BSNLನಿಂದ ವಿಶೇಷ ಕೊಡುಗೆ: 485 ರೂ.ಗೆ ಪ್ರತಿದಿನ 2.5GB ಡೇಟಾ, 72 ದಿನಗಳ ವ್ಯಾಲಿಡಿಟಿ!

ಬಿಎಸ್‌ಎನ್‌ಎಲ್‌ ದಿನವೊಂದಕ್ಕೆ 2.5GB ಡೇಟಾ ನೀಡುವ ಹೊಸ ಪ್ರಿಪೇಡ್‌ ಪ್ಲಾನ್‌ ಪರಿಚಯಿಸಿದೆ. ಆ ಪ್ಲಾನ್‌ ಯಾವುದು ಮತ್ತು ಪ್ರಯೋಜನಗಳೇನು? ಇಲ್ಲಿದೆ ಓದಿ.

BSNL New Prepaid Plan: ಭಾರತದ ದೇಶದ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಕಳೆದ ಕೆಲವು ದಿನಗಳಿಂದ ಒಂದರ ನಂತರ ಒಂದು ಹೊಸ ಹೊಸ ಡೇಟಾ ಆಫರ್‌ಗಳನ್ನು ಪರಿಚಯಿಸುತ್ತಿದೆ. ಇದೇ ದಾರಿಯಲ್ಲಿ ಸಾಗಿದ ಕಂಪನಿ ಇದೀಗ ತನ್ನ ಅತ್ಯಂತ ಜನಪ್ರಿಯ 485 ರೂ. ಗಳ ಪ್ರಿಪೇಡ್‌ ಡೇಟಾ ಪ್ಲಾನ್‌ ಅನ್ನು ಪರಿಷ್ಕರಿಸಿ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ಹೆಚ್ಚು ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ಈ ಹೊಸ ಬದಲಾವಣೆಯ ನಂತರ ಈ ಪ್ಲಾನ್‌ ಗ್ರಾಹಕರಿಗೆ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಇಂಟರ್ನೆಟ್ ಮತ್ತು ಪ್ರಯೋಜನ ನೀಡುತ್ತದೆ.

ಹೇಗಿದೆ ಹೊಸ 485 ರೂ. ಪ್ರೀಪೇಡ್‌ ಪ್ಲಾನ್‌?

ಈ ಹಿಂದೆ ಬಿಎಸ್‌ಎನ್‌ಎಲ್‌ನ 485 ರೂ. ಪ್ಲಾನ್‌ ದಿನವೊಂದಕ್ಕೆ 2 ಜಿಬಿ ಡೇಟಾವನ್ನು ನೀಡುತ್ತಿತ್ತು. ಆದರೆ ಈಗ ಕಂಪನಿಯು ದಿನವೊಂದಕ್ಕೆ ಡೇಟಾವನ್ನು 2.5 ಜಿಬಿಗೆ ಹೆಚ್ಚಿಸಿದೆ. ಇದರ ಅರ್ಥ ದಿನವೊಂದಕ್ಕೆ ಈಗ ಹೆಚ್ಚುವರಿ 500 ಎಮ್‌ಬಿ ಡೇಟಾ ಪ್ರಯೋಜನ ಪಡೆಯುತ್ತಾರೆ. ಈ ಬದಲಾವಣೆಯಿಂದ ಆನ್‌ಲೈನ್‌ ಕೆಲಸ, ವೀಡಿಯೊ ಸ್ಟ್ರೀಮಿಂಗ್‌, ಸೋಷಿಯಲ್‌ ಮೀಡಿಯಾ ಬಳಸುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಬಿಎಸ್‌ಎನ್‌ಎಲ್‌ನ ಈ ಹೊಸ ಯೋಜನೆಯಲ್ಲಿ ಏನೇನು ಸೇರಿಸಲಾಗಿದೆ ಎಂದು ನೋಡೋಣ.

485 ರೂ. ಪ್ಲಾನ್‌ ನ ಪ್ರಯೋಜನಗಳು

ಈ ಯೋಜನೆಯಲ್ಲಿ ಬಿಎಸ್‌ಎನ್‌ಎಲ್‌ ಕೇವಲ ಡೇಟಾವನ್ನು ಮಾತ್ರ ಹೆಚ್ಚಿಸಿಲ್ಲ. ಅದರ ಜೊತಗೆ ಇತರ ಪ್ರಮುಖ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಬಳಕೆದಾರರು ದಿನಕ್ಕೆ 2.5GB ಹೈ-ಸ್ಪೀಡ್ ಡೇಟಾ, ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಸಂದೇಶಗಳು ಮತ್ತು ಒಟ್ಟು 72 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಹೊಸ ಪ್ಲಾನ್‌ ದೀರ್ಘ ಸಮಯದವರೆಗೆ ಮಾನ್ಯತೆ ನೀಡುವ ಉತ್ತಮ ಡೇಟಾ ಪ್ಲಾನ್‌ ಎನ್ನಬಹುದಾಗಿದೆ.

ಇದನ್ನೂ ಓದಿ: ಡಿಜಿಟಲ್ ವ್ಯಸನದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ? ನಿಮ್ಹಾನ್ಸ್ (NIMHANS) ನೀಡಿದೆ ಹೊಸ ಸಲಹೆ

ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ

ಬಿಎಸ್‌ಎನ್‌ಎಲ್‌ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಾದ X ನಲ್ಲಿ ಪೋಸ್ಟ್‌ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಅದೇನೆಂದರೆ ಈ ಡೇಟಾ ಬೋನಸ್ ಕೊಡುಗೆಯು ಮಾರ್ಚ್ 31, 2026 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದರರ್ಥ ಬಳಕೆದಾರರಿಗೆ ಈ ಹೆಚ್ಚುವರಿ ಡೇಟಾದ ಲಾಭ ಪಡೆಯಲು ಸೀಮಿತ ಸಮಯವನ್ನು ಮಾತ್ರ ನೀಡಲಾಗಿದೆ. ಆದ್ದರಿಂದ, ಅವಧಿ ಮುಗಿದು ರೀಚಾರ್ಜ್ ಮಾಡಿಸುವವರಿಗೆ ಇದು ಉತ್ತಮ ಅವಕಾಶವಾಗಬಹುದು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories