DigiLocker : ಡಿಜಿಲಾಕರ್‌ ಬಳಸುವುದು ಹೇಗೆ ಗೊತ್ತೇ? ನಿಮ್ಮ ಅಗತ್ಯ ದಾಖಲೆಗಳನ್ನು ಹೀಗೆ ಸ್ಟೋರ್‌ ಮಾಡಿಕೊಳ್ಳಿ

ಡಿಜಿಲಾಕರ್‌(DigiLocker) ಇದು ಸರ್ಕಾರವು ನಾಗರಿಕರಿಗೆ ಅವರ ಅಧಿಕೃತ ಮಾಹಿತಿಗಳಾದ ಡ್ರೈವಿಂಗ್‌ ಲೈಸನ್ಸ್‌, ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಕಾರ್‌ ರೆಜಿಸ್ಟ್ರೇಷನ್‌ ಸರ್ಟಿಫಿಕೇಟ್‌, ಶೈಕ್ಷಣಿಕ ಪ್ರಮಾಣಪತ್ರ, ಜನ್ಮ ದಾಖಲೆ ಮುಂತಾದವುಗಳನ್ನು ಡಿಜಿಟಲ್‌ ಫಾರ್ಮನಲ್ಲಿ ಇರಿಸಿಕೊಳ್ಳುವ ಸಲುವಾಗಿ ಪ್ರಾರಂಭಿಸಿದ ಕ್ಲೌಡ್‌ ಆಧಾರಿತ ಆಪ್‌ ಆಗಿದೆ. ಇದರಿಂದ ಜನಸಾಮಾನ್ಯರು ತಮ್ಮಲ್ಲ ಅಗತ್ಯ ದಾಖಲೆಗಳನ್ನು ಎಲ್ಲಾ ಕಡೆ ಹೊತ್ತೊಯ್ಯುವುದು ತಪ್ಪುತ್ತದೆ. ಡಿಜಿಟಲ್‌ ಕಾಪಿಯನ್ನು ಎಲ್ಲಿ, ಯಾವಾಗ ಬೇಕಾದರೂ ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ. ಡಿಜಿಲಾಕರ್‌ನಲ್ಲಿರುವ ದಾಖಲೆಗಳನ್ನು ಎಲ್ಲಾ ಸರ್ಕಾರಿ ಭೌತಿಕ ದಾಖಲೆಗಳಂತೆಯೇ ಪರಿಗಣಿಸಲಾಗುವುದು.

ಡಿಜಿಲಾಕರ್‌ ಆಪ್‌ ವ್ಯಕ್ತಿಯ ಆಧಾರ್‌ ಸಂಖ್ಯೆಗೆ ಲಿಂಕ್‌ ಆಗಿದ್ದು, ಬಳಕೆದಾರರಿಗೆ ಅವರ ದಾಖಲೆಗಳನ್ನು ಸಂಗ್ರಹಿಸಲು 1ಜಿಬಿ ಸ್ಟೋರೇಜ್‌ ನೀಡುತ್ತದೆ. ಈ ಕ್ಲೌಡ್‌ ಸ್ಟೋರೇಜ್‌ ಸುರಕ್ಷಿತವಾಗಿದ್ದು 256 ಬಿಟ್‌ ಸೆಕ್ಯರ್‌ ಸಾಕೆಟ್‌ ಲೇಯರ್‌ ನಿಂದ ಎನಕ್ರಿಪ್ಟ್‌ ಆಗಿದೆ. ಅದಲ್ಲದೆ, ಬಳಕೆದಾರರು ತಮ್ಮ ದಾಖಲೆಗಳನ್ನು ಪಡೆಯಲು ಓಟಿಪಿ ಪರಿಶೀಲನೆಗೆ ಒಳಪಡಬೇಕಾಗುತ್ತದೆ.

ಡಿಜಿಲಾಕರ್‌ ನಲ್ಲಿಅಗತ್ಯ ದಾಖಲೆಗಳನ್ನು ಶೇಖರಿಸವುದು ಹೇಗೆ?
1 ಮೊದಲು ಡಿಜಿಲಾಕರ್‌ ಆಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡರೆ, ಐಒಎಸ್‌ ಬಳಕೆದಾರರು ಆಪಲ್‌ ಆಪ್‌ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇಲ್ಲವೇ ಸುಲಭವಾಗಿ ಡಿಜಿಲಾಕರ್‌ ನ ಅಧಿಕೃತ ವೆಬ್‌ಸೈಟ್‌ http://www.digilocker.gov.in/dashboard ಗೆ ಹೋಗಿ.

2 ನಿಮ್ಮ ಅಗತ್ಯ ಮಾಹಿತಿಗಳಾದ ಫೋನ್‌ ನಂಬರ್‌, ಹೆಸರು, ಜನ್ಮದಿನಾಂಕ, ಆಧಾರ್‌ ಕಾರ್ಡ್‌ ನಂಬರ್‌, ಇ–ಮೆಲ್‌ ಐಡಿ ಮುಂತಾದವುಗಳನ್ನು ಕೊಡಿ. 6 ಅಂಕಿಯ OTP ಸಲ್ಲಿಸುವುದರ ಮೂಲಕ ನಿಮ್ಮ ಮೊಬೈಲ್‌ ನಂಬರ್‌ ದೃಢೀಕರಿಸಿ.

