dangerous apps : ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್​ಗಳು

dangerous apps : ಈಗಂತೂ ಸ್ಮಾರ್ಟ್​ಫೋನ್​ ಬಳಕೆ ಮಾಡದವರು ಯಾರೂ ಇಲ್ಲ. ಆಂಡ್ರಾಯ್ಡ್​ ಫೋನ್​ಗಳಲ್ಲಿ ನಾವು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವ ಯಾವುದೇ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು ಅನ್ನೋದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನೀವು ಆಂಡ್ರಾಯ್ಡ್​ ಫೋನ್​ಗಳಲ್ಲಿ ಡೌನ್​ಲೋಡ್​ ಮಾಡುವ ಕೆಲವು ಆ್ಯಪ್​ಗಳು ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯೋದರ ಜೊತೆಯಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನೂ ಮಂಗ ಮಾಯ ಮಾಡಲಿವೆ ಎಂಬುದು ಫ್ರೆಂಚ್​ ಸಂಶೋಧಕರೊಬ್ಬರ ಅಧ್ಯಯನದಲ್ಲಿ ತಿಳಿದು ಬಂದಿದೆ.


ಹಾಗಾದರೆ ಜನರಿಗೆ ಟೊಪ್ಪಿ ಹಾಕುವ ಆ ಅಪ್ಲಿಕೇಶನ್​ಗಳು ಯಾವುದು..? ಇಲ್ಲಿದೆ ಮಾಹಿತಿ


ಫನ್ನಿ ಕ್ಯಾಮರಾ :

ಅನೇಕ ಫಿಲ್ಟರ್​ಗಳನ್ನು ಹೊಂದಿರುವ ಆ್ಯಪ್​ ಇದಾಗಿದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ಮಂದಿ ಡೌನ್​ ಮಾಡಿರುವ ಈ ಅಪ್ಲಿಕೇಶನ್​ ನಿಜಕ್ಕೂ ಡೇಂಜರಸ್​

ವ್ಲಾಗ್​ ಸ್ಟಾರ್​ ವಿಡಿಯೋ ಎಡಿಟರ್​ :

ಹೆಚ್ಚು ಪ್ರಚಲಿತಿಯನ್ನು ಹೊಂದಿರುವ ಈ ಅಪ್ಲಿಕೇಶನ್​ನ್ನು ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ಡೌನ್​ ಲೋಡ್​ ಮಾಡಿದ್ದಾರೆ. ಆದರೆ ಇದು ಕೂಡ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆ ನೀಡುವ ಅಪ್ಲಿಕೇಶನ್​ಗಳಲ್ಲಿ ಒಂದಾಗಿದೆ.


ವಾವ್ ಬ್ಯೂಟಿ ಕ್ಯಾಮರಾ :

ಇದೂ ಕೂಡ ಅನೇಕ ಫಿಲ್ಟರ್​ಗಳನ್ನು ಹೊಂದಿರುವ ಒಂದು ಅಪ್ಲಿಕೇಶನ್​ ಆಗಿದೆ. ಫೋಟೋ ಚಂದ ಕಾಣಬೇಕೆಂದು ಈ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿದಲ್ಲಿ ನಿಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣ ಸೊನ್ನೆಗೆ ಬಂದು ನಿಲ್ಲುವುದು ಪಕ್ಕಾ.


ಕ್ರಿಯೇಟಿವ್​​ ತ್ರಿಡಿ ಲಾಂಚರ್​ :

ಇದು ಸ್ಮಾರ್ಟ್​ಫೋನ್​ಗಳಿಗೆ 3 ಡಿ ನೋಟವನ್ನು ನೀಡುತ್ತದೆ. ಆದರೆ ಇದರಲ್ಲಿ ಮಾಲ್​ವೇರ್​ ವೈರಸ್​ಗಳಿದ್ದು ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನು ಕದಿಯಲಾಗುತ್ತದೆ.

ಫ್ರೀಗ್ಲೋ ಕ್ಯಾಮರಾ 1.0.0 :

ಈ ಅಪ್ಲಿಕೇಶನ್​ನಲ್ಲಿ ನೀವು ಯಾವುದೇ ಶುಲ್ಕ ಪಾವತಿಸದೇ ನಿಮ್ಮ ಫೋಟೋಗಳನ್ನು ಎಡಿಟ್​ ಮಾಡಬಹುದು . ಆದರೆ ಈ ಅಪ್ಲಿಕೇಶನ್​ ನಿಮ್ಮ ಮೊಬೈಲ್​ನಲ್ಲಿದ್ದರೆ ಕೂಡಲೇ ಅನ್​ ಇನ್​ಸ್ಟಾಲ್​ ಮಾಡಿ.


ರೇಜರ್​ ಕೀಬೋರ್ಡ್​ & ಥೀಮ್ಸ್​ :

ಇದು ಒಂದು ಕೂಲ್​ ಕೀ ಬೋರ್ಡ್ ಅಪ್ಲಿಕೇಶನ್​ ಆಗಿದ್ದು ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಡೌನ್​ಲೋಡ್​ ಮಾಡಿದ್ದಾರೆ.


ಎಮೊಜಿ ಕೀಬೋರ್ಡ್ :

GIF ಎಮೋಜಿಗಳನ್ನು ಹೊಂದಿರುವ ಕೀ ಬೋರ್ಡ್ ಅಪ್ಲಿಕೇಶನ್​ ಇದಾಗಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.


ಕೊಕೊ ಕ್ಯಾಮರಾ 51.1 :

ಇದು ನಿಮ್ಮ ಫೋಟೋಗಳಿಗೆ ರೆಟ್ರೋ ಲುಕ್​ ನೀಡುತ್ತದೆ. ಆದರೆ ಇದು ಕೂಡ ಒಂದು ನಕಲಿ ಆ್ಯಪ್​ ಆಗಿದೆ.

ಇದನ್ನು ಓದಿ : kambala srinivasa gowda : ಕಂಬಳದ ಉಸೇನ್​ ಬೋಲ್ಟ್​ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್​ ದೂರು

ಇದನ್ನೂ ಓದಿ : Samsung Smartphone Launch :ಸ್ಯಾಮ್ ಸಂಗ್ ನಿಂದ ಮತ್ತೆರಡು ಸ್ಮಾರ್ಟ್ ಫೋನ್ ಬಿಡುಗಡೆ

dangerous apps do you have these apps on your mobile then your data money will be drained away

Comments are closed.