tree fell on top of the car : ಓಮಿನಿ ಮೇಲೆ ಮರ ಬಿದ್ದು ಇಬ್ಬರು ದುರ್ಮರಣ

ರಾಮನಗರ : tree fell on top of the car : ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರಿಗೆ ತೊಂದರೆಗಳು ಹೆಚ್ಚಾಗುತ್ತಿದೆ. ರಾಮನಗರದ ಕುಂಭಾಪುರ ಗೇಟ್​ ಬಳಿಯಲ್ಲಿ ಓಮಿನಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆಯು ವರದಿಯಾಗಿದೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಓಮಿನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.


ಅಪಘಾತದಲ್ಲಿ ಮೃತಪಟ್ಟವರನ್ನು 49 ವರ್ಷದ ಸುಂದರೇಶ್​ ಹಾಗೂ 9 ವರ್ಷದ ತನ್ಮಯ್​​ ಎಂದು ಗುರುತಿಸಲಾಗಿದೆ. ಈ ಓಮಿನಿ ಕಾರಿನಲ್ಲಿ ಶೀಲಾ, ಗಾನವಿ ಹಾಗೂ ಸಾನ್ವಿ ಎಂಬವರು ಕೂಡ ಪ್ರಯಾಣಿಸುತ್ತಿದ್ದು ಘಟನೆಯಿಂದ ಇವರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.


ಮೃತ ಸುಂದರೇಶ್​ ಕುಟುಂಬವು ಇಂದು ಬೆಳಗ್ಗೆ ಮಾರುತಿ ಓಮಿನಿ ಕಾರಿನಲ್ಲಿ ಮದ್ದೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಬಳಿಕ ಮೃತದೇಹ ಹಾಗೂ ವಾಹನ ತೆರವು ಮಾಡುವವರೆಗೂ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.


ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bolero Accident In Hunsur : ಹುಣಸೂರಿನಲ್ಲಿ ಭೀಕರ ಅಪಘಾತ: ಆರು ಮಂದಿ ದಾರುಣ ಸಾವು

ಮೈಸೂರು : Bolero Accident In Hunsur :ಅವರೆಲ್ಲ ಮದುವೆ ಕಾರ್ಯಕ್ರಮಕ್ಕೆಂದು ಊರಿನಿಂದ ಹೊರಟವರು. ಮದುವೆ ಕಾರ್ಯಕ್ರಮವನ್ನು ಮುಗಿಸಿ ಎಲ್ಲರೂ ಮನೆ ಕಡೆಗೆ ವಾಪಸ್ಸಾಗುತ್ತಿದ್ದರು. ಇನ್ನೇನು ನೂರು ಕಿಲೋಮೀಟರ್​ಗಳ ಬಳಿಕ ಮನೆ ಸೇರುತ್ತೇವೆಂದುಕೊಂಡಿದ್ದರು. ಆದರೆ ವಿಧಿ ಅವರ ಬಾಳಿನಲ್ಲಿ ಬೇರೆ ಕತೆಯನ್ನೇ ಬರೆದಿತ್ತು. ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಅವರೆಲ್ಲ ಜವರಾಯನ ಅಟ್ಟಹಾಸಕ್ಕೆ ಬಾರದ ಲೋಕಕ್ಕೆ ತೆರಳಿದ್ದಾರೆ.

ಹುಣಸೂರಿನಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಬೊಲೆರೊ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನವು ಮರಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮವಾಗಿ ಆರು ಮಂದಿ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್​ ಬೆಟ್ಟದಲ್ಲಿ ಸಂಭವಿಸಿದೆ.

ಇವರೆಲ್ಲ ಹುಣಸೂರಿನಿಂದ ಮದುವೆ ಕಾರ್ಯಕ್ರಮವನ್ನು ಪೂರೈಸಿ ಮನೆಗೆ ವಾಪಸ್ಸಾಗುತ್ತಿದ್ದವರು. ಈ ದುರ್ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ಅನಿಲ್, ಸಂತೋಷ್, ವಿನುತ್, ರಾಜೇಶ್, ದಯಾನಂದ, ಬಾಬು ಎಂದು ಗುರುತಿಸಲಾಗಿದೆ. ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : psi appointment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

ಇದನ್ನೂ ಓದಿ : lemon prices hike : ಗಗನಕ್ಕೇರಿದೆ ನಿಂಬೆ ಹಣ್ಣುಗಳ ದರ : ಸಂತಸದಲ್ಲಿ ಬೆಳೆಗಾರ

tree fell on top of the car in bengaluru mysore highway

Comments are closed.