Mint Tea : ಎಸಿಡಿಟಿ ಮತ್ತು ಬೇಸಿಗೆಯ ಆಲಸ್ಯ ಹೋಗಲಾಡಿಸಲು ಕುಡಿಯಿರಿ ಪುದೀನಾ ಟೀ!!

ಪುದೀನಾ ಅಥವಾ ಮಿಂಟ್‌ (Mint Tea) ಎಂದು ಕರೆಸಿಕೊಳ್ಳುವ ಪೋಷಕಾಂಶಗಳಿಂದ ಕೂಡಿದ ಈ ಹಸಿರು ಸೊಪ್ಪುನ್ನು ಅಡುಗೆಗಳಿಗೆ ಪರಿಮಳ ಹೆಚ್ಚಿಸಲು ಉಪಯೋಗಿಸುತ್ತೇವೆ. ಪುರಾತನ ಗಿಡಮೂಲಿಕೆಗಳಲ್ಲೊಂದಾದ ಪುದೀನಾವನ್ನು ಹಲವು ರೀತಿಯಲ್ಲಿ ಸೇವಿಸುತ್ತೇವೆ. ಟೀ, ಶೇಕ್ಸ್‌, ಸ್ಮೂಥೀ, ರಸಂ ಮತ್ತು ಕೆಲವು ಸಿಹಿತಿನಿಸುಗಳಲ್ಲಿ ಪುದೀನಾ ಸೇರಿಸುತ್ತೇವೆ. ಬೇಸಿಗೆಯ ಬಿಸಿಲು ಅಸಹನೀಯವಾದಾಗ ತಂಪಾಗಿರಲು ಐಸ್‌ಕ್ರೀಮ್‌, ಸೋಡಾ ಮತ್ತು ತಂಪು ಪಾನೀಯಗಳಿಗಿಂತ ಬೇರೆ ಏನೋ ಹೆಚ್ಚು ಅಗತ್ಯವಿದೆ ಎಂದು ಅನಿಸುತ್ತದೆ.

ಪುದೀನಾ ಒಂದು ಪರಿಮಳಯುಕ್ತ ಗಿಡಮೂಲಿಕೆ. ಇದರ ಮೂಲ ಏಷ್ಯಾ ಮತ್ತು ಮೆಡಿಟರೇನಿಯನ್‌ ದೇಶಗಳು ಎಂದು ತಿಳಿದು ಬಂದಿದೆ. ಗ್ರೀಕರು ಇದನ್ನು ಸ್ಪಷ್ಟವಾಗಿ ತಮ್ಮ ಪೌರಾಣಿಕ ಪಾತ್ರವಾದ ಮಿಂಥಾ ಎಂದು ಹೆಸರಿಸಿದರು. ಮಿಂಥಾ ಎಂದರೆ ಅಪ್ಸರಾ ನದಿ. ಪುದೀನಾದಲ್ಲೇ ಹಲವು ಬಗೆಗಳಿವೆ, ಆಪಲ್‌ ಮಿಂಟ್‌, ಬನಾನಾ ಮಿಂಟ್‌, ಲೆಮನ್‌ ಮಿಂಟ್‌, ಚಾಕಲೆಟ್‌ ಮಿಂಟ್‌ ಮುಂತಾದವುಗಳು. ಈ ಮೂಲಿಕೆಯನ್ನು ಕೆಮ್ಮು, ಶೀತ, ನೋವು ನಿವಾರಕ ಔಷಧಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದರ ಜೊತೆಗೆ ಮಿಠಾಯಿ ವಸ್ತುಗಳಲ್ಲಿ ಮತ್ತು ಇತರ ವ್ಯಂಜನಗಳಲ್ಲಿ ಸುವಾಸನೆಯ ಏಜಂಟ್‌ಗಳಾಗಿಯೂ ಉಪಯೋಗಿಸುತ್ತಾರೆ.

ಪುದೀನಾ (Mint) ದ ಪ್ರಯೋಜನಗಳು :

ಉಷ್ಣತೆ ನಿವಾರಿಸಲು ಮತ್ತು ತ್ವಚೆಯ ಆರೈಕೆಗೆ:
ನಮ್ಮ ದೇಶದಲ್ಲಿ ಪುದೀನಾ ಬೇಸಿಗೆಯಲ್ಲಿಯೇ ಪ್ರಧಾನವಾಗಿದೆ. ಇದು ದೇಹವನ್ನು ತಕ್ಷಣ ತಂಪಾಗಿಸುವ ಗುಣ ಮಾತ್ರ ಹೊಂದಿಲ್ಲ, ಅದರ ಜೊತೆಗೆ ತ್ವಚೆಗೂ ಉತ್ತಮ. ಇದನ್ನು ವಿವಿಧ ರೀತಿಯಲ್ಲಿ ಉಪಯೊಗಿಸುತ್ತಾರೆ; ಚಟ್ನಿ, ಬೇಸಿಗೆಯ ಪಾನೀಯಗಳು, ಮತ್ತು ಅಲಂಕರಿಸಲು.