3 ಈಗ ಯುಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ರಚಿಸಿ. ಆಧಾರ್‌ ನಂಬರ್‌ ಅನ್ನು ನೊಂದಾಯಿಸಿ, ಜೊತೆಗೆ ನಿಮ್ಮ ಆಧಾರ್‌ ಸಂಖ್ಯೆಯನ್ನು ಬಳಸಲು ಡಿಜಿಲಾಕರ್‌ಗೆ ನಿಮ್ಮ ಒಪ್ಪಿಗೆಯನ್ನು ನೀಡಿ ಮತ್ತು ಸೈನ್‌ ಅಪ್‌ ಮಾಡಿ.

4 ಆಧಾರ್‌ ನಂಬರ್‌ ಒದಗಿಸಿದ ನಂತರ ಮತ್ತೆ ನಿಮ್ಮ ನೊಂದಾಯಿತ ಮೊಬೈಲ್‌ ನಂಬರ್‌ ಮತ್ತು ಇ–ಮೇಲ್‌ಗೆ OTP ಕಳುಹಿಸಲಾಗುವುದು. UIDAI ನಿಂದ ನಿಮ್ಮ ಆಧಾರ್‌ ಮಾಹಿತಿ ಪಡೆದುಕೊಳ್ಳಲು OTP ದೃಢೀಕರಿಸಿ.

5 ಈಗ ನಿಮ್ಮ ಡಿಜಿಲಾಕರ್‌ನ ಸೆಟ್‌ಅಪ್ ಆಯಿತು ಮತ್ತು ಈಗ ನೀವು ನಿಮ್ಮ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿಕೊಳ್ಳಬಹುದು.

6 ಹೋಮ್‌ ಸ್ಕ್ರೀನ್‌ಗೆ ಹೋಗಿ ಅಲ್ಲಿ ದಾಖಲೆಗಳನ್ನು ನೀಡಿದ ಏಜನ್ಸಿಗಳನ್ನು ಅಂದರೆ ಸೆಂಟ್ರಲ್‌ ಗೌರ್ವನಮೆಂಟ್‌, ಸ್ಟೇಟ್‌ ಗೌರ್ವನಮೆಂಟ್‌, ಎಜ್ಯಕೇಷನ್‌, ಬ್ಯಾಂಕಿಂಗ್‌ ಮತ್ತು ಇನ್ಶುರೆನ್ಸ್‌ ಮುಂತಾದವುಗಳು ಸೆಲೆಕ್ಟ್‌ ಮಾಡಿ. ಉದಾಹರಣೆಗೆ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಮಿನಿಸ್ಟರಿ ಆಪ್‌ ರೋಡ್‌ ಟ್ರನ್ಸಪೋರ್ಟ್ ಮತ್ತು ಹೈವೇ ಎಂದು ಸೆಲೆಕ್ಟ್‌ ಮಾಡಿ.

7 ನಂತರ ದಾಖಲೆಗಳನ್ನು ಸೆಲೆಕ್ಟ್‌ ಮಾಡಿದರೆ ಆಪ್‌ ಸ್ವಯಂಚಾಲಿತವಾಗಿಯೇ ನಿಮ್ಮ ಹೆಸರು ಮತ್ತು ಜನ್ಮದಿನವನ್ನು ಫಿಲ್‌ ಮಾಡಿಕೊಳ್ಳುವುದು.

8 ಸೀರಿಯಲ್‌ ನಂಬರ್‌ ಎಂಟರ್‌ ಮಾಡಿ ‘ಗೆಟ್‌ ಡಾಕ್ಯುಮೆಂಟ್‌’ ಎಂದು ಕ್ಲಿಕ್ಕಿಸಿದರೆ ನಿಮ್ಮ ಪರದೆಯ ಮೇಲೆ ದಾಖಲೆಗಳು ‘ಸೇವ್‌’ ಆಗುವುದು.

ಇದನ್ನೂ ಓದಿ : WhatsApp Feature: ಇನ್ನು ಮುಂದೆ ವಾಟ್ಸ್‌ಅಪ್‌ ನಲ್ಲಿ 2 ಜಿಬಿ ಫೈಲ್‌ ಶೇರ್‌ ಮಾಡಲು ಅವಕಾಶ! ಇದು ವಾಟ್ಸ್‌ಅಪ್‌ ನ ಮುಂದಿನ ಅತಿ ದೊಡ್ಡ ಫೀಚರ್‌ ಆಗಬಹುದೇ?

ಇದನ್ನೂ ಓದಿ : Agrifi App Farmers Loan : ಕೃಷಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಿದೆ ‘ಅಗ್ರಿ ಫೈ’ ಆ್ಯಪ್; ಸಾಲ ಪಡೆಯಲು ಏನು ಮಾಡಬೇಕು?

(DigiLocker How to setup and upload documents on digilocker)

Comments are closed.