Hindu deities on bikinis : ಬಿಕನಿಗಳ ಮೇಲೆ ಹಿಂದೂ ದೇವರ ಚಿತ್ರ: ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶಗಳ ಸುರಿಮಳೆ

Hindu deities on bikinis ಸಹಾರಾ ರೇ ಸ್ವಿಮ್​​ ಹೆಸರಿನ ಬಟ್ಟೆ ಬ್ರ್ಯಾಂಡ್​ ತನ್ನ ಸ್ವಿಮ್​ ಸೂಟ್​​ಗಳ ಹೊಸ ಕಲೆಕ್ಷನ್​​ಗಳ ಮೇಲೆ ದೇವತೆಯ ಚಿತ್ರಗಳನ್ನು ಮುದ್ರಿಸುವ ಮೂಲಕ ವಿವಾದವನ್ನು ಸೃಷ್ಟಿಸಿದೆ . ಈ ಬ್ರ್ಯಾಂಡ್​​ ಸಹಾರಾ ರೇ ಒಡೆತನದಲ್ಲಿದೆ. ಬ್ರ್ಯಾಂಡ್​ ಔರಾ ಕಲೆಕ್ಷನ್​ 2022 ಎಂಬ ಹೊಸ ಸಾಲಿನ ಬಿಕನಿಗಳು ಇದಾಗಿದೆ . ಹೆಚ್ಚಾಗಿ ಥಾಂಗ್ಸ್​​ ಹಾಗೂ ಮೈಕ್ರೋ ಸ್ಟ್ರಿಂಗ್​ ಟಾಪ್​ಗಳನ್ನು ಒಳಗೊಂಡಿರುವ ಈ ಹೊಸ ಕಲೆಕ್ಷನ್​​ಗಳು ಹಿಂದೂ ದೇವತೆಗಳ ಚಿತ್ರಗಳನ್ನು ಒಳಗೊಂಡಿದೆ. ಈ ವಿವಾದಾತ್ಮಕ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿವೆ.


ಈ ಆಕ್ಷೇಪಾರ್ಹ ಉಡುಗೆಗಳ ಸಂಬಂಧ ಟ್ವೀಟರ್​ ಬಳಕೆದಾರರೊಬ್ಬರು ಟ್ವೀಟ್​ ಮಾಡಿದ್ದು, ಸೌಂದರ್ಯದ ಹೆಸರಿನಲ್ಲಿ ಬಿಕನಿ ಉಡುಗೆಗಳ ಮೇಲೆ ಹಿಂದೂ ದೇವರ ಚಿತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಸಹಾರಾ ರೇ ಈಜುಡುಗೆ ಕಂಪನಿಯ ಈ ರೀತಿ ಮಾಡುವುದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯೇ..? ದೇವತೆಗಳ ಚಿತ್ರವೇ ಬೇಕು ಎಂದಿದ್ದರೆ ಯೇಸುವಿನ ಚಿತ್ರಗಳನ್ನೇ ಪ್ರಿಂಟ್​ ಮಾಡಬಹುದಿತ್ತಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಟ್ವೀಟಿಗರು ಕೂಡ ಪಾಶ್ಚಿಮಾತ್ಯ ದೇಶಗಳ ವಸ್ತ್ರ ವಿನ್ಯಾಸಕರು ಹಿಂದೂ ದೇವರನ್ನು ಫ್ಯಾಶನ್​ ಎಂದು ಕೊಂಡಿದ್ದಾರೆ. ಹೀಗಾಗಿ ಹಿಂದೂ ದೇವತೆಗಳ ಚಿತ್ರಗಳು ಸೌಂದರ್ಯ ವಿನ್ಯಾಸದ ವಸ್ತುಗಳಾಗಿವೆ. ನಿಮ್ಮ ಸೌಂದರ್ಯದ ವಿನ್ಯಾಸವಾಗಿ ನೀವೇಕೆ ಯೇಸುವಿನ ಚಿತ್ರಗಳನ್ನು ಬಳಕೆ ಮಾಡುವುದಿಲ್ಲ..? ಎಂದು ಕೇಳಿದ್ದಾರೆ.


ಇನ್ನೊಬ್ಬ ಟ್ವೀಟ್​ ಬಳಕೆದಾರರು, ಹಿಂದೂ ಧರ್ಮವು ತಮಾಷೆಯ ವಸ್ತುವಲ್ಲ ಅಥವಾ ಅದು ಸೌಂದರ್ಯ ಶಾಸ್ತ್ರ ಕೂಡ ಅಲ್ಲ. ನಿಮ್ಮ ಬಿಕನಿಗಳ ಮೇಲೆ ಹಿಂದೂ ದೇವರ ಚಿತ್ರಗಳನ್ನು ಬಿಡಿಸಿವುದನ್ನು ನಿಲ್ಲಿಸಿ. ಅಲ್ಲದೇ ಈ ರೀತಿಯ ಕಾರ್ಯ ಎಸಗಿದ್ದಕ್ಕೆ ಕ್ಷಮೆ ಕೂಡ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ : Bolero Accident In Hunsur : ಹುಣಸೂರಿನಲ್ಲಿ ಭೀಕರ ಅಪಘಾತ: ಆರು ಮಂದಿ ದಾರುಣ ಸಾವು

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

Social media users slam clothing brand for printing images of Hindu deities on bikinis

Comments are closed.