ಜೀರ್ಣಾಂಗದ ಸಮಸ್ಯೆಗಳನ್ನು ಹೋಗಲಾಡಿಸಲು:
ಪುದೀನಾದಲ್ಲಿರುವ ಮಿಂಥಾಲ್‌ ನಿಮ್ಮ ಜೀರ್ಣಾಂಗಕ್ಕೆ ಆರಾಮವನ್ನು ನೀಡುತ್ತದೆ. ಎಸಿಡಿಟಿ, ಬೇಸಿಗೆಯ ಆಲಸ್ಯ ಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಬೇಸಿಗೆಯ ತಲೆನೋವು ಹೋಗಲಾಡಿಸಲು ಮತ್ತು ತ್ವಚೆ ಪುನರ್ಯೌವ್ವನಗೊಳಿಸಲು ಸಹಾಯ ಮಾಡುತ್ತದೆ:
ಬೇಸಿಗೆಯ ತಲೆನೋವಿನಿಂದ ಮುಕ್ತಿ ಪಡೆಯಬೇಕೆಂದರೆ ಪುದೀನಾ ಸೇವಿಸಿ. ಇದರಿಂದ ದೇಹಕ್ಕೆ ಚೈತನ್ಯವಷ್ಟೇ ತುಂಬುವುದಿಲ್ಲ ಅದರ ಜೊತೆಗೆ ತ್ವಚೆಯನ್ನೂ ಕೋಮಲಗೊಳಿಸುತ್ತದೆ. ಇದರಲ್ಲಿರುವ ಆಂಟಿ–ಬ್ಯಾಕ್ಟೀರಿಯಲ್‌ ಮತ್ತು ಆಂಟಿ–ಇನ್‌ಫ್ಲಾಮೆಟೆರಿ ಗುಣವು ಬೇಸಿಗೆಯಲ್ಲಿ ಎದುರಾಗುವ ಮೊಡವೆ, ಎಕ್ನಿ ಸಮಸ್ಯೆಗಳನ್ನು ಹೋಗಲಾಡಿಸುವುದು.

ಇದನ್ನೂ ಓದಿ : Dental Care : ನಿಮ್ಮ ಹಲ್ಲುಗಳ ಮೇಲೆ ಬಿಳಿ ಕಲೆಗಳು ಕಾಣಿಸುತ್ತಿದೆಯಾ? ಅದಕ್ಕಿದೆ ಇಲ್ಲಿ ಪರಿಹಾರ!

ಪುದೀನಾ ಟೀ ಮಾಡುವುದು ಹೇಗೆ?

  • 6 ರಿಂದ 7 ಪುದೀನಾ ಎಲೆಗಳು ಮತ್ತು ಒಂದು ಕಪ್‌ ನೀರು.
  • ಒಂದು ಕಪ್‌ ನೀರನ್ನು ಬಿಸಿ ಮಾಡಿ, ಅದಕ್ಕೆ ಪುದೀನಾ ಎಲೆಗಳನ್ನು ಸೇರಿಸಿ.
  • 10 ನಿಮಿಷಗಳ ಕಾಲ ಕುದಿಸಿ
  • ನಂತರ ಸೋಸಿ, ಬಿಸಿಯಾಗಿರುವಾಗಲೇ ಕುಡಿಯಿರಿ.

ಪುದೀನಾವು ವಿಟಾಮಿನ್‌ ಎ, ಸಿ ಮತ್ತು ಬಿ–ಕಾಂಪ್ಲೆಕ್ಸ್‌, ಫಾಸ್ಪರಸ್‌, ಕ್ಯಾಲ್ಸಿಯಂ ಮತ್ತು ಆಂಟಿ ಬ್ಯಾಕ್ಟೀರಿಯಲ್‌ ಗುಣಗಳಿಂದ ಸಮೃದ್ಧವಾಗಿದೆ. ಇದು ಹಿಮೋಗ್ಲೋಬಿನ್‌ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುತ್ತದೆ. ಕಡಿಮೆ ಕ್ಯಾಲೋರಿಯಿರುವ ಪುದೀನಾವು ತೂಕ ಇಳಿಕೆಯ ಸಾಧನವಾಗಿದೆ.

ಇದನ್ನೂ ಓದಿ : Onion Benefits : ಈರುಳ್ಳಿಯ 6 ಪ್ರಯೋಜನಗಳು : ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಜೈ !

(Mint Tea to beat acidity and summer lethargy and know the health benefits)

Comments are closed.