಾಂ ಆಪರೇಟರ್‌ಗಳಿಗೆ ಬಿರುಸಿನ ಸ್ಪರ್ಧೆ ನಿಡಲು ಯೋಜನೆ ರೂಪಿಸಿದೆ.

BSNL ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಯೋಜನೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಇದೀಗ BSNL ರೂ. 666 ಕ್ಕೆ ಹೊಸ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯು 110 ದಿನಗಳ ಮಾನ್ಯತೆ, ಪ್ರತಿದಿನ 2GB ಡೇಟಾ ಮತ್ತು ಅನಿಯಮಿತ ಕರೆ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಇಡೀ ಪ್ಲಾನ್‌ನಲ್ಲಿ ಬಳಕೆದಾರರು ಒಟ್ಟು 220 GB ಡೇಟಾವನ್ನು ಪಡೆಯುತ್ತಾರೆ. ದಿನದ ಎರಡು ಜಿಬಿ ಡೇಟಾ ಮುಗಿದ ನಂತರವೂ ನೀವು ಮೊದಲಿನಂತೆಯೇ ವೇಗವಾಗಿ ಇಂಟರ್‌ನೆಟ್ ಬಳಸಬೇಕಿದ್ದಲ್ಲಿ ನೀವು ಬೇರೆ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.

ಇದರೊಂದಿಗೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಸೌಲಭ್ಯ ಮತ್ತು 100 ಸಂದೇಶಗಳ ದೈನಂದಿನ ಉಚಿತ SMS ಮಿತಿಯೊಂದಿಗೆ ಈ ಯೋಜನೆಯು ಲಭ್ಯವಿದೆ. ಯೋಜನೆಯ ಮಾನ್ಯತೆಯ ನಂತರ, ಅನಿಯಮಿತ ಕರೆ ಸೌಲಭ್ಯವನ್ನು ಬಳಸಲು ಗ್ರಾಹಕರು ತಮ್ಮ ಯೋಜನೆಯನ್ನು ಟಾಪ್ ಅಪ್ ಮಾಡಬೇಕಾಗುತ್ತದೆ.

ಹೆಚ್ಚುವರಿಯಾಗಿ, BSNL ನ ರೂ 666 ಪ್ರಿಪೇಯ್ಡ್ ಯೋಜನೆಯು ವೈಯಕ್ತಿಕಗೊಳಿಸಿದ ರಿಂಗ್ ಬ್ಯಾಕ್ ಟೋನ್ ಸೇವೆ (PRBT), ಜಿಂಗ್ ಸಂಗೀತ ಸದಸ್ಯತ್ವ ಮತ್ತು ಹಾರ್ಡಿ ಗೇಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ.

ನೀವು ರೂ 666 ಯೋಜನೆಯೊಂದಿಗೆ BSNL ಸಂಖ್ಯೆಯನ್ನು ರೀಚಾರ್ಜ್ ಮಾಡಲು ಬಯಸಿದರೆ, ನೀವು ಅದನ್ನು BSNL ಸೆಲ್ಫ್ ಕೇರ್ ಅಪ್ಲಿಕೇಶನ್ ಅಥವಾ BSNL ರೀಚಾರ್ಜ್ ಪೋರ್ಟಲ್ ಮೂಲಕ ಮಾಡಬಹುದು.

ಇದನ್ನೂ ಓದಿ: Jio Free Internet, Call: ಜಿಯೋ ಗ್ರಾಹಕರಿಗೆ ಬಂಪರ್; 2 ದಿನ ಉಚಿತ ಕರೆ, ಇಂಟರ್‌ನೆಟ್, ಯಾರಿಗೆಲ್ಲ ಅನ್ವಯ?

(BSNL Best Prepaid Plans Rs 699 for110 days validity 2GB daily data and other benefits)

Comments are closed.